tamanvi
ಟ್ರೆಂಡಿಂಗ್ ನ್ಯೂಸ್

ಬೆಳ್ಳಾರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಲೋಕಾರ್ಪಣೆಗೊಳಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಾರೆ: ಪುತ್ತೂರಿನಲ್ಲಿ ಪ್ರಸಿದ್ಧಿ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಬೆಳ್ಳಾರೆ ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಸೋಮವಾರ ಬೆಳಿಗ್ಗೆ ಉದ್ಘಾಟಿಸಿದರು.

ಲ್ಯಾಬ್ ಯಂತ್ರೋಪಕರಣಗಳ ರಿಬ್ಬನ್ ಕತ್ತರಿಸಿ, ದೀಪ ಬಳಗಿಸಿ ಮಾತನಾಡಿದ ಅವರು, ತನ್ನ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ಪ್ರಥಮ ಎನ್ನುವ ಯಂತ್ರೋಪಕರಣವನ್ನು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪರಿಚಯಿಸುತ್ತಿದೆ ಎನ್ನುವುದು ಖುಷಿಯ ವಿಚಾರ. ಬೆಳ್ಳಾರೆಯಂತಹ ಪ್ರದೇಶಕ್ಕೆ ಸುಸಜ್ಜಿತ ಲ್ಯಾಬೋರೇಟರಿಯ ಅವಶ್ಯಕತೆ ಇತ್ತು. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದರು.

ಬೆಳ್ಳಾರೆ ಪೊಲೀಸ್‌ ಉಪನಿರೀಕ್ಷಕ ಡಿ.ಎನ್. ಈರಯ್ಯ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.

ಬೆಳ್ಳಾರೆ ಪ್ರಾ ಕೃ ಪ. ಸ. ಸಂಘ ನಿಯಮಿತ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್‌ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಝಕರಿಯ್ಯ ಜುಮಾ ಮಸ್ಟಿದ್‌ ಅಧ್ಯಕ್ಷ ಯು.ಎಚ್‌. ಅಬೂಬಕ್ಕರ್, ವಿನೋದ್ ರೈ ಪಾಲ್ತಾಡ್ ಶುಭಹಾರೈಸಿದರು.

ಅಮ್ಮು ರೈ ಕಟ್ಟಡ ಮಾಲಕರಾದ ರಾಕೇಶ್ ಶೆಟ್ಟಿ, ನವೀನ್ ಕುಮಾರ್ ರೈ ಟಿ, ಹಿರಿಯ ಉದ್ಯಮಿ ಹಾಜಿ ಮಮ್ಮಾಲಿ,ಬೆಳ್ಳಾರೆ ಮಸೀದಿ ಅಧ್ಯಕ್ಷ ಯು ಹೆಚ್ ಅಬೂಬಕ್ಕರ್, ಹಿರಿಯ ಉದ್ಯಮಿ ಮಂಜಪ್ಪ ರೈ,ಕಾಮಧೇನು ಗ್ರೂಪ್ಸ್ ನ ಮಾಧವ ಗೌಡ,ವಿನೋದ್ ರೈ ಪಾಲ್ತಡು ಮೊದಲಾದವರು ಉಪಸ್ಥಿತರಿದ್ದರು.

ಚೇತನ್ ಪ್ರಕಾಶ್ ಅವರ ಹೆತ್ತವರಾದ ಡಾ. ಚಂದ್ರಶೇಖರ್ ದಂಪತಿ, ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಪಂಜ ಮೊದಲಾದವರು ಉಪಸ್ಥಿತರಿದ್ದರು.

ದನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಸಂಸ್ಥೆಯ ಬಗ್ಗೆ ವಿವರಿಸುತ್ತಾ, ಅತಿಥಿಗಳನ್ನು ಸ್ವಾಗತಿಸಿದರು. ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಕೊಡುಗೆಗಳು

ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭವನ್ನು ಇನ್ನಷ್ಟು ಸಡಗರದಿಂದ ಆಚರಿಸಲು ಖ್ಯಾತ ಜಿ ಎಲ್…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…

ಕರೆ ಹೋಗ್ತಿಲ್ಲ, ನೆಟ್ ವರ್ಕ್ ಕೆಲಸ ಮಾಡ್ತಿಲ್ಲ!! ವರ್ಷಾಂತ್ಯಕ್ಕೆ ಹೀಗೇಕೆ ಮಾಡ್ತು ಕಂಪೆನಿಗಳು??

ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ…

ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ…