ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಗೆ ‘Best Regional Jewellery Brand’ ಪ್ರಶಸ್ತಿ ಲಭಿಸಿದೆ. ಹೈದರಾಬಾದ್ನಲ್ಲಿ ನಡೆದ JewelZ – Business Exchange on Jewellery & Watches 2026 ಕಾರ್ಯಕ್ರಮದಲ್ಲಿ ಸಂಸ್ಥೆಗೆ ಈ ಗೌರವ ದೊರೆತಿದೆ.
Retailer Media ಹಾಗೂ Indian Retailer ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಪರವಾಗಿ ಈಶ್ವರ ಮುರಳಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಪರಿಗಣನೆಗಾಗಿ ಸಂಸ್ಥೆಯ ವತಿಯಿಂದ ಕೈಯಿಂದ ತಯಾರಿಸಲಾದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳನ್ನು ವಿಶೇಷವಾಗಿ ಪ್ರಸ್ತುತಪಡಿಸಲಾಗಿತ್ತು. ಸಾಂಪ್ರದಾಯಿಕ ಕರಿಮಣಿ ಆಭರಣದ ಸೊಗಡನ್ನು ಉಳಿಸಿಕೊಂಡು, ನಾಜೂಕಾದ ಕೈಚಳಕ, ವಿಭಿನ್ನ ವಿನ್ಯಾಸಗಳು ಹಾಗೂ ಸಮಕಾಲೀನ ಅಭಿರುಚಿಗೆ ತಕ್ಕ ಮಾದರಿಗಳನ್ನು ಪರಿಚಯಿಸಿರುವುದು ಈ ಪ್ರಸ್ತುತಿಯ ಪ್ರಮುಖ ಅಂಶವಾಗಿತ್ತು.
ವಿಭಿನ್ನ ವಿನ್ಯಾಸಗಳಲ್ಲಿ ಶಾರ್ಟ್ ಕರಿಮಣಿ
ಕರಿಮಣಿ ಸರವು ಭಾರತೀಯ ಆಭರಣ ಪರಂಪರೆಯಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಇಂದಿನ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ವಿನ್ಯಾಸಗಳಲ್ಲಿಯೂ ಲಭ್ಯವಾಗುತ್ತಿದೆ.
ಡಿ. ಶಿವ ಭಟ್ ಜ್ಯುವೆಲ್ಲರ್ಸ್ನಲ್ಲಿ ಸಾಂಪ್ರದಾಯಿಕ ಶೈಲಿಯಿಂದ ಹಿಡಿದು ಆಧುನಿಕ ವಿನ್ಯಾಸಗಳವರೆಗೆ ಕೈಯಿಂದ ತಯಾರಿಸಲಾದ ಹಲವು ಶಾರ್ಟ್ ಕರಿಮಣಿ ಸರಗಳ ಆಯ್ಕೆಯನ್ನು ನೀಡಲಾಗುತ್ತಿದೆ. ಮದುವೆ, ವಿಶೇಷ ಸಂದರ್ಭಗಳು ಹಾಗೂ ದೈನಂದಿನ ಧಾರಣೆಗೆ ಹೊಂದುವ ವಿನ್ಯಾಸಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
99 ವರ್ಷಗಳ ಪರಂಪರೆಗೆ ಮತ್ತೊಂದು ಗೌರವ
ಶತಮಾನದ ಪರಂಪರೆಯತ್ತ ಸಾಗುತ್ತಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ಗೆ ಈ ಪ್ರಶಸ್ತಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಕರಕುಶಲತೆಯನ್ನು ಉಳಿಸಿಕೊಂಡು, ಇಂದಿನ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಗಳನ್ನು ಪರಿಚಯಿಸುವ ಪ್ರಯತ್ನವನ್ನು ಸಂಸ್ಥೆ ಮುಂದುವರಿಸುತ್ತಿದೆ.
ಪ್ರಶಸ್ತಿ ಸ್ವೀಕರಿಸಿದ ಈಶ್ವರ ಮುರಳಿ ಮಾತನಾಡಿ, ಕೈಯಿಂದ ತಯಾರಿಸಲಾದ ಶಾರ್ಟ್ ಕರಿಮಣಿ ವಿನ್ಯಾಸಗಳ ವೈವಿಧ್ಯವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲು ಹೆಮ್ಮೆಯಾಗಿದೆ. ‘Best Regional Jewellery Brand’ ಗೌರವವು ಕರಕುಶಲಗಾರರ ಕೌಶಲ್ಯ, ತಂಡದ ಪರಿಶ್ರಮ ಹಾಗೂ 99 ವರ್ಷಗಳಿಂದ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟಿರುವ ಗ್ರಾಹಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಾಂಪ್ರದಾಯಿಕ ಆಭರಣದ ಮೌಲ್ಯವನ್ನು ಉಳಿಸಿಕೊಂಡು, ಆಧುನಿಕ ಗ್ರಾಹಕರಿಗೆ ಹೆಚ್ಚಿನ ವಿನ್ಯಾಸಗಳ ಆಯ್ಕೆಯನ್ನು ನೀಡುವ ಸಂಸ್ಥೆಯ ಪ್ರಯತ್ನಕ್ಕೆ ಈ ಗೌರವ ಮತ್ತೊಂದು ಮಾನ್ಯತೆ ದೊರೆತಂತಾಗಿದೆ.






















