Gl
ಟ್ರೆಂಡಿಂಗ್ ನ್ಯೂಸ್ವಿಶೇಷಸ್ಥಳೀಯ

ಮಗುವಿನ ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ವಿಷಕಾರಿ ಹಾವು! ಮಳೆಗಾಲದಲ್ಲಿ ಮನೆಗೆ ಹಾವು ಬರುತ್ತವೆಯೇ? ಗಾಬರಿ ಬೇಡ ಹೀಗೆ ಮಾಡಿ…

ಮಗುವೊಂದು ತನ್ನ ಕೋಣೆಗೆ ಮಲಗಲು ಹೋದಾಗ ವಿಚಿತ್ರವಾದ ಶಬ್ದ ಕೇಳಿಸಿದೆ. ಕೋಣೆಯೊಳಗೆ ಏನೋ ದೆವ್ವ ಇದೆ ಎಂದು ಅಳುತ್ತಾ ಮಗು ತನ್ನ ತಂದೆ ತಾಯಿಯ ಬಳಿಗೆ ಹೋಗಿ ಹೇಳಿಕೊಂಡಿದೆ. ಬೆಡ್‌ ರೂಂನಲ್ಲಿ ಲೈಟ್ ಹಾಕಿ ನೋಡಿದರೂ ಏನೋ ಕಾಣಿಸದೇ ಇದ್ದಾಗ ಮಗುವಿನ ಬೆಡ್ ಮೇಲೆ ಇಟ್ಟಿದ್ದ ಗೊಂಬೆಯ ಹಿಂಭಾಗದಲ್ಲಿ ಹಾವೊಂದು ಸುರುಳಿ ಹಾಕಿ ಬೆಚ್ಚಗೆ ಮಲಗಿದ್ದ ದೃಶ್ಯ ಕಂಡುಬಂದಿದೆ. ವಿಷಪೂರಿತ ಕಡು ಬಣ್ಣದ ಹಾವು ಕಂಡ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಗುವೊಂದು ತನ್ನ ಕೋಣೆಗೆ ಮಲಗಲು ಹೋದಾಗ ವಿಚಿತ್ರವಾದ ಶಬ್ದ ಕೇಳಿಸಿದೆ. ಕೋಣೆಯೊಳಗೆ ಏನೋ ದೆವ್ವ ಇದೆ ಎಂದು ಅಳುತ್ತಾ ಮಗು ತನ್ನ ತಂದೆ ತಾಯಿಯ ಬಳಿಗೆ ಹೋಗಿ ಹೇಳಿಕೊಂಡಿದೆ. ಬೆಡ್‌ ರೂಂನಲ್ಲಿ ಲೈಟ್ ಹಾಕಿ ನೋಡಿದರೂ ಏನೋ ಕಾಣಿಸದೇ ಇದ್ದಾಗ ಮಗುವಿನ ಬೆಡ್ ಮೇಲೆ ಇಟ್ಟಿದ್ದ ಗೊಂಬೆಯ ಹಿಂಭಾಗದಲ್ಲಿ ಹಾವೊಂದು ಸುರುಳಿ ಹಾಕಿ ಬೆಚ್ಚಗೆ ಮಲಗಿದ್ದ ದೃಶ್ಯ ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಕಂಡುಬಂದಿದೆ. ವಿಷಪೂರಿತ ಕಡು ಬಣ್ಣದ ಹಾವು ಕಂಡ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

rachana_rai
Pashupathi
akshaya college

ತಕ್ಷಣ ಸ್ಥಳೀಯ ಹಾವು ಹಿಡಿಯುವವರಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಕೆಂಪು-ಹೊಟ್ಟೆಯ ಕಪ್ಪು ಹಾವುಗಳು ಎಂದು ಕರೆಯಲ್ಪಡುವ ಈ ವಿಷಕಾರಿ ಹಾವುಗಳು ಆಸ್ಟ್ರೇಲಿಯಾದ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಅತ್ಯಂತ ವಿಷಕಾರಿ ಹಾವು ಎಂದು ಹೇಳಲಾಗುತ್ತದೆ.

pashupathi

ಈ ಹಾವುಗಳ ಕಡಿತದಿಂದ ಸಾಯುವವರ ಸಂಖ್ಯೆ ಕಡಿಮೆಯಾದರೂ, ಕಚ್ಚಿದರೆ, ಊತ, ಬೆವರು, ಮೂಳೆ ನೋವು, ವಾಂತಿ ಮತ್ತು ಭೇದಿ ಮುಂತಾದ ಲಕ್ಷಣಗಳು ಕಚ್ಚಿದ ಸ್ಥಳದಲ್ಲಿ ಕಂಡುಬರುತ್ತವೆ. ಇದಲ್ಲದೆ, ಅವರ ಕಡಿತದಿಂದ ಆಸ್ಟ್ರೇಲಿಯಾದಲ್ಲಿ ಅನೇಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಾವು ಹಿಡಿಯುವವರು ಸ್ಪಷ್ಟಪಡಿಸಿದ್ದಾರೆ.

