tamanvi
ಅಪರಾಧ

ಬೆಳ್ತಂಗಡಿ: ಶಾಲಾ ಬಾಲಕಿಯ ಅಪಹರಣ ಯತ್ನ – ದೂರು!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಶಾಲಾ ಬಾಲಕಿಯೋರ್ವಳನ್ನು ಇಂದು ಬೆಳಿಗ್ಗೆ ಅಪಹರಣ ನಡೆಸಲು ವಿಫಲ ಯತ್ನ ನಡೆಸಿದ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ.

maithri

ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದಿರುವ ಬಗ್ಗೆ ವರದಿಯಾಗಿದೆ. ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಬಾಲಕಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ. ಪ್ರತಿರೋಧ ತೋರಿಸಿದಾಗ ಚಾಕುವಿನಿಂದ ಎಡಕೈಗೆ ನಾಲ್ಕು ಬಾರಿ ಇರಿದಿದ್ದಾರೆ. ಆರೋಪಿಗಳು ಮುಖ ಮುಚ್ಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕಿಯು ತನ್ನ ಪೋಷಕರೊಂದಿಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117