ಮಂಗಳೂರು: ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವ ಆಚರಣೆ ಪ್ರಯುಕ್ತ ಮಂದಾರ್ತಿ ಸಮೀಪದ ಬೂದಾಡಿಯಲ್ಲಿ ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಹೊಸ ಮನೆಯ ಹಸ್ತಾಂತರ ಜುಲೈ 6ರಂದು ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ, ಮನೆ ಹಸ್ತಾಂತರ ಮಾಡಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದಿಂದ ಬದುಕು ಸಾಗಿಸುವವರು ವಿಶ್ವಕರ್ಮ ಸಮುದಾಯದವರು. ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಇದೀಗ ಕಡುಬಡವರ ರಕ್ಷಣೆಯ ಕಾರ್ಯ ಮಾಡಿರುವುದು ಶ್ಲಾಘನೀಯ. ಇದು ಸಮಾಜಕ್ಕೆ ಮಾದರಿ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷರಾದ ಪಿ.ಉಪೇಂದ್ರ ಆಚಾರ್ಯ ಮಾತನಾಡಿ, ಗಣೇಶ್ ಆಚಾರ್ಯ ದಂಪತಿಗಳ ಮನೆ ಪೂರ್ತಿ ಬೀಳುವ ಸ್ಥಿತಿಯಲ್ಲಿದ್ದ ಸಂದರ್ಭ ನಮ್ಮ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಒಬ್ಬ ವ್ಯಕ್ತಿಗೆ ಸಹಾಯ ಮಾಡಿದರೆ ಜಗತ್ತು ಬದಲಾಗದೇ ಇರಬಹುದು. ಆದರೆ ಆ ವ್ಯಕ್ತಿಯ ಜಗತ್ತೇ ಬದಲಾಗುತ್ತದೆ. ಈ ದೃಷ್ಟಿಕೋನದಿಂದ ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಮುತುವರ್ಜಿಯಿಂದ ರೂ.760000 ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಿ, ಇದೀಗ ಹಸ್ತಾಂತರ ಮಾಡಲಾಗಿದೆ ಎಂದರು.
ಕುAದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸ್ವಂತ ಸೂರನ್ನು ನಿರ್ಮಿಸಲಾಗದವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿ ಕೊಟ್ಟಿರುವುದು ದೇವರು ಮೆಚ್ಚುವ ಕೆಲಸ. ಲಾಭದಲ್ಲಿ ನಿರಾಶ್ರಿತರಿಗೆ ಸಹಾಯ ಹಸ್ತವಲ್ಲದೆ ಮನೆ ನಿರ್ಮಾಣದಂತಹ ಕೆಲಸ ಕೈಗೆತ್ತಿರುವುದು ಶ್ಲಾಘನೀಯವೆಂದರು.
ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ, ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಬಾÊ ವಂಡಾರು ಶುಭ ಹಾರೈಸಿದ್ದರು.
ಗಣ್ಯರು ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ವನಮಹೋತ್ಸವ ಆಚರಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ಸಸಿಗಳನ್ನು ವಿತರಣೆ ಮಾಡಿದರು. ಮನೆ ನಿರ್ಮಿಸಿದ ಮಧುಕರ ಆಚಾರ್ಯ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಹೊಸ ಮನೆ ನಿರ್ಮಾಣ ಮಾಡಿ ಕೊಟ್ಟ ಸಂಸ್ಥೆಯ ಆಡಳಿತ ಮಂಡಳಿಗೆ ಲಲಿತಾ ಆಚಾರ್ಯ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ನಿವಾಸಕ್ಕೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ಶ್ಲಾಘಿಸಿದರು. ನಿರ್ದೇಶಕ ಕೆ. ಯಜ್ಞೇಶ್ವರ ಆಚಾರ್ಯ, ವಿ. ಜಯ ಆಚಾರ್, ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ, ಜ್ಯೋತಿ ಎಂ.ವಿ., ರಮೇಶ್ ರಾವ್ ಯು.ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್. ಉಪಸ್ಥಿತರಿದ್ದರು.
ಮನೆಯ ಫಲಾನುಭವಿಗಳಾದ ಗಣೇಶ್ ಆಚಾರ್ಯ ಮತ್ತು ಲಲಿತಾ ದಂಪತಿಗಳಿಗೆ ಮನೆಯನ್ನು ಹಸ್ತಾಂತರ ಮಾಡಲಾಯಿತು.
ನಿರ್ದೇಶಕರಾದ ವೈ.ವಿ. ವಿಶ್ವಜ್ಞಮೂರ್ತಿ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎ. ಆನಂದ ಆಚಾರ್ಯ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಶಾಖಾವ್ಯವಸ್ಥಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ, ಪ್ರಭಾರ ಶಾಖಾ ವ್ಯವಸ್ಥಾಪಕಿ ಪೂರ್ಣಿಮಾ ಎಸ್. ಆಚಾರ್ಯ ವಂದಿಸಿದರು.
ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರ | ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವ ಪ್ರಯುಕ್ತ ಯೋಜನೆ | ದುಡಿಮೆ, ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ವಿಶ್ವಕರ್ಮ ಸಮುದಾಯ: ಸಂಸದ ಕೋಟ
What's your reaction?
