ರಾಜ್ಯ ವಾರ್ತೆಸ್ಥಳೀಯ

ಶಿರೂರು: ಗಂಗಾವಳಿ ನದಿಯಲ್ಲಿ ಟ್ರಕ್ಕೊಂದು ಮುಳುಗಿರುವುದು ಖಚಿತ!

tv clinic
ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ಕೊಝಿಕ್ಕೋಡ್‌ ನಿವಾಸಿ ಅರ್ಜುನ್‌ ಅವರಿಗಾಗಿ ಶೋಧ ಮುಂದುವರಿದಿರುವ ನಡುವೆ ಟ್ರಕ್‌ ಒಂದು ಗಂಗಾವಳಿ ನದಿಯಲ್ಲಿ ಮುಳುಗಿರುವುದು ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ಕೊಝಿಕ್ಕೋಡ್‌ ನಿವಾಸಿ ಅರ್ಜುನ್‌ ಅವರಿಗಾಗಿ ಶೋಧ ಮುಂದುವರಿದಿರುವ ನಡುವೆ ಟ್ರಕ್‌ ಒಂದು ಗಂಗಾವಳಿ ನದಿಯಲ್ಲಿ ಮುಳುಗಿರುವುದು ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ.

core technologies

“ಒಂದು ಟ್ರಕ್‌ ನೀರಿನಲ್ಲಿ ಮುಳುಗಿರುವುದು ಖಚಿತವಾಗಿದೆ ಹಾಗೂ ನೌಕಾಪಡೆಯ ಮುಳುಗು ತಜ್ಞರು ಅದನ್ನು ಮೇಲಕ್ಕೆ ತರಲಿದ್ದಾರೆ. ಲಾಂಗ್‌ ಆರ್ಮ್‌ ಬೂಮರ್‌ ಎಕ್ಸ್‌ಕವೇಟರ್‌ ಬಳಸಿ ನದಿ ನೀರಿನಲ್ಲಿ ಡ್ರೆಜ್ಜಿಂಗ್‌ ನಡೆಸಲಿದೆ. ಶೋಧಕ್ಕಾಗಿ ಡ್ರೋನ್‌ ಆಧರಿತ ಇಂಟಲಿಜೆಂಟ್‌ ಅಂಡರ್‌ಗ್ರೌಂಡ್‌ ಬರೀಡ್‌ ಆಬ್ಜೆಕ್ಟ್‌ ಡಿಟೆಕ್ಷನ್‌ ಸಿಸ್ಟಂ ಅನ್ನೂ ಬಳಸಲಾಗಿದೆ. ನಾಪತ್ತೆಯಾದವರ ಮೃತದೇಹಗಳಿಗಾಗಿ ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಮೂಲಕವೂ ಶೋಧ ನಡೆಸಲಾಗುವುದು,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ಎಕ್ಸ್‌ನಲ್ಲಿ ಪೋಸ್ಟ್‌ ಒಂದರ ಮೂಲಕ ಮಾಹಿಈಗ ಬಳಸಲಾಗುತ್ತಿರುವ ಎಕ್ಸ್‌ಕವೇಟರ್‌ 60 ಮೀಟರ್‌ ಆಳದ ತನಕ ಮಣ್ಣನ್ನು ಅಗೆಯಬಹುದಾಗಿದೆ. ಅರ್ಜುನ್‌ ಹಾಗೂ ಇತರ ಇಬ್ಬರು ನಾಪತ್ತೆಯಾದವರಿಗಾಗಿ ಹುಡುಕಲು ಆಧುನಿಕ ರೇಡಿಯೋ ಫ್ರೀಕ್ವೆನ್ಸಿ ಸ್ಕ್ಯಾನರ್‌ ಕೂಡ ಬಳಸಲಾಗುವುದು. ಶೋಧ ಕಾರ್ಯಾಚರಣೆಯಲ್ಲಿ ಸಹಕರಿಸಲು ಎನ್ನೈಟಿಕೆ-ಸುರತ್ಕಲ್‌ನ ತಜ್ಞರ ನಾಲ್ಕು ತಂಡಗಳೂ ಆಗಮಿಸಿವೆ.

akshaya college

ಅರ್ಜುನ್‌ ಪತ್ತೆಹಚ್ಚುವಲ್ಲಿ ಯಾವುದೇ ವಿಳಂಬವುಂಟಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಈ ಭೂಕುಸಿತದಲ್ಲಿ ಮೃತಪಟ್ಟ ಎಂಟು ಮಂದಿಯ ಮೃತದೇಹಗಳು ಇಲ್ಲಿಯ ತನಕ ಪತ್ತೆಯಾಗಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 146