ಪುತ್ತೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಫೆ. 26ರಂದು ಪುತ್ತೂರಿನ ಹಲವು ಕಡೆ ವಿದ್ಯುತ್ ನಿಲುಗಡೆ ಇರಲಿದೆ.
110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಬಕ, ನಗರ, ಬಲ್ನಾಡು (ಕೆದಿಲ), ದರ್ಬೆ, ಕೆಮ್ಮಾಯಿ (ಇಂಡಸ್ಟ್ರಿಯಲ್), ವಾಟರ್ ಸಪ್ಪೆ, ಉಪ್ಪಿನಂಗಡಿ ಓಲ್ಡ್ ಹಾಗೂ ರಾಮಕುಂಜ ಫೀಡರ್‌ಗಳಲ್ಲಿ ಫೆಬ್ರವರಿ 26 ರಂದು ಪೂರ್ವಾಹ್ನ 09:30 ರಿಂದ ಅಪರಾಹ್ನ 05:30 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಪ್ರಕಟಣೆ ತಿಳಿಸಿದೆ.
ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ನಗರ, ಬನ್ನೂರು, ಕೊಡಿಪ್ಪಾಡಿ, ಪಡ್ನೂರು, ಮುರ, ಕಬಕ, ವಿದ್ಯಾಪುರ ಸೇರಿದಂತೆ ಕೆಎಸ್‌ಆರ್‌ಟಿಸಿ ಪ್ರದೇಶ, ಟ್ಯಾಕ್ಸಿ ಸ್ಟ್ಯಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್ಸ್ ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರಸ್ತೆ, ಎ.ಪಿ.ಎಂ.ಸಿ ರಸ್ತೆ, ಸಾಮೆತ್ತಡ್ಕ, ಎಂ.ಟಿ ರಸ್ತೆ, ಚಿಕ್ಕಪುತ್ತೂರು, ಮಡಿವಾಳಕಟ್ಟೆ, ಬಲ್ನಾಡು, ನವನಗರ, ಪಡೀಲು, ಸಾಲ್ಮರ, ಬೀರ್ನಹಿತ್ತು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು, ಹಲಂಗ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು, ಚಿಕ್ಕಮುನ್ನೂರು, ಬೆಳ್ಳಿಪಾಡಿ, ಹಿರೇಬಂಡಾಡಿ, ಕೊಯಿಲ ಹಾಗೂ ರಾಮಕುಂಜ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
























