ಸ್ಥಳೀಯ

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಪ್ರದಾನ ಸಮಾರಂಭ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚೆಗೆ ಮಹಾವೀರ ವೆಂಚರಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚೆಗೆ ಮಹಾವೀರ ವೆಂಚರಲ್ಲಿ ನಡೆಯಿತು.ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಪದಪ್ರದಾನ ಸಮಾರಂಭ ನಡೆಸಿಕೊಟ್ಟರು. ನೂತನ ಅಧ್ಯಕ್ಷ ಸುಬ್ರಮಣಿ ಅವರಿಗೆ ನಿರ್ಗಮನ ಅಧ್ಯಕ್ಷೆ ಜ್ಯೋತಿಕಾ ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ವಿಶಾಲ್ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.ಸಮುದಾಯ ಸೇವಾ ವಿಭಾಗದಡಿ ಅಂಗನವಾಡಿ ಮಕ್ಕಳಿಗೆ ಪಾದರಕ್ಷೆಗಳನ್ನು ವಿತರಿಸಿದ್ದು, ಕಬಕ ಅಂಗನವಾಡಿ ಕಾರ್ಯಕರ್ತೆ ಪಾದರಕ್ಷೆಗಳನ್ನು ಸ್ವೀಕರಿಸಿದರು. ನಾಲ್ಕು ಮಂದಿ ವಿಶೇಷ ಚೇತನರಿಗೆ ವಾಕರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.ಅಂತಾರಾಷ್ಟ್ರೀಯ ಸೇವಾ ವಿಭಾಗದಡಿ ವಾಮನ್ ಪೈ ಹಾಗೂ ಡಾ. ಹರ್ಷ ಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು. ವೃತ್ತಿ ಸೇವಾ ವಿಭಾಗದಲ್ಲಿ ಉರಗ ತಜ್ಞ ತೇಜಸ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು.ಸಂಘ ಸೇವಾ ವಿಭಾಗದಲ್ಲಿ 16 ಮಂದಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.ಡಿ.ಆರ್.ಆರ್. ಸಂಜಯ್ ಆರ್., ಝಡ್.ಆರ್.ಆರ್. ನವೀನ್ ರೈ ಬನ್ನೂರು, ಪುತ್ತೂರು ರೋಟರಿ ಕ್ಲಬ್ಬಿನ ಯುವಜನ ಸೇವಾ ನಿರ್ದೇಶಕಿ ಪ್ರೀತಾ ಹೆಗ್ಡೆ, ಸಭಾಪತಿ ಶ್ರೀಧರ್ ಕೆ., ನಿರ್ಗಮಿತ ಸಭಾಪತಿ ಪ್ರೇಮಾನಂದ್ ಉಪಸ್ಥಿತರಿದ್ದರು.ನಿರ್ಗಮಿತ ಅಧ್ಯಕ್ಷೆ ಜ್ಯೋತಿಕಾ ಸ್ವಾಗತಿಸಿ, ನಿರ್ಗಮಿತ ಕಾರ್ಯದರ್ಶಿ ವರದಿ ವಾಚಿಸಿದರು. ಕಾರ್ಯದರ್ಶಿ ವಿಶಾಲ್ ವಂದಿಸಿದರು. ಪಿ.ಆರ್.ಓ. ಗಣೇಶ್ ಎನ್. ಕಲ್ಲರ್ಪೆ ಪದಪ್ರದಾನ ಸಮಾರಂಭವನ್ನು ನಿರ್ವಹಿಸಿದರು. ಕೋಶಾಧಿಕಾರಿ ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3