tamanvi
ಶಿಕ್ಷಣ

ಅಕ್ಷಯ ಕೆರಿಯರ್ ಅಕಾಡೆಮಿಯ ಉಚಿತ ವಿಮಾನಯಾನ ತರಬೇತಿ ಯಶಸ್ವಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ಅಕ್ಷಯ ಕೆರಿಯರ್ ಅಕಾಡೆಮಿ ವತಿಯಿಂದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ವಿದ್ಯಾರ್ಥಿಗಳಿಗಾಗಿ “ವಿಮಾನಯಾನ” ವಿಶೇಷ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣದ ನೈಜ ಕಾರ್ಯಪದ್ಧತಿ ಮತ್ತು ಉದ್ಯೋಗಾವಕಾಶಗಳ ಅರಿವು ಮೂಡಿಸುವುದು ತರಬೇತಿಯ ಮುಖ್ಯ ಉದ್ದೇಶವಾಗಿತ್ತು.

ತರಬೇತಿಯ ಭಾಗವಾಗಿ ವಿದ್ಯಾರ್ಥಿಗಳು ಬೆಂಗಳೂರು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟಿಗೆ ಭೇಟಿ ನೀಡಿದರು. ಅಲ್ಲಿ ನಡೆಯುವ ಚೆಕ್-ಇನ್, ಬೋರ್ಡಿಗ್, ಭದ್ರತಾ ತಪಾಸಣೆ, ಗ್ರೌಂಡ್ ಹ್ಯಾಂಡ್ಲಿಂಗ್ ಹಾಗೂ ಗ್ರಾಹಕ ಸೇವೆ ಸೇರಿದಂತೆ ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ಸಮೀಪದಿಂದ ಅವಲೋಕಿಸಿದರು.

ಅಕ್ಷಯ ಕಾಲೇಜಿನ ಹಳೆ ವಿದ್ಯಾರ್ಥಿಗಳು ಈಗಾಗಲೇ ವಿಮಾನಯಾನ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ತರಬೇತುದಾರರಾದ ದೇವಿಪ್ರಸಾದ್ ವಿಮಾನ ನಿಲ್ದಾಣದ ಕಾರ್ಯವಿಧಾನ, ಸುರಕ್ಷತಾ ನಿಯಮಗಳು ಮತ್ತು ವೃತ್ತಿಪರ ನೈತಿಕತೆಗಳ ಬಗ್ಗೆ ವಿವರವಾಗಿ ತಿಳಿಸಿದರು.

ಕೆರಿಯರ್ ಡೆಸ್ಟಿನಿ ಸಂಸ್ಥೆಯ ಜಯಶ್ರೀ ಅವರು ಹಳೆ ವಿದ್ಯಾರ್ಥೀಗಳನ್ನು ಒಟ್ಟು ಸೇರಿಸಿ ಅವರೊಂದಿಗೆ ಪ್ರಸ್ತುತ ವಿದ್ಯಾರ್ಥಿಗಳೊಡನೇ ಸಂವಾದ ಮಾಡುವಂತೆ ಪ್ರೇರೆಪಿಸಿ, ಅವರ ಭವಿಷ್ಯಕ್ಕೆ ಶುಭಾಶಯ ಕೋರಿದರು.

ಬೆಂಗಳೂರಿನಿಂದ ಮಂಗಳೂರಿನವರೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವೂ ವಿದ್ಯಾರ್ಥಿಗಳಿಗೆ ನೀಡಲಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಹಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಅನುಭವಗಳಿಂದ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿ ಪಡೆದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ವಿಮಾನಯಾನ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆಯಾಯಿತು. ಒಂದು ವರ್ಷ ಹಾಗೂ ಆರು ತಿಂಗಳುಗಳ ಡಿಪ್ಲೊಮಾ ಇನ್ ಏವಿಯೇಷನ್ ಕೋರ್ಸ್ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಅಕ್ಷಯ ಕೆರಿಯರ್ ಅಕಾಡೆಮಿ, ಕೆರಿಯರ್ ಡೆಸ್ಟಿನಿ ಯ ಸಹಯೋಗದಲ್ಲಿ ಸದಾ ಮುಂದಾಗಿದೆ. ಅಕ್ಷಯ ಕ್ಯಾರಿಯರ್ ಅಕಾಡೆಮಿಯ ಸಿಬ್ಬಂದಿಗಳಾದ ಭರತ್ ವೋಲ್ತಾಜೆ ಹಾಗೂ ಯಾಮಿನಿ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…