ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚೆಗೆ ಮಹಾವೀರ ವೆಂಚರಲ್ಲಿ ನಡೆಯಿತು.ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಪದಪ್ರದಾನ ಸಮಾರಂಭ ನಡೆಸಿಕೊಟ್ಟರು. ನೂತನ ಅಧ್ಯಕ್ಷ ಸುಬ್ರಮಣಿ ಅವರಿಗೆ ನಿರ್ಗಮನ ಅಧ್ಯಕ್ಷೆ ಜ್ಯೋತಿಕಾ ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ವಿಶಾಲ್ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸಮುದಾಯ ಸೇವಾ ವಿಭಾಗದಡಿ ಅಂಗನವಾಡಿ ಮಕ್ಕಳಿಗೆ ಪಾದರಕ್ಷೆಗಳನ್ನು ವಿತರಿಸಿದ್ದು, ಕಬಕ ಅಂಗನವಾಡಿ ಕಾರ್ಯಕರ್ತೆ ಪಾದರಕ್ಷೆಗಳನ್ನು ಸ್ವೀಕರಿಸಿದರು. ನಾಲ್ಕು ಮಂದಿ ವಿಶೇಷ ಚೇತನರಿಗೆ ವಾಕರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಅಂತಾರಾಷ್ಟ್ರೀಯ ಸೇವಾ ವಿಭಾಗದಡಿ ವಾಮನ್ ಪೈ ಹಾಗೂ ಡಾ. ಹರ್ಷ ಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು. ವೃತ್ತಿ ಸೇವಾ ವಿಭಾಗದಲ್ಲಿ ಉರಗ ತಜ್ಞ ತೇಜಸ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು.
ಸಂಘ ಸೇವಾ ವಿಭಾಗದಲ್ಲಿ 16 ಮಂದಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಡಿ.ಆರ್.ಆರ್. ಸಂಜಯ್ ಆರ್., ಝಡ್.ಆರ್.ಆರ್. ನವೀನ್ ರೈ ಬನ್ನೂರು, ಪುತ್ತೂರು ರೋಟರಿ ಕ್ಲಬ್ಬಿನ ಯುವಜನ ಸೇವಾ ನಿರ್ದೇಶಕಿ ಪ್ರೀತಾ ಹೆಗ್ಡೆ, ಸಭಾಪತಿ ಶ್ರೀಧರ್ ಕೆ., ನಿರ್ಗಮಿತ ಸಭಾಪತಿ ಪ್ರೇಮಾನಂದ್ ಉಪಸ್ಥಿತರಿದ್ದರು.
ನಿರ್ಗಮಿತ ಅಧ್ಯಕ್ಷೆ ಜ್ಯೋತಿಕಾ ಸ್ವಾಗತಿಸಿ, ನಿರ್ಗಮಿತ ಕಾರ್ಯದರ್ಶಿ ವರದಿ ವಾಚಿಸಿದರು. ಕಾರ್ಯದರ್ಶಿ ವಿಶಾಲ್ ವಂದಿಸಿದರು. ಪಿ.ಆರ್.ಓ. ಗಣೇಶ್ ಎನ್. ಕಲ್ಲರ್ಪೆ ಪದಪ್ರದಾನ ಸಮಾರಂಭವನ್ನು ನಿರ್ವಹಿಸಿದರು. ಕೋಶಾಧಿಕಾರಿ ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಪ್ರದಾನ ಸಮಾರಂಭ
Related Posts
ಏ.20ರಂದು ಉದ್ಘಾಟನೆಗೊಳ್ಳಲಿರುವ ದಕ್ಷಿಣ ಕನ್ನಡದ ಅತಿ ದೊಡ್ಡ ಶೋರೂಂನಲ್ಲಿದೆ ಹಲವು ಹೊಸತನ |ನಾಲ್ಕು ಅಂತಸ್ತಿನ ಬೃಹತ್ ಮಳಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್’ಗೆ ನಟ ರಮೇಶ್ ಅರವಿಂದ್ ಬ್ರಾಂಡ್ ಅಂಬಾಸಡರ್ |ಹತ್ತೂರಲ್ಲೂ ಹೆಸರು ಮಾಡಲಿದೆ ಪುತ್ತೂರ ಚಿನ್ನ
