ಪ್ರಚಲಿತ

ಕಾಸರಗೋಡು : ಪ್ರಸಿದ್ಧ ವಾಸ್ತುಶಿಲ್ಪಿ ಮಾಯಿಪ್ಪಾಡಿ ತುಕಾರಾಮ ಆಚಾರ್ಯ ನಿಧನ

GL
ಗಡಿನಾಡು ಕಾಸರಗೋಡಿನ ಪ್ರಸಿದ್ಧ ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ಮಾಯಿಪ್ಪಾಡಿ (86) ಇಂದು ಬೆಳಗ್ಗೆ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಗಡಿನಾಡು ಕಾಸರಗೋಡಿನ ಪ್ರಸಿದ್ಧ ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ಮಾಯಿಪ್ಪಾಡಿ (86) ಇಂದು ಬೆಳಗ್ಗೆ ನಿಧನರಾದರು.

chennai-shopping
maithri

ಆನೆಗುಂದಿ ಕುಲಗುರು ಪೀಠದ ಶ್ರದ್ಧಾವಂತ ಶಿಷ್ಯರಾಗಿದ್ದ ಇವರು ಆನೆಗುಂದಿ ಮಹಾಸಂಸ್ಥಾನದ ಪುನರುತ್ಥಾನಕ್ಕೆ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಜಗದ್ಗುರುಗಳವರ ಪೂರ್ವಾಶ್ರಮದ ಜತೆ ನಿಕಟ ಸಂಪರ್ಕವಿದ್ದ ಇವರು ಕುಲ ಗುರುಪೀಠಪುನರುತ್ಥಾನದ ಯೋಜನೆಯ ಸಾಕಾರಕ್ಕಾಗಿ ಅವಿರತವಾಗಿ ಪ್ರಯತ್ನಿಸಿದವರು

ಕುಲಗುರು ಪೀಠ ಅಚಲ ಶ್ರದ್ಧೆಯನ್ನಿರಿಸಿ ಪುನರುತ್ಥಾನ ಯೋಜನೆಯಲ್ಲಿ ಮುಂಚೂಣಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಬೆಳಗುತ್ತಿ ಮಠ ಪುನ‌ರ್ ನಿರ್ಮಾಣ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಮಹಾಸಂಸ್ಥಾನದಿಂದ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು.ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆಡಳಿತ ಸಮಿತಿ,ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶ ಸಮಿತಿಯಲ್ಲಿ ವಿವಿಧ ಪದಾಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಇವರು ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.

ವಾಸ್ತುಶಿಲ್ಪಿಯಾಗಿ ಹಲವು ಮಧೂರು ಶ್ರೀ ಕಾಳಿಕಾಂಬಾ ಮಠ ಸೇರಿದಂತೆ ನೂರಾರು ದೇವಸ್ಥಾನ,ಭಜನಾ ಮಂದಿರ ದೈವಸ್ಥಾನಗಳ ವಾಸ್ತುಶಿಲ್ಪಿಯಾಗಿ ಖ್ಯಾತಿ ಹೊಂದಿದ್ದರು. ಇವರು ಎಂ ತುಕಾರಾಮ ಆಚಾರ್ಯ ಇವರ ಪತ್ನಿ ಸರೋಜಿನಿ,ಪುತ್ರರಾದ ಲೋಕೇಶ್ ಆಚಾರ್ಯ ಎಂ.ಹರೀಶ್ ಆಚಾರ್ಯ,ಉದಯಕುಮಾರ್,ಪುತ್ರಿ ಭುವನೇಶ್ವರಿ,ಸೊಸೆಯಂದಿರಾದ ಸುಮತಿ, ಶೋಭಿತ, ಇಂದು ಹಾಗೂ ಮೊಮ್ಮಕ್ಕಳನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts