tamanvi
ಶಿಕ್ಷಣ

ಅಕ್ಷಯ ಕಾಲೇಜು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರಿನ ಸಂತ ಫಿಲೋಮಿನಾ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ತಂಡವು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. M.Com, M.Sc ಮತ್ತು MSW ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಅಕ್ಷಯ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಪ್ರಶಸ್ತಿಗಳ ವಿವರ ಹೀಗಿದೆ:

Canvas Expression: ದ್ವಿತೀಯ ಬಹುಮಾನ – ಮಧುಸೂದನ್ ಮತ್ತು ಸುಜನ್ (ಪ್ರಥಮ ಇಂಟೀರಿಯರ್ ಡೆಕೋರೆಷನ್)

The Search Begins: ದ್ವಿತೀಯ ಬಹುಮಾನ – ಪೃಥ್ವಿರಾಜ್, ಸೃಜನ್ ಮತ್ತು ದೀಪಕ್ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್)

Glamar Gala: ಪ್ರಥಮ ಬಹುಮಾನ – ಕವನ (ತೃತೀಯ B.Com), ವಿಂದ್ಯಾಶ್ರೀ (ದ್ವಿತೀಯ B.Com)

Dice Race: ಪ್ರಥಮ ಬಹುಮಾನ – ಕೀರ್ತನ (ತೃತೀಯ ಇಂಟೀರಿಯರ್ ಡೆಕೋರೆಷನ್), ಕೀರ್ತನ ಕೃಷ್ಣ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್), ಜಿಗ್ನೆಸ್ (ಪ್ರಥಮ ಹಾಸ್ಪಿಟಾಲಿಟಿ ಸೈನ್ಸ್), ಉಜ್ವಲ್ ಮತ್ತು ಘನಶ್ಯಾಮ (ದ್ವಿತೀಯ B.Com)

ಸ್ವರ ಸಂಪದ: ಪ್ರಥಮ ಬಹುಮಾನ – ವಿಂದುಶ್ರೀ, ಶಮಿತಾ (ದ್ವಿತೀಯ B.Com), ದೇವಿಕಾ, ತ್ರಿಶಾ ಮತ್ತು ಮೋಕ್ಷ (ಪಕಳಕುಂಜ ಪ್ರಥಮ ಫ್ಯಾಷನ್ ಡಿಸೈನ್)

Dhrishyana: ಪ್ರಥಮ ಬಹುಮಾನ – ಆಕಾಶ್ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್)

Riva Ayath: ಪ್ರಥಮ ಬಹುಮಾನ – ದೀಕ್ಷಾ (ತೃತೀಯ ಫ್ಯಾಷನ್ ಡಿಸೈನ್), ಹರ್ಷಿತ್ (ದ್ವಿತೀಯ ಇಂಟೀರಿಯರ್ ಡೆಕೋರೆಷನ್)

Punar Roopam: ದ್ವಿತೀಯ ಬಹುಮಾನ – ರಾಕೇಶ್ ಮತ್ತು ಸೃಜನ್ (ದ್ವಿತೀಯ ಇಂಟೀರಿಯರ್ ಡೆಕೋರೆಷನ್)

ವಿವಿಧ ವಿಭಾಗಗಳಲ್ಲಿ ತಮ್ಮ ಅನನ್ಯ ಪ್ರತಿಭೆ, ಶ್ರಮ ಮತ್ತು ಉತ್ಸಾಹದಿಂದ ಗಮನ ಸೆಳೆದ ಅಕ್ಷಯ ಕಾಲೇಜಿನ ತಂಡವು ಅಂತಿಮವಾಗಿ ಸ್ಪರ್ಧೆಯ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಅಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಲಲಿತಾ ಕಲಾ ಸಂಘದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…