tamanvi
ವಿದೇಶ

ಯುದ್ಧ ವಿರಾಮದ ಕುರಿತು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿಕೆ!!

ಈ ಸುದ್ದಿಯನ್ನು ಶೇರ್ ಮಾಡಿ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ಸಂದರ್ಭದಲ್ಲಿ, ಯುದ್ಧವನ್ನು ಕೊನೆಗೊಳಿಸಲು ಮೂರು ಪ್ರಮುಖ ಷರತ್ತುಗಳನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮುಂದಿಟ್ಟಿದ್ದಾರೆ. ನಿನ್ನೆ ಹಾಗೂ ಇಂದು ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಈ ಷರತ್ತುಗಳು ಈಡೇರಿದರೆ ಇರಾನ್ ಮಾತುಕತೆಗೆ ಮರಳಲು ಸಿದ್ಧವಿದೆ ಎಂದು ಸೂಚಿಸಿದ್ದಾರೆ ಎಂದು Aljazeera ವರದಿ ಮಾಡಿದೆ.

ಪೆಜೆಶ್ಕಿಯನ್ ಹೇಳುವಂತೆ, ಮೊದಲನೆಯದಾಗಿ ಇರಾನ್‌ನ ಸಾರ್ವಭೌಮ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಮಾನ್ಯತೆ ನೀಡಬೇಕು. ಎರಡನೆಯದಾಗಿ, ಇತ್ತೀಚಿನ ಸಂಘರ್ಷದಿಂದ ದೇಶದಲ್ಲಿ ಉಂಟಾದ ವಿನಾಶಕ್ಕೆ ಪರಿಹಾರ ಪಾವತಿಸಬೇಕು. ಮೂರನೆಯದಾಗಿ, ಭವಿಷ್ಯದಲ್ಲಿ ಇಂತಹ ಆಕ್ರಮಣಗಳು ಮರುಕಳಿಸದಂತೆ ದೃಢವಾದ ಅಂತರರಾಷ್ಟ್ರೀಯ ಭದ್ರತಾ ಖಾತರಿ ನೀಡಬೇಕು.

ಈ ಕುರಿತು ಇನ್ನೊಂದು ಕಡೆಯಿಂದ ಪ್ರತಿಕ್ರಿಯೆಗಾಗಿ ಇರಾನ್ ಕಾಯುತ್ತಿದೆ. ಆದರೆ ಎದುರಾಳಿಗಳ ಮೇಲೆ ನಂಬಿಕೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಹಲವು ಬಾರಿ ಹೇಳಿದ್ದಾರೆ.

ಇನ್ನೊಂದೆಡೆ, ಕುವೈತ್, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನಿನ ಹಲವು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಿರುವುದಾಗಿ ವರದಿಯಾಗಿದೆ. ಇದರ ಮಧ್ಯೆ ಇರಾಕ್‌ನ ಅಲ್-ಫಾ ಬಂದರಿನಲ್ಲಿ ಎರಡು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ತೈಲ ಟ್ಯಾಂಕರ್‌ಗಳನ್ನು ರಕ್ಷಿಸುವುದಾಗಿ ಘೋಷಿಸಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಬ್ಯಾರೆಲ್‌ಗೆ 200 ಡಾಲರ್ ಮಟ್ಟಕ್ಕೇರಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇಸ್ರೇಲಿ ಸೇನೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ಭಾರಿ ದಾಳಿಗಳನ್ನು ಮುಂದುವರಿಸುತ್ತಿರುವುದಾಗಿ ವರದಿಯಾಗಿದ್ದು, ಇರಾನ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳು ಇಸ್ರೇಲ್ ಮೇಲೆ ಸಂಯೋಜಿತ ದಾಳಿಗಳನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಈ ಸಂಘರ್ಷದ ಪರಿಣಾಮವಾಗಿ ಪ್ರದೇಶದಾದ್ಯಂತ ಸಾವುನೋವುಗಳು ಹೆಚ್ಚುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮುರಿದುಬಿತ್ತು ಅಮೆರಿಕ – ಇರಾನ್ ಶಾಂತಿ ಒಪ್ಪಂದ’? ಇರಾನ್ ಮುಂದಿರುವುದು ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಕೊಲ್ಲಿ ರಾಷ್ಟ್ರಗಳ ಯುದ್ಧ ಇಸ್ಲಾಮಾಬಾದ್ ಶಾಂತಿ ಒಪ್ಪಂದದಿಂದ ತಹಬದಿಗೆ ಬಂತು ಎಂದು ವಿಶ್ವವೇ…