ಧಾರ್ಮಿಕ

ಮಾ.2 ರಿಂದ ರಂಜಾನ್ ಉಪವಾಸ ಆರಂಭ

ಪವಿತ್ರ ರಂಝಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ ಮಾ.2ರಿಂದ ರಾಜ್ಯಾದ್ಯಂತ ಉಪವಾಸ ವ್ರತ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮನ್ಸೂದ್ ಇಮ್ರಾನ್ ರಶಾದಿ ತಿಳಿಸಿದರು.

ರುದ್ರಗಿರಿ: ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿ ತಾಳಮದ್ದಳೆ

ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು.

ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯಿಂದ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ | ಅಹೋರಾತ್ರಿ ನಡೆದ…

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯ ಸಹಕಾರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರ ನಡೆಯಿತು.

ಬನ್ನೂರು ಸ್ಫೂರ್ತಿ ಯುವ ಸಂಸ್ಥೆಯ 35ನೇ ವಾರ್ಷಿಕೋತ್ಸವ | ಧರ್ಮ – ಭಕ್ತಿ ಧಾರ್ಮಿಕ ಕೇಂದ್ರದ ಅಡಿಪಾಯ:…

ಬನ್ನೂರು ಸ್ಫೂರ್ತಿ ಯುವಕ – ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾದ 35ನೇ ವಾರ್ಷಿಕೋತ್ಸವ ಇತ್ತೀಚೆಗೆ ಬನ್ನೂರು ಶನೀಶ್ವರ ಸನ್ನಿಧಿಯ ಸ್ಫೂರ್ತಿ ವೇದಿಕೆಯಲ್ಲಿ ಜರಗಿತು.

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.

ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವ, ದರ್ಶನ ಬಲಿ |ಇಂದು ರಾತ್ರಿ ಕಲ್ಲುರ್ಟಿ, ಗುಳಿಗ…

ಬನ್ನೂರಿನ ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.22ರಂದು ರಾತ್ರಿ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.

ಖ್ಯಾತ ಗಾಯಕಿ ಎಸ್.ಜಾನಕಿ ಕುಕ್ಕೆ ಸುಬ್ರಮಣ್ಯಕ್ಕೆ  ಭೇಟಿ

ಕುಕ್ಕೆ ಸುಬ್ರಮಣ್ಯಕ್ಕೆ ಖ್ಯಾತ ಗಾಯಕಿ ಎಸ್.ಜಾನಕಿ ಭೇಟಿ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹಸ್ವಾಮಿ ಮಠಕ್ಕೆ ಭೇಟಿ ನೀಡಿದ ಜಾನಕಿಯವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇಂದು ನಾಳೆ ಕರ್ಮಲ ಜಾತ್ರಾ ಮಹೋತ್ಸವ | ಮೈಯಲ್ಲಿ ಬಂದ ಕಟೀಲಿನ ತಾಯಿ, ನೀರಿನ ರೂಪದಿ ನೆಲೆಸಿದ ದುರ್ಗೆ:…

ಬನ್ನೂರಿನ ಕರ್ಮಲದಲ್ಲಿ ನೆಲೆನಿಂತಿರುವ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 22 ಹಾಗೂ 23ರಂದು ಭಕ್ತಿ – ಸಡಗರದಿಂದ ನಡೆಯಲಿದೆ

ಸಂಪ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಡಾ. ಕೆ. ಸುರೇಶ್ ಪುತ್ತೂರಾಯ

ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.