81 ವರ್ಷಕ್ಕೂ ಅಧಿಕ ಪರಂಪರೆ ಹೊಂದಿರುವ ಮುಳಿಯ ಚಿನ್ನದ ಮಳಿಗೆ ಇದೀಗ ಹೊಸ ಹೆಸರಿನೊಂದಿಗೆ, ಹಲವು…
ಪುತ್ತೂರು ಜಾತ್ರೆ ಗದ್ದೆಯಲ್ಲಿ ಮೊಬೈಲ್ ಸಿಸಿ ಕ್ಯಾಮರಾ ಕಣ್ಗಾವಲು, ಪ್ರವೇಶ ದ್ವಾರ ಸಹಿತ ಹಲವೆಡೆ 44 ಸಿಸಿ ಕ್ಯಾಮರಾ
ಪುತ್ತೂರು: ಲಕ್ಷಾಂತರ ಮಂದಿ ಸೇರುವ, ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ…
12ನೇ ವರ್ಷಕ್ಕೆ ಪಾದಾರ್ಪಣೆಗೈದ ಡಾ. ನಝೀರ್ಸ್ ಡಯಾಬಿಟೀಕ್ ಸೆಂಟರ್ | ಉಚಿತ ತಪಾಸಣೆ, ವಿಶೇಷ ಉಪನ್ಯಾಸ
ಪ್ರಸಕ್ತ ಸಮಾಜದಲ್ಲಿ ಬಾಧಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಲ್ಲಿ ಡಯಾಬಿಟೀಸ್ ಒಂದು. ಇದರಲ್ಲಿ…
Protected: ಕಾಂಞಗಾಡ್ – ಕಾಣಿಯೂರು ರೈಲ್ವೇ ಮಾರ್ಗಕ್ಕೆ ಬದಲಿ ಪ್ರಸ್ತಾವನೆ |ವಿಟ್ಲವಾಗಿ ಬರುವ ಈ ರೈಲ್ವೇ ಮಾರ್ಗದಿಂದ ಹಲವು ಪ್ರಯೋಜನ: ವಾಮನ್ ಪೈ
ಕಾಂಞಿಗಾಡ್- ಕಾಣಿಯೂರು ಮಾರ್ಗದ ಪ್ರಸ್ತಾವನೆ ರೈಲ್ವೇ ಇಲಾಖೆ ಮುಂದಿದೆ. ಈ ಯೋಜನೆ ಪೂರ್ಣಗೊಂಡರೆ…
ಬನ್ನೂರಿನಲ್ಲಿ ಯಕ್ಷಗಾನ ಉಚಿತ ತರಬೇತಿ ಉದ್ಘಾಟನೆ
ಜಿಲ್ಲಾ ಪ್ರಶಸ್ತಿ ವಿಜೇತ ಸಂಸ್ಥೆ ಬನ್ನೂರು ಸ್ಫೂರ್ತಿ ಯುವ ಸಂಸ್ಥೆಯ ಆಶ್ರಯದಲ್ಲಿ ಯಕ್ಷಗಾನ…
ಡಾ.ವೈ.ಸುಬ್ರಾಯ ಭಟ್ಟರಿಗೆ ಬಾರ್ಯ ನೂರಿತ್ತಾಯ ಪ್ರತಿಷ್ಠಾನದ ಪ್ರಶಸ್ತಿ
ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ…
ಕುಮಾರಮಂಗಲ ಶಾಲೆಗೆ ಕೊಳವೆ ಬಾವಿ, ನೀರಿನ ಟ್ಯಾಂಕ್, ಸ್ಟ್ಯಾಂಡ್, ಮೇಜು ಕೊಡುಗೆ | ಸವಣೂರು ಗ್ರಾ.ಪಂ., ಶಾಲಾ ಹಿರಿಯ ವಿದ್ಯಾರ್ಥಿ ಸಂಘ ನೀಡಿದ ಕೊಡುಗೆಗಳ ಉದ್ಘಾಟನೆ
ಕುಮಾರ ಮಂಗಲ ಶಾಲೆಗೆ ಸವಣೂರು ಗ್ರಾಮ ಪಂಚಾಯತ್ ನಿಂದ ಕೊಳವೆಬಾವಿ ಮತ್ತು ಹಿರಿಯ ವಿದ್ಯಾರ್ಥಿ…
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ”
ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ…
ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ
ಮಂಗಳೂರು-ಕಬಕ ಪ್ಯಾಸೆಂಜರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ
ಮುಳಿಯ – ಹೊಸ ಲೋಗೋ- ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್
ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness) ನೀಡುವ…