tamanvi
ಅಪರಾಧ

ಫಾರ್ಮಸಿ ವಿದ್ಯಾರ್ಥಿ ಕಿರಣ್ ಕಠಾರದಲ್ಲಿ ನದಿಪಾಲು!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಉಪ್ಪಿನಂಗಡಿ ಬಳಿಯ ಬೆಳ್ಳಿಪ್ಪಾಡಿ ಕಠಾರ ಕುಮಾರಧಾರ ನದಿಗೆ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಗದಗ ಮೂಲದ ಕಿರಣ್ ಎಂದು ಗುರುತಿಸಲಾಗಿದೆ. ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಫಾರ್ಮಸಿ ವಿದ್ಯಾರ್ಥಿ ಎಂದು ಹೇಳಲಾಗಿದೆ.

ನಾಲ್ಕು ಮಂದಿ ಈಜಲೆಂದು ನದಿಗೆ ಬಂದಿದ್ದರು. ಇದರಲ್ಲಿ ವಿದ್ಯಾರ್ಥಿ ಕಿರಣ್ ಅವರು ಈಜಾಟದ ಸಂದರ್ಭ ಕಯದೊಳಗೆ ಬಿದ್ದಿದ್ದರು ಎಂದು ಹೇಳಲಾಗಿದೆ.

ಈ ಕಯದೊಳಗೆ ಇಂತಹ ಹಲವು ಘಟನೆಗಳು ನಡೆದ ಹಿನ್ನೆಲೆಯಲ್ಲಿ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಇದನ್ನು ನಿರ್ಲಕ್ಷಿಸಿ, ವಿದ್ಯಾರ್ಥಿಗಳು – ಯುವಕರು ನೀರಿಗೆ ಇಳಿಯುತ್ತಿರುವ ಘಟನೆ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 118