ಸ್ಥಳೀಯ

ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರ ಕಚೇರಿಗೆ ಇಬ್ಬರು ಅಪ್ತ ಸಹಾಯಕರ ನೇಮಕ..!!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು, ಆ. 2:ವಿಧಾನ ಪರಿಷತ್ ಸದಸ್ಯರಾದ ಕಿಶೋ‌ರ್ ಕುಮಾ‌ರ್ ಪುತ್ತೂರು ಅವರು ತಮ್ಮ ಆಡಳಿತಾತ್ಮಕ ಹಾಗೂ ಕ್ಷೇತ್ರ ಮಟ್ಟದ ಕಾರ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲೆಂದು, ಇಬ್ಬರು ಅನುಭವ ಸಂಪನ್ನ ವ್ಯಕ್ತಿಗಳನ್ನು ಸರ್ಕಾರಿ ಅಪ್ತ ಸಹಾಯಕರಾಗಿ (Personal Assistants) ನೇಮಕ ಮಾಡಿದ್ದಾರೆ.

chennai-shopping
maithri
  1. ಜಯಪ್ರಕಾಶ್ ಎಣ್ಣೆಮಜಲು (ಬೆಂಗಳೂರು): ಸುಳ್ಯ ಮೂಲದ ಜಯಪ್ರಕಾಶ್‌ ಎಣ್ಣೆಮಜಲು ಅವರು ಮಾಜಿ ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಅವರ ಆಪ್ತ ಸಹಾಯಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ. ಸರ್ಕಾರದ ಕಾರ್ಯವಿಧಾನ, ಇಲಾಖೆಗಳ ಸಂವಹನ ಹಾಗೂ ಕಚೇರಿ ನಿರ್ವಹಣೆಯಲ್ಲಿ ನಿಪುಣರಾಗಿರುವ ಅವರು ಇನ್ನು ಮುಂದೆ ಬೆಂಗಳೂರಿನಲ್ಲಿ ಲಭ್ಯರಾಗಿರುತ್ತಾರೆ.
  1. ಅವಿನಾಶ್ ಬಿ.ಆರ್. (ದಕ್ಷಿಣ ಕನ್ನಡ ಮತ್ತು ಉಡುಪಿ):

ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ್ದ ಅವಿನಾಶ್ ಬಿ.ಆರ್. ಅವರು ಸ್ಥಳೀಯ ಆಡಳಿತ, ಜಾಗೃತಿ ಕಾರ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಅನುಭವ ಹೊಂದಿದ್ದಾರೆ. ಮಂಗಳೂರು ಹಾಗೂ ಉಡುಪಿ ಪ್ರದೇಶಗಳಲ್ಲಿ ಇವರು ಲಭ್ಯವಿರುತ್ತಾರೆ.

ಕಿಶೋರ್ ಕುಮಾರ್ ಅವರಿಂದ ಅಥವಾ ಅವರ ಕಚೇರಿಯಿಂದ ನಿರ್ವಹಿಸಲ್ಪಡುವ ಯಾವುದೇ ಕೆಲಸಗಳಿಗಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಈ ಇಬ್ಬರನ್ನು ನೇರವಾಗಿ ಸಂಪರ್ಕಿಸಬಹುದು.

“ಇವರ ಸಹಕಾರದೊಂದಿಗೆ ನಾನು ಶಿಸ್ತುಬದ್ಧ, ಪರಿಣಾಮಕಾರಿ ಹಾಗೂ ಜನಪರ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದು ಶಾಸಕ ಕಿಶೋರ್ ಕುಮಾರ್ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…

1 of 122