ಹಾವು ಮನೆಗೆ ಬಂದಾಗ ಹೀಗೆ ಮಾಡಿ:

ಈಗ ಮಳೆಗಾಲ ಆಗಿರುವುದರಿಂದ ಹಾವುಗಳು ಭೂಮಿಯಿಂದ ಹೊರ ಬರುವುದು ಸಹಜ. ಇಂತಹ ಸಂದರ್ಭಗಳಲ್ಲಿ ಹಾವುಗಳು ನಿಮ್ಮ ಮನೆಯಂಗಳಕ್ಕೂ ಬರಬಹುದು. ಮನೆಯ ಒಳಗೂ ಬರಬಹುದು. ಈ ಸಮಯದಲ್ಲಿ ನೀವು ಏನು ಮಾಡಬಹುದು??

ನೀವು ಹಾವನ್ನು ನೋಡಿದರೆ, ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ. ಸಮಾಧಾನದಿಂದಿರಿ. ನಿಮ್ಮ ಹಿತ್ತಲಿನಲ್ಲಿ ಅಥವಾ ನಿಮ್ಮದೇ ಆದ ಕಾಲೋನಿಯಲ್ಲಿ ಹಾವನ್ನು ಕಂಡಾಗ, ಹಾವು ಹಿಡಿಯುವವರಿಗೆ ವಿಷಯ ಮುಟ್ಟಿಸಿ. ನಿಮ್ಮ ಅಕ್ಕಪಕ್ಕದ ಮನೆಗಳಲ್ಲಿ ಹಾವನ್ನು ನೋಡಿದರೆ, ಆಗಲೂ ತಜ್ಞರಿಗೆ ಕರೆ ಮಾಡಿ.

ಒಂದು ವೇಳೆ ನಿಮ್ಮ ಹಿತ್ತಲಿನಲ್ಲಿ ಅಥವಾ ನಿಮ್ಮ ಕೈತೋಟದಲ್ಲಿ ಹಾವು ಇದ್ದರೆ, ಅದರ ಬಗ್ಗೆ ಗಾಬರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ತಾನಾಗಿಯೇ ಹೊರಟು ಹೋಗುತ್ತದೆ. ಆದರೂ ಕೂಡ ಬೇರೆಯವರ ಸುರಕ್ಷತೆಯ ದೃಷ್ಟಿಯಿಂದ ನೀವು ಹಾವು ಹಿಡಿಯುವವರನ್ನು ತಕ್ಷಣವೇ ಫೋನ್ ಮಾಡಿ ಕರೆಸಿ.

ಫೋನ್ ನಂಬರ್

ಯಾವುದಕ್ಕೂ ಎಮರ್ಜೆನ್ಸಿ ಹಾಗೆ ನಿಮ್ಮ ಬಳಿ ಹಾವು ಹಿಡಿಯುವವರ ಫೋನ್ ನಂಬರ್ ಇದ್ದರೆ ಒಳ್ಳೆಯದು. ನಿಮ್ಮ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಥವಾ ಅಕ್ಕಪಕ್ಕದ ಊರುಗಳಲ್ಲಿ ಹಾವು ಹಿಡಿಯುವವರು ಇದ್ದರೆ, ತುಂಬಾ ಒಳ್ಳೆಯದು.

ಒಂದು ವೇಳೆ ಅಂತಹವರ ನಂಬರ್ ನಿಮ್ಮ ಬಳಿ ಇಲ್ಲದಿದ್ದರೆ, ನೀವು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಬಹುದು. ದೇವರು ನಿಮಗೆ ಖಂಡಿತವಾಗಿ ಹಾವು ಹಿಡಿಯುವವರ ಸಂಪರ್ಕ ಮಾಹಿತಿಯನ್ನು ನಿಮಗೆ ಕೊಡುವ ಮೂಲಕ ಸಹಾಯ ಮಾಡುತ್ತಾರೆ.

ಸಾಯಿಸಲು ಹೋಗಲೇ ಬೇಡಿ

ನಿಮಗೆ ಒಂದು ವೇಳೆ ಹಾವಿನ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ತಿಳಿದಿದೆ, ಎಂದರೆ ಅದರ ಬಣ್ಣ, ಉದ್ದ, ಅದು ಯಾವ ಪ್ರಕಾರದ ಹಾವು ಎಂಬ ಅನೇಕ ಮಾಹಿತಿಗಳನ್ನು ಹಾವು ಹಿಡಿಯುವವರು ಬರುವ ಮುಂಚೆ ಅವರಿಗೆ ನೀಡಿ.

