Gl jewellers
ಧಾರ್ಮಿಕ

ರಾಜೇಶ್ ಬನ್ನೂರು ಮನೆ ತೆರವು ವಿವಾದ | ತೆರವಾದ ಮನೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು; ಸ್ಥಳಕ್ಕಾಗಮಿಸಿದ ಪೊಲೀಸರು

ಪುತ್ತೂರು: ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು ಅವರ ಮನೆಯನ್ನು ಮಂಗಳವಾರ ರಾತ್ರಿ ತೆರವು ಮಾಡಿದ್ದು, ಬುಧವಾರ ಬೆಳಿಗ್ಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು ಅವರ ಮನೆಯನ್ನು ಮಂಗಳವಾರ ರಾತ್ರಿ ತೆರವು ಮಾಡಿದ್ದು, ಬುಧವಾರ ಬೆಳಿಗ್ಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ರಾತ್ರಿ ಸುಮಾರು 2.30ರಿಂದ 3 ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಮಂಗಳೂರಿನ ಜಾತ್ರೆಗೆ ತೆರಳಿದ್ದ ವೇಳೆ ಹಿಂಭಾಗದಿಂದ ಜೆಸಿಬಿ ಮೂಲಕ ಮನೆಯನ್ನು ದೂಡಿ ಹಾಕಲಾಗಿದೆ. ಇದನ್ನು ಪ್ರಶ್ನಿಸಲು ಮುಂದಾದಾಗ ಮಾಸ್ಕ್ ಧರಿಸಿದ್ದ ಕೆಲವರು ತನ್ನನ್ನು ಹಿಡಿದುಕೊಂಡರು. ಬಲಾತ್ಕಾರವಾಗಿ ತನ್ನನ್ನು ಹಿಡಿದುಕೊಂಡಿದ್ದು, ಕೈ ಮೇಲೆ ಪರಚಿದ ಗಾಯಗಳಿವೆ ಎಂದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ರಾಜೇಶ್  ಬನ್ನೂರು ವಿವರಿಸಿದರು.

ಸ್ಥಳದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದು, ಎಫ್.ಐ.ಆರ್. ದಾಖಲಿಸುವಂತೆ ಒತ್ತಾಯಿಸಿದರು. ಜಾಗ ಬಿಟ್ಟುಕೊಡಲು ನಮ್ಮದೇನು ತಕರಾರಿಲ್ಲ. ಆದರೆ ಒಂದು ಮಾತನ್ನು ಹೇಳದೇ, ಗೂಂಡಾಗಳ ರೀತಿ ಮನೆಯನ್ನು ದೂಡಿ ಹಾಕುವುದು ಎಂದರೆ ಏನರ್ಥ. ಗ್ಯಾಸ್ ಸಿಲಿಂಡರನ್ನು ತೋಡಿಗೆ ಎಸೆಯಲಾಗಿದೆ. ಮನೆ ಒಳಗಡೆಯಿದ್ದ ಕಪಾಟುಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಒಂದು ವೇಳೆ ಮನೆಯವರು ಒಳಗಡೆ ಇದ್ದಿದ್ದರೆ, ಅವರನ್ನು ಕೊಂದು ಹಾಕುತ್ತಿದ್ದರು. ಹಾಗಾಗಿ ಎಫ್.ಐ.ಆರ್. ದಾಖಲಿಸಲೇ ಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭ ಮಾತನಾಡಿದ ಪೊಲೀಸ್ ನಿರೀಕ್ಷಕ, ಜಾಗ ದೇವಸ್ಥಾನದ ಹೆಸರಿನಲ್ಲಿರುವುದರಿಂದ ಆಡಳಿತಾಧಿಕಾರಿಯವರನ್ನು ಬರಲು ತಿಳಿಸಿದ್ದೇನೆ. ಇನ್ನೊಂದು ಗಂಟೆಯಲ್ಲಿ ಬರುವುದಾಗಿ ತಿಳಿಸಿದ್ದಾರೆ. ಅವರು ಬಂದ ತಕ್ಷಣ ಮಾಹಿತಿ ಪಡೆದುಕೊಂಡು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದರಿಂದ ಆಕ್ರೋಶಿತರಾದ ಬಿಜೆಪಿಗರು, ಜಾಗಕ್ಕೂ ಮನೆ ದೂಡಿ ಹಾಕಿರುವುದಕ್ಕೂ ಸಂಬಂಧವೇ ಇಲ್ಲ. ಮನೆ ದೂಡಿ ಹಾಕಿರುವುದು ಕ್ರಿಮಿನಲ್ ಪ್ರಕರಣ ಎಂದು ವಾದಿಸಿದರು.

ಈ ಸಂದರ್ಭ ಆಕ್ರೋಶಿತರಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪೊಲೀಸರಿಗೆ ತಿಳಿಸಿಯೇ ಈ ರೀತಿಯ ಗೂಂಡಾ ವರ್ತನೆ ತೋರಿಸಿದ್ದಾರೆ. ಹಾಗಾಗಿ ಪೊಲೀಸರು ಹೀಗೆ ಮಾತನಾಡುತ್ತಿದ್ದಾರೆ ಎಂದರು.

ಸಮಾಧಾನಿಸಿದ ಪೊಲೀಸರು, ಇಂತಹ ಆರೋಪಗಳೆಲ್ಲಾ ಸರಿಯಲ್ಲ. ಪೊಲೀಸರು ನ್ಯಾಯಯುತವಾದ ಕ್ರಮವನ್ನೇ ಕೈಗೊಳ್ಳುತ್ತೇವೆ. ಎಫ್.ಐ.ಆರ್. ದಾಖಲಿಸುವ ಮೊದಲು ಒಂದಷ್ಟು ಪರಿಶೀಲನೆ ನಡೆಸುವುದು ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಗದೀಶ್ ಶೆಣೈ ಅವರು, ಮುಂದೆ ಪೊಲೀಸ್ ಠಾಣೆಗೂ ಇದೇ ಪರಿಸ್ಥಿತಿ ಬರಲಿದೆ. ದೇವಳ ದ್ವಾರದ ಬಳಿಯಿರುವ ಪೊಲೀಸ್ ಠಾಣೆಗೆ ಹಿನ್ನೆಲೆ ಇದೆ. ಬ್ರಿಟಿಷರ ಕಾಲದಿಂದಲೂ ಈ ಠಾಣೆಯಿದ್ದು, ದೇವಳದಿಂದಲೂ ಪ್ರತಿ ಜಾತ್ರೋತ್ಸವಕ್ಕೆ ಗೌರವ ನೀಡಲಾಗುತ್ತದೆ ಎನ್ನುವುದನ್ನು ಮರೆಯದಿರಿ. ಗೂಂಡಾಗಳ ರೀತಿ ಏಕಾಏಕೀ ಬಂದು ಮನೆ, ಅಂಗಡಿಗಳನ್ನು ಒಡೆದುಹಾಕುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ…