ದೇಶ

ಎಲ್.ಪಿ.ಜಿ. ಬಿಕ್ಕಟ್ಟು: ಸಚಿವರ ಜೊತೆ ಪ್ರಧಾನಿ ಮೋದಿ ಸಭೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಇರಾನ್ ಯುದ್ಧದಿಂದ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪರಿಸ್ಥಿತಿ ಅವಲೋಕಿಸಲು, ಅದರಲ್ಲೂ ಎಲ್​ಪಿಜಿ ಸರಬರಾಜು ಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಸಭೆ ನಡೆಸಿದರು.

chennai-shopping
maithri

ಭಾರತದಲ್ಲಿ ಎಲ್​ಪಿಜಿ ಸರಬರಾಜು ಸರಿಯಾದ ರೀತಿಯಲ್ಲಿ ಇರುವುದನ್ನು ಖಾತ್ರಿಪಡಿಸಲು ಸರ್ಕಾರ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಸರ್ಕಾರ ಇಂದು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್​ಪಿಜಿ ಉತ್ಪಾದನೆ ಹೆಚ್ಚಿಸಲು ಹಾಗೂ ಹೈಡ್ರೋಕಾರ್ಬನ್​ಗಳನ್ನು ಎಲ್​ಪಿಜಿ ಸಂಗ್ರಹಕ್ಕೆ ಸೇರಿಸುವಂತೆ ದೇಶದಲ್ಲಿರುವ ರಿಫೈನರಿಗಳು ಹಾಗೂ ಪೆಟ್ರೋಕೆಮಿಕನ್ ಘಟಕಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.

ಎಲ್​ಪಿಜಿ ಸರಬರಾಜು ಕುಂಠಿತವಾಗದಂತೆ ಎಚ್ಚರವಹಿಸಲು ನೈಸರ್ಗಿಕ ಅನಿಲವನ್ನು ಸಮರ್ಪಕವಾಗಿ ಬಳಸುವಂತಹ ವ್ಯವಸ್ಥೆಯನ್ನು ಎಸೆನ್ಷಿಯಲ್ ಕಮಾಡಿಟೀಸ್ ಆ್ಯಕ್ಟ್ ಮೂಲಕ ಮಾಡಲಾಗುತ್ತಿದೆ. ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಗೃಹಬಳಕೆಯ ಪಿಎನ್​ಜಿ (ಕೊಳವೆ ಅನಿಲ) ಮತ್ತು ವಾಹನ ಬಳಕೆಯ ಸಿಎನ್​ಜಿ ಅನಿಲಗಳ ಸರಬರಾಜು ನೂರಕ್ಕೆ ನೂರು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇತರ ಸರಕುಗಳಾದರೆ ಕಳೆದ ಆರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಸರಬರಾಜು ಮಿತಿ ಹಾಕಲಾಗುತ್ತದೆ.

ಇಂಡಿಯನ್ ಆಯಿಲ್, ಹೆಚ್​ಪಿ, ಬಿಪಿ ಇತ್ಯಾದಿ ಒಎಂಸಿಗಳು ಎಲ್​ಪಿಜಿ ಉತ್ಪಾದನೆ ಪ್ರಮಾಣ ಹೆಚ್ಚಿಸಿವೆ.

‘ಜಾಗತಿಕ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ತೈಲ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಎಲ್​ಪಿಜಿ ಲಭ್ಯತೆಯನ್ನು ಖಚಿತಪಡಿಸಲು ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ’ ಎಂದು ತೈಲ ಮಾರುಕಟ್ಟೆ ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಜಗತ್ತಿನ ಅರ್ಧಕ್ಕಿಂತ ಹೆಚ್ಚು ತೈಲ ಪೂರೈಕೆ ಮಾಡುವ ಪಶ್ಚಿಮ ಏಷ್ಯಾ ಭಾಗದಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಇದರಿಂದ ತೈಲ ಉತ್ಪಾದನೆ ನಿಂತು ಹೋಗಿರುವುದು ಮಾತ್ರವಲ್ಲ, ತೈಲ ಸಾಗಣೆಯೂ ಸ್ಥಗಿತಗೊಂಡಿದೆ. ಗಲ್ಫ್ ಪ್ರದೇಶದಿಂದ ತೈಲ ಸಾಗಣೆಯ ಹಾದಿಯಲ್ಲಿರುವ ಹಾರ್ಮುಜ್ ಜಲಸಂಧಿ ಸದ್ಯ ಬಹುತೇಕ ತಡೆ ಹೊಂದಿದೆ. ಇದರಿಂದಾಗಿ ಗಲ್ಫ್​ನಿಂದ ಯಾವ ತೈಲವೂ ಹೊರಬರಲು ಆಗುತ್ತಿಲ್ಲ. ಭಾರತದಲ್ಲಿ ಕಚ್ಚಾ ತೈಲದ ಸಂಗ್ರಹ ಉತ್ತಮ ಪ್ರಮಾಣದಲ್ಲಿದೆಯಾರೂ, ಎಲ್​ಪಿಜಿ, ಎಲ್​ಎನ್​ಜಿ ಇತ್ಯಾದಿ ಅನಿಲಗಳ ಕೊರತೆ ಎದುರಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

“ಅಲ್ಲಾನೇ ಸರ್ವೋಚ್ಚ, ವಂದೇ ಮಾತರಂ ಹಾಡಲ್ಲ”: ಸಂಚಲನ ಸೃಷ್ಟಿಸಿದ ಪಾಲಿಕೆಯ ಕಾಂಗ್ರೆಸ್ ಸದಸ್ಯರ ವರ್ತನೆ

ಮಧ್ಯಪ್ರದೇಶದ ಇಂದೋರ್ ನಗರ ಪಾಲಿಕೆಯಲ್ಲಿ ಬಜೆಟ್‌ಗೆ ಸಂಬಂಧಿಸಿದ ಚರ್ಚೆಯ ವೇಳೆ ರಾಷ್ಟ್ರೀಯ ಗೀತೆ…

ಮಧ್ಯಪ್ರಾಚ್ಯ ಉದ್ವಿಗ್ನತೆ : ಸಂಕಷ್ಟದಲ್ಲಿನ ಕನ್ನಡಿಗರ ನೆರವಿಗೆ ಉಡುಪಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

ಮಂಗಳೂರು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ಅಂತರಾಷ್ಟ್ರೀಯ…