Gl jewellers
ಸ್ಥಳೀಯ

ವಿವೇಕಾನಂದ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ, ಇಂಜಿನಿಯರ್ ಗೋಪಿನಾಥ್ ಶೆಟ್ಟಿ (60) ಅವರು ದಿಡೀರ್‌ ಅಸ್ವಸ್ಥಗೊಂಡು ಮಾ 13ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.

Pashupathi
Papemajalu garady
Karnapady garady

ಮೂಲತ: ವಿಟ್ಲದ ಪೆರುವಾಯಿಯವರಾದ ಗೋಪಿನಾಥ ಶೆಟ್ಟಿಯವರು, ಪ್ರಸ್ತುತ ನೆಹರೂ ನಗರದ ಬಲಮುರಿ ಗಣಪತಿ ದೇವಸ್ಥಾನದ ಬಳಿ ನಂದಿಲದಲ್ಲಿ ವಾಸಿಸುತ್ತಿದ್ದರು.

ರಾತ್ರಿ ಊಟ ಮಾಡಿ ಮಲಗಿದ ಅವರ ಆರೋಗ್ಯದಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ಏರು ಪೇರು ಉಂಟಾಗಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ನಿಧನ ಹೊಂದಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.

1986ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆರಂಭಗೊಂಡಿದ್ದು, 1987ರಲ್ಲಿ ಅದರ ಪ್ರಾಂಶುಪಾಲರಾಗಿ ಗೋಪಿನಾಥ್ ಶೆಟ್ಟಿಯವರು ನೇಮಕಗೊಂಡಿದ್ದರು. ಅದಾದ ಬಳಿಕ ಸುದೀರ್ಘ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರಲ್ಲಿ ನಿವೃತ್ತರಾಗಿದ್ದರು.

ಖ್ಯಾತ ಇಂಜಿನಿಯರ್ ಆಗಿದ್ದ ಇವರು ವಿವೇಕಾನಂದ ವಿದ್ಯಾಸಂಸ್ಥೆಗಳ ಸಹಿತ ಜಿಲ್ಲೆ ರಾಜ್ಯದಲ್ಲಿ ಸಾವಿರಾರು ಕಟ್ಟಡಗಳಿಗೆ ಇಂಜಿನಿಯರ್ ಪ್ಲಾನ್ ನೀಡಿದ್ದಾರೆ. ವಿವೇಕಾನಂದ ಇಂಜಿನಿಯರ್ ಕಾಲೇಜು ಇವರ ಪ್ಲಾನ್ ನಂತೆ ನಿರ್ಮಿಸಲಾಗಿದೆ. ನೂತನವಾಗಿ ಆರಂಭಗೊಂಡು ಪುತ್ತೂರಿನ ಮೊದಲ ಬಿ – ಫಾರ್ಮಾ ಕಾಲೇಜ್‌ ಆದ ವಿವೇಕಾನಂದ ಇನಿಸ್ಟಿಟ್ಯೂಟ್‌ ಆಫ್‌ ಫಾರ್ಮಸ್ಯೂಟಿಕಲ್‌ ಸೈನ್ಸ್‌ ನ ಅಧ್ಯಕ್ಷರಾಗಿ ಕಳೆದೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು , ಪ್ರಸ್ತುತ ಪುತ್ತೂರು ನಗರ ಸಹ ಸಂಘ ಚಾಲಕ್‌ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪುತ್ತೂರು ಭಾಗದ ಮೇಲುಸ್ತುವಾರಿಯಾಗಿದ್ದ ಅವರು ಈ ಭಾಗದಲ್ಲಿ ಹತ್ತು ಹಲವು ಜನೌಷಧಿ ಕೇಂದ್ರಗಳ ಆರಂಭಕ್ಕೆ ಕಾರಣಿಭೂತರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ , ಅಪಾರ ಶಿಷ್ಯವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರು ಪೇಟೆಯಲ್ಲಿ ನಂದಿ ರಥಯಾತ್ರೆ | ದೇಶಿ ನಂದಿಗೆ ಹಾರಾರ್ಪಣೆ, ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌,…

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