tamanvi
ರಾಜ್ಯ ವಾರ್ತೆ

‘ಶ್ರೀರಾಮ ದಶರಥನಿಗೆ ಹುಟ್ಟಿದ ಮಗನಲ್ಲ’: ಮತ್ತೆ ಭಗವಾನ್ ವಿವಾದ!! ಸೀತೆ, ಲಕ್ಷ್ಮಣನನ್ನೇ ಕೊಂದ ರಾಮ ಆದರ್ಶ ಹೇಗೆ: ಭಗವಾನ್ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ರಕಾಮೇಷ್ಠಿ ಪೂಜೆಯ ಬಳಿಕ ರಾಮ ಹುಟ್ಟುತ್ತಾನೆ. ಆ ಪೂಜೆ ಬಳಿಕ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಪುರೋಹಿತರ ಜೊತೆ ರಾಣಿ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ…

ದಾವಣಗೆರೆ ಜಿಲ್ಲೆಯ ಹರಿಹರದ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಭಗವಾನ್ ಆಡಿದ ಮಾತುಗಳಿವು.

ನೀವು ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ. ಇದೇ ವಿಚಾರವನ್ನು ನಾನು ರಾಮ ಮಂದಿರ ಏಕೆ ಬೇಕು ಎನ್ನುವ ಪುಸ್ತಕದಲ್ಲಿ ಬರೆದಿದ್ದೆ. ಶೂದ್ರನಾದ ಶಂಭೂಕ, ಪತ್ನಿ ಸೀತೆ, ಸಹೋದರ ಲಕ್ಷ್ಮಣನನ್ನೇ ರಾಮ ಸಾಯಿಸಿದ್ದಾನೆ. ಇಂಥವರು ನಮಗೆ ಅದರ್ಶ ಆಗಬೇಕಾ ಎಂದು ಪ್ರಶ್ನಿಸಿದರು. ಪಂಚಾಂಗವನ್ನು ಕೇಳೋದು ಮೊದಲು ಬಿಟ್ಟು ಬಿಡಿ, ಮೊದಲು ನಿಮ್ಮ ಮೇಲೆ‌ ನೀವು ನಂಬಿಕೆ ಬೆಳೆಸಿಕೊಳ್ಳುವುದನ್ನು ಅಭ್ಯಾಸ ಮಾಡಿ ಎಂದರು.

ಶೂದ್ರರೆಲ್ಲರೂ ಬ್ರಾಹ್ಮಣರ ಗುಲಾಮರು ಎಂದು ಮನಸ್ಮೃತಿ ಹೇಳುತ್ತೆ. ಗಾಂಧೀಜಿ ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದರೆ, ಡಾ. ಬಾಬಾ ಸಾಹೇಬ್​​ ಅಂಬೇಡ್ಕರ್​​ ಅವರು ಈ ಗುಲಾಮಗಿರಿಯಿಂದ ಜನತೆಗೆ ಮುಕ್ತಿ ಕೊಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮದುವೆ ಮಾಡಿಸುವ ಸಂದರ್ಭದಲ್ಲಿ ಪುರೋಹಿತರು ಹೇಳುವ ಮಂತ್ರದ ಅರ್ಥ ನಿಮಗೆ ಗೊತ್ತಿಲ್ಲ. ಅದು ಗೊತ್ತಾಗಿಯೇ ನನ್ನ ಮದುವೆಗೆ ಯಾವುದೇ ಪುರೋಹಿತರನ್ನು ಕರೆಸದಂತೆ ತಂದೆಯವರಿಗೆ ಹೇಳಿದ್ದೆ. ಪಠ್ಯ ಪುಸ್ತಕಗಳು ಈಗ ಸತ್ಯ ಇಲ್ಲದೆ ತನ್ನ ಸತ್ವವನ್ನು ಕಳೆದುಕೊಂಡಿವೆ. ಸ್ವಾಮಿ ವಿವೇಕಾನಂದರು ತಾವು ಬೌದ್ಧ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಬೌದ್ಧ ಧರ್ಮ ಅತ್ಯಂತ ಮಾನವೀಯವಾದ ಧರ್ಮ, ವೈಜ್ಞಾನಿಕ ಧರ್ಮವಾಗಿದೆ. ನನ್ನ ಮಾತಿನ ಬಗ್ಗೆ ಯಾರಾದ್ರು ಕೇಸ್ ಹಾಕಬೇಕು ಎಂದುಕೊಂಡರೆ ಎಲ್ಲ ಮಾಹಿತಿ ತಿಳಿದುಕೊಂಡು ಕೇಸ್ ಹಾಕಿ ಎಂದು ಇದೇ ವೇಳೆ ಭಗವಾನ್​​ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ

ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ…