ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಹಿತ 15 ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ದೇವಸ್ಥಾನದ ಜಾಗದಲ್ಲಿದ್ದ ರಾಜೇಶ್ ಬನ್ನೂರು ಅವರ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್)ಯ 324ರಡಿ ನಷ್ಟ ಉಂಟು ಮಾಡಿರುವುದು ಹಾಗೂ ಪ್ರಾಣಿ ಹತ್ಯೆಗೆ ಬಿ.ಎನ್.ಎಸ್. 325 ರಡಿ ಪ್ರಕರಣ ದಾಖಲಾಗಿದೆ. ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ವಿನಯ್ ಸುವರ್ಣ ಸಹಿತ 15 ಮಂದಿ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.
ರಾಜೇಶ್ ಬನ್ನೂರು ನೀಡಿದ ದೂರಿನಲ್ಲಿ, 20 ಗ್ರಾಂ ಚಿನ್ನ ನಾಪತ್ತೆಯಾಗಿದ್ದು, 2 ನಾಯಿ ಸತ್ತು ಹೋಗಿರುವುದಾಗಿ ದೂರಲಾಗಿದೆ. ಸುಮಾರು 25 ಲಕ್ಷ ರೂ. ನಷ್ಟ ಉಂಟು ಮಾಡಿರುವುದಾಗಿ ತಿಳಿಸಲಾಗಿದೆ.