ಪುತ್ತೂರು: ರಾಜ್ಯ ಯುವಜನ ಒಕ್ಕೂಟ (ರಿ) ಬೆಂಗಳೂರು ಇದರ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಬಾವನಾ ಪ್ರಶಸ್ತಿ ಪ್ರಕಟಗೊಂಡಿದೆ. ಪ್ರಶಸ್ತಿ ಗೆ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಆಯ್ಕೆಗೊಂಡಿರುತ್ತಾರೆ.ಯುವಜನರ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ,ಬರವಣಿಗೆ,ತರಬೇತಿ,ಸಂಪನ್ಮೂಲ ವ್ಯಕ್ತಿಯಾಗಿ ಇನ್ನಿತರ ಕ್ಷೇತ್ರದಲ್ಲಿ ಅಪ್ರತಿಮ ಸಾಧಕರು.ತರಬೇತುದಾರರಾಗಿ ರಾಜ್ಯಾದ್ಯಂತ ಒಟ್ಟು 500 ಮಿಕ್ಕಿ ಅಧಿಕ ಕಾರ್ಯಕ್ರಮಗಳನ್ನು ಅಯೋಜಿಸಿ ಸುಮಾರು ಎಂಬತ್ತು ಸಾವಿರ ಯುವಜನರಿಗೆ ಜೀವನ ಕೌಶಲ್ಯ, ವೃತ್ತಿ ಮಾರ್ಗದರ್ಶನ, ನಾಯಕತ್ವ ತರಬೇತಿ, ಉದ್ಯಮಶೀಲತಾ ತರಬೇತಿ ಇನ್ನಿತರ ವಿಷಯಗಳ ಕುರಿತಾಗಿ ಶಾಲಾ ಕಾಲೇಜು, ಯುವಕ ಯುವತಿ ಮಂಡಲ ಮುಂತಾದವರಿಗೆ ತರಬೇತಿ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಉದ್ಯೋಗ ಮೇಳವನ್ನು ಅಯೋಜಿಸಿ ಹಲವಾರು ಯುವಜನರಿಗೆ ಉದ್ಯೋಗಕ್ಕೆ ನೇರವಾಗಿದ್ದಾರೆ.ಈಗಿನ ಸಾಮಾಜಿಕ ಪಿಡುಗುಗಳಾದ ಸಾಮಾಜಿಕ ಜಾಲತಾಣ,ಮಾದಕ ವ್ಯಸನ,ಇದರ ಕುರಿತಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಕಾರ್ಯಕ್ರಮ ವನ್ನು ಅಯೋಜಿಸಿ ಜಾಗೃತಿ ಮೂಡಿಸುತ್ತಿದ್ದಾರೆ.ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಹಲವಾರು ಯುವಜನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಿಟಿಸಿರುತ್ತಾರೆ.ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಯೂತ್ ಚಾಂಪಿಯನ್ ಆಗಿ ಭಾಗವಹಿಸಿದ ಇವರು ಕರ್ನಾಟಕ ಮತ್ತು ಕೇರಳದ ಕಾರ್ಯಕ್ರಮಗಳ ತೀರ್ಪುಗಾರ ರಾಗಿದ್ದಾರೆ.ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಇದರ ಜೀವನ ಕೌಶಲ್ಯ ಮತ್ತು ಉದ್ಯಮಶೀಲತಾ ತರಬೇತುದಾರರಾಗಿರುತ್ತಾರೆ.ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಫಂಡ್ ಇದರ ವೃತ್ತಿ ಮಾರ್ಗದರ್ಶನ ತರಬೇತುದಾರರಾಗಿದ್ದಾರೆ.ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಇದರ ಜೀವನ ಕೌಶಲ್ಯ ತರಬೇತುದಾರರಾಗಿದ್ದಾರೆ.ಹಲವಾರು ಸಾಹಿತ್ಯ ಸಮ್ಮೇಳನ ,ಕವಿಗೊಷ್ಠಿಗಳಲ್ಲಿ ಭಾಗವಹಿಸಿದ ಇವರು ಉತ್ತಮ ಬರಹಗಾರರು ಇವರ ಲೇಖನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಇವರ ಯುವಜನ ಸಂಬಂಧಿಸಿದ ಸಾಧನೆಗೆ ಕರ್ನಾಟಕ ಸರಕಾರದಿಂದ ರಾಜ್ಯ ಅತ್ಯುತ್ತಮ ಜೀವನ ಕೌಶಲ್ಯ ಸುಗಮಕಾರ ಪ್ರಶಸ್ತಿ, ಮಾಮ್ ಇನ್ಸ್ ಫೈರ್ ಆವಾರ್ಡ್,ರಾಜ್ಯ ಸಾಧನಶ್ರೀ ಪ್ರಶಸ್ತಿ, ಸಾಹಿತ್ಯ ಸರಸ್ಪತಿ ಬಿರುದು ಲಭಿಸಿದೆ.ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ ಹಿ ಪ್ರಾ ಶಾಲೆ ರಾಗಿಕುಮೇರಿ ಬಪ್ಪಳಿಗೆ,ಫ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು ಕೊಂಬೆಟ್ಟು,ಪದವಿ ಶಿಕ್ಷಣ ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಅರ್ಥಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದಾರೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರರಾದ ಇವರು ಪುತ್ತೂರು ತಾಲ್ಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ . ಪುತ್ತೂರು ಬಿರಾವು ಎಂಬಲ್ಲಿ ತಾಯಿ ಸುಶೀಲಾ, ಪತ್ನಿ ಲಾವಣ್ಯ ಅಂಚನ್ ,ತಮ್ಮ ಮೋಹನ್ ರವರೊಂದಿಗೆ ವಾಸವಿದ್ದಾರೆ.ಫೆಬ್ರವರಿ 5 ರಂದು ಮುದ್ದೇಬಿಹಾಳ ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸ್ವಾಮಿ ವಿವೇಕಾನಂದ ರಾಜ್ಯ ಸದ್ಬಾವನಾ ಪ್ರಶಸ್ತಿಗೆ ಶ್ರೀಕಾಂತ್ ಪೂಜಾರಿ ಬಿರಾವು | 500 ಕ್ಕೂ ಮಿಕ್ಕಿ ಕಾರ್ಯಕ್ರಮಗಳ ಮುಖಾಂತರ 80,000 ಯುವಜನರಿಗೆ ತರಬೇತಿ ನೀಡಿದ ಬಿರಾವು
What's your reaction?
