tamanvi
ಅಪರಾಧ

ಕಾಶಿ ವಿಶ್ವನಾಥನ ಮಂದಿರದಲ್ಲಿ ನಕಲಿ ಅರ್ಚಕರು! ಭಕ್ತರನ್ನು ನಂಬಿಸಿ ಹಣ ಪಡೆಯುತಿದ್ದ ಅರ್ಚಕರೆಲ್ಲರೂ ಅರೆಸ್ಟ್

D_shiva_bhat
ಸುಲಭವಾಗಿ ದೇವರ ದರ್ಶನ, ಪೂಜೆ ಮಾಡಿಸುತ್ತೇವೆ ಎಂದು ಭಕ್ತರಿಂದ ವಸೂಲಿ ಮಾಡುತ್ತಿದ್ದ 21 ನಕಲಿ ಅರ್ಚಕರನ್ನು ಕಾಶಿ ವಿಶ್ವನಾಥ ದೇಗುಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ವಾರಾಣಸಿ: ಸುಲಭವಾಗಿ ದೇವರ ದರ್ಶನ, ಪೂಜೆ ಮಾಡಿಸುತ್ತೇವೆ ಎಂದು ಭಕ್ತರಿಂದ ವಸೂಲಿ ಮಾಡುತ್ತಿದ್ದ 21 ನಕಲಿ ಅರ್ಚಕರನ್ನು ಕಾಶಿ ವಿಶ್ವನಾಥ ದೇಗುಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

maithri

ಸುಲಭವಾಗಿ ದೇವರ ದರ್ಶನ, ಪೂಜೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಭಕ್ತರಿಗೆ ನಂಬಿಸಿ, ಹಣ ಪಡೆಯುತ್ತಿದ್ದ ಹಾಗೂ ದೇವಾಲಯದ ಆವರಣದ ಬಳಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋದ ಹಿನ್ನೆಲೆಯಲ್ಲಿ 21 ನಕಲಿ ಅರ್ಚಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಲವು ದಿನಗಳಿಂದ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಶಾಶ್ವಮೇಧ ಹಾಗೂ ಚೌಕ ಪೊಲೀಸ್ ಠಾಣೆ ಪೊಲೀಸರನ್ನು ಒಳಗೊಂಡ ಜಂಟಿ ತಂಡವನ್ನು ರಚನೆ ಮಾಡಲಾಗಿತ್ತು. ತನಿಖೆ ವೇಳೆ ದಶಾಶ್ವಮೇಧ ಠಾಣೆ ಪೊಲೀಸರಿಗೆ 15 ಜನರು ಹಾಗೂ ಚೌಕ ಠಾಣೆ ಪೊಲೀಸರಿಗೆ 6 ಜನರು ನಕಲಿ ಪೂಜಾರಿಗಳು ಸಿಕ್ಕಿಬಿದ್ದಿದ್ದಾರೆ.

ದೇಗುಲದಲ್ಲಿ ನಮ್ಮ ತಂಡ ಕಾರ್ಯಾಚರಣೆ ಮುಂದುವರೆಸಿದೆ. ಇಂತಹ ನಕಲಿ ಅರ್ಚಕರನ್ನು ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117