ರಾಜ್ಯ ವಾರ್ತೆಸ್ಥಳೀಯ

ಏಕಕಾಲಕ್ಕೆ 15 ಮಂದಿಗೆ ಬಡಿದ ಸಿಡಿಲು!!

GL
ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾದ ಘಟನೆ ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾದ ಘಟನೆ ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ನಡೆದಿದೆ.

chennai-shopping
maithri

ಕೂಡಲೇ ಹದಿನೈದು ಮಂದಿಯನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.

ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು ಸಹಿತ ದಿಢೀರ್ ಮಳೆ ಶುರುವಾಗಿ, ಸಿಡಿಲು ಬಡಿದು ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿ ಹದಿನೈದು ಮಂದಿಗೆ ಗಾಯವಾಗಿದ್ದು, ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದೆ.

ಕೂಡಲೇ ಹದಿನೈದು ಮಂದಿಯನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.

ನೀರಲ್ಲಿದ್ದ ಮಂದಿ:

ಸಿಡಿಲು ಬಡಿಯುವ ವೇಳೆ ಅಸ್ವಸ್ಥಗೊಂಡ ಹದಿನೈದು ಮಂದಿಯೂ ಗದ್ದೆಯ ನೀರಲ್ಲಿ ನಾಟಿ ಕಾರ್ಯ ಮಾಡುತ್ತಿದ್ದರು. ಗುಡುಗು ಗದ್ದೆಯ ನೀರಿಗೆ ಆಕರ್ಷಿತಗೊಂಡು, ನೀರಲ್ಲಿದ್ದ ಹದಿನೈದು ಮಂದಿಯನ್ನು ಅಸ್ವಸ್ಥರನ್ನಾಗಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…

1 of 153