pashupathi
ದೇಶಸ್ಥಳೀಯ

ಲೋನ್‌ಗೆಂದು ಹೋಗಿ ಬ್ಯಾಂಕ್ ಸಿಇಒನನ್ನೇ ಬಲೆಗೆ ಬೀಳಿಸಿದ ಚಾಲಾಕಿ ಮಹಿಳೆ! 6 ವರ್ಷಗಳಲ್ಲಿ ಆಕೆ ದೋಚಿದ ಮೊತ್ತವಾದರೂ ಎಷ್ಟು ಗೊತ್ತೇ?

tv clinic
ಸಹಕಾರಿ ಬ್ಯಾಂಕ್‌ನ ನಿವೃತ್ತ ಸಿಇಒಗೆ ಮಾನಹಾನಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಅವರಿಂದ 4.39 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಥಾಣೆಯ 45 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಸಹಕಾರಿ ಬ್ಯಾಂಕ್‌ನ ನಿವೃತ್ತ ಸಿಇಒಗೆ ಮಾನಹಾನಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಅವರಿಂದ 4.39 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಥಾಣೆಯ 45 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

akshaya college

ದೂರುದಾರರಾದ ಬ್ಯಾಂಕ್ ಸಿಇಒ ಹೇಳುವಂತೆ , 2016 ರಲ್ಲಿ ತನ್ನ ಬ್ಯಾಂಕ್‌ನ ವಡಾಲಾ ಶಾಖೆಗೆ ಮಹಿಳೆಯೊಬ್ಬಳು ಲೋನ್ಗಾಗಿ ಬ್ಯಾಂಕ್ಗೆ ಬಂದಿದ್ದಾರೆ. ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಪರಸ್ಪರ ಸಂಪರ್ಕ ಬೆಳೆದಿದೆ” ಎಂದು ಹೇಳಿದ್ದಾರೆ.

ಥಾಣೆ ನಗರ ಪೊಲೀಸರು ಉಲ್ಲೇಖಿಸಿದ ವರದಿಯ ಪ್ರಕಾರ, ಮಹಿಳೆ ಆರಂಭದಲ್ಲಿ ಹಣಕಾಸಿನ ತೊಂದರೆಯಿಂದಾಗಿ ಸಾಲದ ಅಗತ್ಯವಿದೆ ಎಂದು ನಿವೃತ್ತ ಸಿಇಒ ಅವರನ್ನು ಸಂಪರ್ಕಿಸಿದ್ದಾರೆ. ಸಾಲ ಪ್ರಕ್ರಿಯೆಯ ಸಮಯದಲ್ಲಿ, ಆಕೆಯ ಮನೆಯ ಸಮೀಕ್ಷೆಯ ಅಗತ್ಯವಿತ್ತು. ಫೆಬ್ರವರಿ 2017 ರಲ್ಲಿ, ಸಿಇಒ ದಾಖಲೆಗಳನ್ನು ಪರಿಶೀಲಿಸಲು ಅವರ ಮನೆಗೆ ಭೇಟಿ ನೀಡಿದಾಗ, ಮಹಿಳೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದಳು ಎಂದು ಎಫ್‌ಐಆರ್ ಉಲ್ಲೇಖಿಸಿಲಾಗಿದೆ. ನಂತರ ಮಾಸಿಕ 7,300 ರೂ.ಗಳ ಇಎಂಐ ಸಹಿತ 3 ಲಕ್ಷ ರೂ. ಸಾಲ ಮಂಜೂರಾಗಿದೆ.

ಒಂದು ತಿಂಗಳ ನಂತರ, ಮಹಿಳೆ 8 ಕೋಟಿ ರೂಪಾಯಿ ಪಾವತಿಸದಿದ್ದರೆ, ನಿನ್ನ ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ವಾಟ್ಸಾಪ್‌ನಲ್ಲಿ ನಿನ್ನ ನಗ್ನ ಫೋಟೋಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕುತ್ತಾ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾಳೆ. ಆರಂಭದಲ್ಲಿ ಒತ್ತಡಕ್ಕೆ ಮಣಿದು ಸಿಇಒ ಆಕೆಗೆ 5 ಲಕ್ಷ ರೂ ಪಾವತಿಸಿದ್ದಾನೆ. 2017 ರಿಂದ 2023 ರ ನಡುವೆ ಅವರು 108 ಕಂತುಗಳಲ್ಲಿ ಒಟ್ಟು 4.39 ಕೋಟಿ ರೂ.ಗಳನ್ನು ಪಾವತಿಸಿದ್ದಾನೆ.

ಇಷ್ಟು ದೊಡ್ಡ ಮೊತ್ತವನ್ನು ಪಡೆದರೂ, ಮಹಿಳೆ ತನ್ನ ಬೇಡಿಕೆಗಳನ್ನು ಮುಂದುವರೆಸಿದ್ದಳು. ಇದರಿಂದ ಬೇಸತ್ತ ಆತ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ದ ಕೇಸು ದಾಖಲಿಸಿದ್ದಾನೆ. ಬಲೆ ಬೀಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಸುಲಿಗೆ ಮಾಡಿದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಅಥವಾ ಮಹಿಳೆ ಯಾವುದೇ ಆಸ್ತಿಯನ್ನು ಖರೀದಿಸಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಹಣದ ಜಾಡು ಹಿಡಿಯುವುದು ಸೇರಿದಂತೆ ಪೊಲೀಸರು ಈಗ ವಿವರವಾದ ತನಿಖೆ ನಡೆಸುತ್ತಿದ್ದಾರೆ. ಸುಲಿಗೆ ಯೋಜನೆಯಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಶೋಧ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 134