ಪುತ್ತೂರು: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ರಜತ ಮಹೋತ್ಸವದ ಪ್ರಯುಕ್ತ ಕಲ್ಲರ್ಪೆಯ ಅಂಬಿಕಾ ರಮೇಶ್ ಅವರಿಗೆ ಪರ್ಪುಂಜ ಘಟಕ ಸಮಿತಿಯಲ್ಲಿ ಅ. 25ರಂದು ಸನ್ಮಾನಿಸಿ ಅಭಿನಂದಿಸಲಾಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿಕಾಸವಾಹಿನಿ ಸ್ವ-ಸಹಾಯ ಸಂಘದಿಂದ ಸಾಲ ಪಡೆದು ಸ್ವ ಉದ್ಯೋಗ ಮಾಡುತ್ತಿರುವವರಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಸೆಪ್ಟೆಂಬರ್ 20ರಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಘಟಕ ಸಮಿತಿಯಲ್ಲಿ ಅಭಿನಂದಿಸಲಾಗುತ್ತಿದೆ.
ಈ ಸಂದರ್ಭ ಕುಂಬ್ರ ವಲಯ ಸಂಯೋಜಕಿ ಜಯಂತಿ ಜಿ., ಪರ್ಪುಂಜ ಘಟಕ ಸಮಿತಿ ಅಧ್ಯಕ್ಷ ಬಾಬು, ಜೊತೆ ಕಾರ್ಯದರ್ಶಿ ಭಾಸ್ಕರ್, ಸೇವಾ ದೀಕ್ಷಿತ್ ಸುಲೋಚನಾ ಉಪಸ್ಥಿತರಿದ್ದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರತ್ನ ಸ್ವಾಗತಿಸಿ, ವಂದಿಸಿದರು. ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.






















