tamanvi
ಪ್ರಚಲಿತ

ಯುದ್ಧ ಸನ್ನದ್ಧತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕರೆ! ಸೈನಿಕ ತರಬೇತಿ ವೇಳೆ ಪುತ್ರಿ ಜೊತೆ ಟ್ಯಾಂಕ್ ಏರಿದ ಕಿಮ್ ಜಾಂಗ್ ಉನ್

ಈ ಸುದ್ದಿಯನ್ನು ಶೇರ್ ಮಾಡಿ

ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಪುತ್ರಿಯೊಂದಿಗೆ ಟ್ಯಾಂಕ್ ಏರಿ ಸವಾರಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸೇನಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಸರಣಿ ಯುದ್ಧ ತರಬೇತಿಗಳನ್ನು ನಡೆಸುತ್ತಿದ್ದು, ಈ ವೇಳೆ ಕಿಮ್ ಮತ್ತು ಅವರ ಪುತ್ರಿ ಕಾಣಿಸಿಕೊಂಡಿರುವುದು ಜಾಗತಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಗುರುವಾರ ನಡೆದ ಟ್ಯಾಂಕ್ ಘಟಕಗಳು ಮತ್ತು ಪದಾತಿ ದಳದ ಗುಂಡಿನ ದಾಳಿ ತರಬೇತಿಯನ್ನು ಕಿಮ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಿಮ್ ಮತ್ತು ಅವರ ಪುತ್ರಿ ಕಿಮ್ ಜೂ ಏ ಇಬ್ಬರೂ ಕಪ್ಪು ಚರ್ಮದ ಜಾಕೆಟ್ ಧರಿಸಿದ್ದರು. ಕಿಮ್ ಟ್ಯಾಂಕ್‌ನ ಮೇಲೆ ಕುಳಿತು ನಗುತ್ತಿದ್ದರೆ, ಅವರ ಪುತ್ರಿ ಟ್ಯಾಂಕ್‌ನ ಹ್ಯಾಚ್‌ನಿಂದ ಹೊರಬಂದು ತರಬೇತಿಯನ್ನು ಕುತೂಹಲದಿಂದ ಗಮನಿಸುತ್ತಿರುವ ಫೋಟೋಗಳನ್ನು ಅಲ್ಲಿನ ಅಧಿಕೃತ ಸುದ್ದಿ ಸಂಸ್ಥೆ (KCNA) ಬಿಡುಗಡೆ ಮಾಡಿದೆ.

ಕಳೆದ ಒಂದು ವರ್ಷದಿಂದ ಕಿಮ್ ಜೂ ಏ ತನ್ನ ತಂದೆಯ ಜೊತೆ ಪ್ರಮುಖ ಸೇನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಹೆಚ್ಚಾಗಿದೆ. ಇದನ್ನು ಗಮನಿಸಿರುವ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು, ಕಿಮ್ ತನ್ನ 13 ವರ್ಷದ ಮಗಳನ್ನೇ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿವೆ. ಕಿಮ್ ತನ್ನ ಮಗಳನ್ನು “ಅತ್ಯಂತ ಪ್ರೀತಿಯ” ಮತ್ತು “ಗೌರವಾನ್ವಿತ” ಮಗು ಎಂದು ಸಾರ್ವಜನಿಕವಾಗಿ ಕರೆದಿದ್ದಾರೆ.

“ನಮ್ಮ ಸೈನ್ಯವು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸಿದ್ಧವಾಗಿರಬೇಕು” ಎಂದು ಕಿಮ್ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ವಾರವಷ್ಟೇ ಅವರು ಕ್ಷಿಪಣಿ ಉಡಾವಣೆ ಮತ್ತು ಪಿಸ್ತೂಲ್ ಶೂಟಿಂಗ್ ತರಬೇತಿಯಲ್ಲಿ ಭಾಗವಹಿಸಿದ್ದರು. ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ 11 ದಿನಗಳ ಜಂಟಿ ಸೇನಾ ಸಮರಾಭ್ಯಾಸವು ತನ್ನ ದೇಶದ ಮೇಲೆ ದಾಳಿ ಮಾಡುವ ಸಂಚು ಎಂದು ಉತ್ತರ ಕೊರಿಯಾ ಕಿಡಿಕಾರಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…