tamanvi
ಸ್ಥಳೀಯ

ಸಂಪ್ಯ: ನಿವೃತ್ತಿಗೊಂಡ ಎ.ಎಸ್.ಐ.ಗಳಾದ ಚಂದ್ರ, ಪರಮೇಶ್ವರ್ ಅವರಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೊಲೀಸ್ ಇಲಾಖೆಯಿಂದ ಸೇವಾ ನಿವೃತ್ತಿ ಪಡೆದ ಇಬ್ಬರು ಎ.ಎಸ್.ಐ.ಗಳಿಗೆ ಸಂಪ್ಯ ಕೊಲ್ಯದ ರವಿಚಂದ್ರ ಆಚಾರ್ಯ ಅವರ ಮನೆಯಲ್ಲಿ ಸನ್ಮಾನಿಸಿ, ಶುಭಕೋರಲಾಯಿತು.

ಪುತ್ತೂರು ನಗರ ಪೊಲೀಸ್ ಠಾಣೆಯಿಂದ ನಿವೃತ್ತಗೊಂಡ ಎ.ಎಸ್.ಐ. ಚಂದ್ರ ಮತ್ತು ಸಂಪ್ಯ ಪೊಲೀಸ್ ಠಾಣೆಯಿಂದ ನಿವೃತ್ತಗೊಂಡ ಎ.ಎಸ್.ಐ. ಪರಮೇಶ್ವರ್ ಹಾಗೂ ಅವರ ಪತ್ನಿ ಧನಲಕ್ಷ್ಮೀ ಆಜಡ್ಕ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

sampya

ಇದೇ ಸಂದರ್ಭ ಕಾವು ಹೇಮನಾಥ ಶೆಟ್ಟಿ ಹಾಗೂ ಅನಿತಾ ಹೇಮನಾಥ ಶೆಟ್ಟಿ ದಂಪತಿ ಆಗಮಿಸಿ, ಇಬ್ಬರು ಎ.ಎಸ್.ಐ. ಅವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.

ಸಂಪ್ಯ ಅಕ್ಷಯ ಜ್ಯುವೆಲ್ಲರ್ಸ್’ನ ಸುಬ್ರಾಯ ಆಚಾರ್ಯ ಆರ್ಯಾಪು, ರವಿಚಂದ್ರ ಆಚಾರ್ಯ ಸಂಪ್ಯ, ಆಶಾ ರವಿಚಂದ್ರ ಆಚಾರ್ಯ, ಅಕ್ಷಯ್, ಆಶ್ರಯ್, ಆದಿತ್ಯ, ಲತಾ ಶ್ರೀಧರ್ ಆಚಾರ್ಯ ಶಿವ ಜ್ಯುವೆಲ್ಲರ್ಸ್ ಕೋರ್ಟ್ ರಸ್ತೆ, ಹೆಡ್’ಕಾನ್ಸ್’ಟೇಬಲ್’ಗಳಾದ ಸುಬ್ರಹ್ಮಣ್ಯ, ಪ್ರವೀಣ್ ಶೆಟ್ಟಿ, ಬಬಿತ್ ಶೆಟ್ಟಿ, ಪ್ರವೀಣ್ ಗೌಡ, ಹರೀಶ್ ಪ್ಲಂಬರ್ ಮೊಟ್ಟೆತ್ತಡ್ಕ, ಗಣೇಶ್ ಆಚಾರ್ಯ ಕುಂಡಡ್ಕ, ವಿಶಾಲಾ ವಾಧಿರಾಜ ಆಚಾರ್ಯ ಕಾರ್ಕಳ ಬೈಲೂರು, ಸುಧಾಕರ್ ಆಚಾರ್ಯ ದೇವಕಜೆ ಅಕ್ಷಯ ಜ್ಯುವೆಲ್ಲರ್ಸ್ ಸಂಪ್ಯ, ಪ್ರದೀಪ್ ಆಚಾರ್ಯ ಕೊಲ್ಯ, ಶ್ವೇತಾ ಪ್ರದೀಪ್ ಆಚಾರ್ಯ, ಹರೀಶ್ ಆಚಾರ್ಯ ಅಕ್ಷಯ ಜ್ಯುವೆಲ್ಲರ್ಸ್ ಸಂಪ್ಯ, ತೃಪ್ತಿ ಜ್ಯುವೆಲ್ಲರ್ಸ್ ಮಾಲಕ ನಾಗೇಶ್ ಆಚಾರ್ಯ, ಗಾಯತ್ರಿ ಮ್ಯೂಸಿಕಲ್’ನ ಸುಶಾಂತ್ ಆಚಾರ್ಯ, ಸಂದೀಪ್ ಕೊಲ್ಯ, ಲಿಂಗಪ್ಪ ಗೌಡ ಕೊಲ್ಯ, ಶೀನಪ್ಪ ಗೌಡ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು. ಆರ್ಯಾಪು ಗ್ರಾಪಂ ಮಾಜಿ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 135