ಹಾವು ಕಂಡ ತಕ್ಷಣವೇ ಅದನ್ನು ಸಾಯಿಸಿ ಬಿಡಬೇಕು ಎನ್ನುವ ಗೋಜಿಗೆ ಹೋಗಬೇಡಿ. ಏಕೆಂದರೆ ಅದು ಸುಖಾಸುಮ್ಮನೆ ಯಾರಿಗೂ ತೊಂದರೆ ಕೊಡುವುದಿಲ್ಲ. ಹಾವುಗಳು ಹೊರಗೆ ಬಂದಿವೆ ಎಂದರೆ, ಅವುಗಳು ಸುರಕ್ಷಿತವಾದ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿವೆ ಎಂದರ್ಥ. ಹಾಗಾಗಿ ಹಾವುಗಳನ್ನು ಸಾಯಿಸುವ ಆಲೋಚನೆ ಬೇಡ. ಒಂದು ವೇಳೆ ನಿಮ್ಮಿಂದ ತನಗೆ ತೊಂದರೆ ಆಗುತ್ತದೆ ಎಂದು ಹಾವಿಗೆ ತಿಳಿದರೆ ಆಗ ಅದು ನಿಮ್ಮನ್ನು ಕಚ್ಚುವ ಸಾಧ್ಯತೆ ಇರುತ್ತದೆ.

ಖಾಲಿ ಬಾಕ್ಸ್ ಇದ್ದರೆ…

ಒಂದು ವೇಳೆ ಮನೆಯಲ್ಲಿ ಹಾವು ಇದೆ ಎಂದು ಗೊತ್ತಾದರೆ, ಹಾವು ಹಿಡಿಯುವವರು ಬರುವವರೆಗೆ ಅದನ್ನು ಹಾಗೆ ಇರಲು ಬಿಡಿ. ಅಲ್ಲೂ ಸಹ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿ ಖಾಲಿ ಬಾಕ್ಸ್ ಗಳು ಇದ್ದರೆ, ಅವುಗಳನ್ನು ಹಾವು ಇದ್ದಂತಹ ಜಾಗದಲ್ಲಿ ಇರಿಸಬಹುದು.

ಇಲ್ಲವೆಂದರೆ ಗಾಢವಾದ ಬಣ್ಣ ಹೊಂದಿರುವ ಬಟ್ಟೆಯನ್ನು ಅದರ ಮೇಲೆ ಹಾಕಬಹುದು. ಆದರೆ ಕೋಲಿನಿಂದ ಹೊಡೆಯಲು ಹೋಗುವುದು ಅಥವಾ ಶಬ್ದ ಮಾಡುವುದು ಇತ್ಯಾದಿಗಳನ್ನು ಮಾಡಬೇಡಿ.

ಸ್ವಚ್ಛತೆ ಕಾಪಾಡಿ

ನೀವು ನಿಮ್ಮ ಹಿತ್ತಲಿನ ಜಾಗವನ್ನು ಸಂಪೂರ್ಣವಾಗಿ ಹಾವು ಬರದೇ ಇರುವ ಹಾಗೆ ಮಾಡಲು ಸಾಧ್ಯವೇ ಇಲ್ಲ. ಗುಂಪಾದ ಗಿಡಗಂಟಿಗಳು ಇದ್ದರೆ ಅಲ್ಲಿಗೆ ಹಾವುಗಳು ತಮ್ಮ ಆಹಾರ ಅರಸಿ ಬರುವುದು ಸಹಜ. ಹೀಗಾಗಿ ಸಾಧ್ಯವಾದಷ್ಟು ನಿಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ಟ್ರೈ ಮಾಡಿ.

ಸುರಕ್ಷತೆ ಬಹುಮುಖ್ಯ

ಈ ಮೇಲಿನ ರೀತಿ ನೀವು ಸಮಾಧಾನದಿಂದ ಇದ್ದು, ಹಾವಿನ ಉಪಟಳದಿಂದ ತಪ್ಪಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನೀವಾಗಿಯೇ ಹಾವು ಹಿಡಿಯುವ ಅಥವಾ ಕೈಯಿಂದ ಮುಟ್ಟುವ ನಿರ್ಧಾರ ತೆಗೆದುಕೊಳ್ಳಬೇಡಿ. ಹಾವಿಗೆ ಸಿಟ್ಟು ಬರುವ ರೀತಿ ಅದಕ್ಕೆ ತೊಂದರೆ ಕೊಡುವ ಯಾವುದೇ ವಿಧಾನಕ್ಕೂ ನೀವು ಕೈಹಾಕಬೇಡಿ. ಏಕೆಂದರೆ ನಿಮ್ಮ ಸುರಕ್ಷತೆ ನಿಮಗೆ ಬಹಳ ಮುಖ್ಯ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 105