Gl
ಕರಾವಳಿಸ್ಥಳೀಯ

ದರೋಡೆ ಮಾಡಿ, ಕಾರು ಕದ್ದರು!! ಮುಲ್ಕಿಯಲ್ಲಿ ಕಾರು ಬಿಟ್ಟು ಹೋದರು!

ಮುಲ್ಕಿಯಲ್ಲಿ ಇಂದು ಬೆಳಗ್ಗೆ ಕಾರೊಂದು ಪತ್ತೆಯಾಗಿದ್ದು, ಅದು ಉರ್ವಸ್ಟೋರ್ ನ ಮನೆಯೊಂದರಿಂದ ಇಂದು ಮುಂಜಾವ ಕಳವಾಗಿರುವ ಕಾರೆಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಲ್ಕಿ: ಮುಲ್ಕಿಯಲ್ಲಿ ಇಂದು ಬೆಳಗ್ಗೆ ಕಾರೊಂದು ಪತ್ತೆಯಾಗಿದ್ದು, ಅದು ಉರ್ವಸ್ಟೋರ್ ನ ಮನೆಯೊಂದರಿಂದ ಇಂದು ಮುಂಜಾವ ಕಳವಾಗಿರುವ ಕಾರೆಂದು ತಿಳಿದುಬಂದಿದೆ.

Pashupathi

ನಗರದ ಉರ್ವಸ್ಟೋರ್ ಸಮೀಪದ ಕೋಟೆಕಣಿ ಒಂದನೇ ಕ್ರಾಸ್ ನಲ್ಲಿ ಮನೆಯೊಂದಕ್ಕೆ ಇಂದು ಮುಂಜಾವ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಮನೆಮಂದಿಗೆ ಹಲ್ಲೆಗೈದು ಚಿನ್ನಾಭರಣ ದೋಚಿದ ಕಳ್ಳರು, ಬಳಿಕ ಅದೇ ಮನೆಯ ಕಾರನ್ನೂ ಕದಿದ್ದಾರೆ. ಅದೇ ಕಾರಿನಲ್ಲಿ ಮುಲ್ಕಿಯ ವರೆಗೆ ಬಂದ ಕಳ್ಳರು ಇಲ್ಲಿನ ಆಧಿದನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

akshaya college

ಅಪರಿಚಿತ ಕಾರೊಂದು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಪತ್ತೆಯಾಗಿರುವ ಕಾರಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು…

1 of 114