- 3694c
- 3594cc
- 35ai technology
- 34ajjavara
- 33alwas
- 33apology
- 32artificial intelegence
- 32avg
- 31bihar minister
- 31bjp
- 30bjp leader
- 30bjp national president
- 29bt ranjan
- 29co-operative
- 28coastal
- 28crime
- 27crime news
- 26cyclothon
- 26darmasthala
- 25death news
- 25dust bin
- 24education
- 24fraud
- 23gl
- 23gods own country
- 22gold
- 22google for education
- 21independence
- 21jewel
- 20jewellers
- 19jnana vikasa
- 19karnataka state
- 18kerala village
- 18kukke - kollur temple
- 17lokayuktha
- 17lokayuktha raid
- 16manipal
- 16minister krishna bairegowda
- 15mla ashok rai
- 15mohan alwa
- 14mudubidre
- 14nidana news
- 13nirvathu mukku
- 12nitin nabin
- 12police
- 11ptr tahasildar
- 11puttur
- 10puttur news
- 10puttur tahasildar
- 9republic
- 9revenue
- 8revenue department
- 8revenue minister
- 7school
- 6senior citizen
- 6silver
- 5society
- 5sowmya
- 4students
- 4tahasildar
- 3tahasildar absconded
- 3teachers
- 2tour
- 2trending
- 1udupi
- 1wastage
Related Posts
ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!
ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…
ಪಡೀಲ್: ಮಹಿಳೆಯ ಮೇಲೆರಗಿದ ಬೀದಿನಾಯಿಗಳು!!
ಪುತ್ತೂರು: ಪಾದಚಾರಿ ಮಹಿಳೆಯೋರ್ವರ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ಪುತ್ತೂರಿನ ಪಡೀಲ್ –…
ರೋಹಿಣಿ ನೆಹರುನಗರ ಅವರಿಗೆ ಶಿವಶರಣೆ ಗಂಗಾಬಿಕೆ ಪುರಸ್ಕಾರ
ಪುತ್ತೂರು: ಎಂ.ಪಿ. ರೋಹಿಣಿ ರಾಘವ ಆಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಶಿವ ಶರಣೆ ಗಂಗಾಬಿಕೆ…
ಗೃಹಪ್ರವೇಶದಲ್ಲಿ ಜನಪ್ರತಿನಿಧಿಗಳಾದ ಗೀತಾ, ಯತೀಶ್ ದೇವ, ಹರೀಶ್ ನಾಯಕ್ ಅವರಿಗೆ ಸನ್ಮಾನ | ಆರ್ಯಾಪು ಗ್ರಾಪಂ ಅಧ್ಯಕ್ಷ, ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಣೆಗೆ ಅಭಿನಂದನೆ
ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ, ಸದಸ್ಯರಾಗಿದ್ದ ಯತೀಶ್ ದೇವ ಹಾಗೂ…
ಪುತ್ತೂರು: ನಾಳೆ ಇಲ್ಲೆಲ್ಲಾ ಇರಲ್ಲ ಕರೆಂಟ್!!
ಪುತ್ತೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಫೆ. 26ರಂದು ಪುತ್ತೂರಿನ ಹಲವು ಕಡೆ ವಿದ್ಯುತ್…
ಡಾ. ಯದುರಾಜ್, ಡಾ. ಜೈನಾಬ ಸುನು ಆಲಿ, ಡಾ. ಅಜಯ್ ಅವರಿಗೆ ಸನ್ಮಾನ | ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಿಂದ ಗೌರವ
ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ…
ಪುತ್ತೂರು ಜನರಲ್ಲಿ ಆತಂಕ ಹುಟ್ಟಿಸಿದ ಜೆಟ್ ಹಾರಾಟ – ಸಮೀಕ್ಷೆ ಕಾರ್ಯವೆಂದು ಮಾಹಿತಿ
ಪುತ್ತೂರು: ನಗರದ ಆಕಾಶದಲ್ಲಿ ಜೆಟ್ ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಲವು ಬಾರಿ ಸುತ್ತು ಹಾಕಿ…
ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ…
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ: ಸರ್ಕಾರದ ಮಹತ್ವದ ಆದೇಶ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆಯನ್ನು…
ಪುತ್ತೂರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
ಪುತ್ತೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು…