- 1394c
- 1294cc
- 12ai technology
- 12ajjavara
- 12alwas
- 12apology
- 12artificial intelegence
- 11avg
- 11belthangady-provocative-speech-case-conviction
- 11bihar minister
- 11bjp
- 11bjp leader
- 10bjp national president
- 10bt ranjan
- 10co-operative
- 10coastal
- 10Court convicts accused in provocative speech case
- 10crime
- 9crime news
- 9cyclothon
- 9darmasthala
- 9death news
- 9dust bin
- 8education
- 8fraud
- 8gl
- 8gods own country
- 8gold
- 8google for education
- 7independence
- 7jewel
- 7jewellers
- 7jnana vikasa
- 7karnataka state
- 6Kedila
- 6kerala village
- 6kukke - kollur temple
- 6lokayuktha
- 6lokayuktha raid
- 6Mangalore
- 5manipal
- 5minister krishna bairegowda
- 5mla ashok rai
- 5mohan alwa
- 5mudubidre
- 5nidana news
- 4nirvathu mukku
- 4nitin nabin
- 4police
- 4ptr tahasildar
- 4puttur
- 3puttur news
- 3puttur tahasildar
- 3republic
- 3revenue
- 3revenue department
- 3revenue minister
- 2school
- 2senior citizen
- 2silver
- 2society
- 2sowmya
- 1students
- 1tahasildar
- 1tahasildar absconded
- 1teachers
- 1tour
- 1trending
- 0udupi
- 0wastage
Related Posts
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ₹62.50 ಏರಿಕೆ; ಹೊಸ ದರ ಇಂದಿನಿಂದ ಜಾರಿ
ನವದೆಹಲಿ: ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ…
ಗಣಿತ–ವಿಜ್ಞಾನ ಮೇಳ ಹಾಗೂ ಕ್ರೀಡಾಕೂಟದಲ್ಲಿ ಅಂಬಿಕಾ ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ
ಪುತ್ತೂರು: ವಿದ್ಯಾ ಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯ ಬಾಲ ಭಾರತಿ ಸಮೂಹ ಶಿಕ್ಷಣ…
ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ
ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…
ನಾಳೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ ಸಮಾರಂಭ | ಅಧ್ಯಕ್ಷರಾಗಿ ಶ್ರೀಕಾಂತ್, ಕಾರ್ಯದರ್ಶಿಯಾಗಿ ಸುಕನ್ಯಾ, ಸಭಾಪತಿಯಾಗಿ ಶ್ರೀಧರ್ ಆಚಾರ್ಯ
ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ…
ದ್ವಿತೀಯ ಪಿಯುಸಿ ಫಲಿತಾಂಶ: ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ!
ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಆನ್ಲೈನ್ನಲ್ಲಿ…
ಮೈಸೂರು ದಸರಾದಲ್ಲಿ ಅಕ್ಟೋಬರ್ 18ರಂದು ದಸರಾ ಕೂಟ | ಪತ್ರಿಕಾಗೋಷ್ಠಿಯಲ್ಲಿ ಸಿದ್ಧತೆ ವಿವರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಪುತ್ತೂರು: ರೈತರ ಕ್ರೀಡೆಯಾದ ಕಂಬಳವನ್ನು ರಾಜ್ಯಕ್ಕೆ ತೋರಿಸುವ ಉದ್ದೇಶದಿಂದ ನಾಡಹಬ್ಬ…
ವಂದೇ ಮಾತರಂಗೆ ಅವಮಾನ ಆರೋಪ: ಸೋನಿಯಾ ಗಾಂಧಿ ವಿರುದ್ಧ ವಿಕಾಸ್ ಪುತ್ತೂರು ದೂರು
ಮಂಗಳೂರು: ವಂದೇ ಮಾತರಂ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿಕಾಸ್…
ಪುತ್ತೂರು: ಎಸ್.ಪಿ.ವೈ.ಎಸ್.ಎಸ್.ನಿಂದ ಮಕ್ಕಳಿಗಾಗಿ ವ್ಯಕ್ತಿತ್ವ ವಿಕಸನ ಉಚಿತ ಶಿಬಿರ | 8ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ 21 ದಿನಗಳ ತರಗತಿ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪುತ್ತೂರು ನೇತ್ರಾವತಿ ವಲಯದ ನೇತೃತ್ವದಲ್ಲಿ 21 ದಿನಗಳ…
ಬೆಳ್ತಂಗಡಿ: ನವವಿವಾಹಿತ ಆತ್ಮಹತ್ಯೆ – ತನಿಖೆ ಚುರುಕು!!
ಕಳೆದ ತಿಂಗಳಷ್ಟೇ ಹಸೆಮಣೆ ಏರಿದ್ದ ಯುವ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ…
ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ನೇಮಕ
ನೂರು ವರ್ಷ ಪೂರೈಸಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ನ ನೂತನ ಸ್ವತಂತ್ರ ನಿರ್ದೇಶಕರಾಗಿ…

















