ಸ್ಥಳೀಯ

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದ ಚಂದ್ರಹಾಸ ರೈ | ರೋಟರಿಯ ಉದ್ದೇಶ ಈಡೇರಲು ಕಾರ್ಯತತ್ಪರರಾಗಿ: ಡಾ. ಭಾಸ್ಕರ್ ಎಸ್.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಪದಸ್ವೀಕಾರ ಸಮಾರಂಭ ಮಂಗಳವಾರ ಸುದಾನ ವಸತಿಯುತ ಶಾಲಾ ಆವರಣದಲ್ಲಿರುವ ಎಡ್ವರ್ಡ್ ಹಾಲಿನಲ್ಲಿ ನಡೆಯಿತು.
ಪದಪ್ರದಾನ ನೆರವೇರಿಸಿ ಮಾತನಾಡಿದ 3180 ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ. ಭಾಸ್ಕರ್ ಎಸ್., ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದೇ ರೋಟರಿ. ನಮಗೆ ಸಿಕ್ಕಿದ ಜವಾಬ್ದಾರಿಯನ್ನು ಉತ್ತಮ ಉದ್ದೇಶಕ್ಕಾಗಿ ನಿಭಾಯಿಸುವುದರಿಂದ, ರೋಟರಿಯ ಉದ್ದೇಶ ಈಡೇರುತ್ತದೆ ಎಂದರು.
ರೋಟರಿ ಎಂದರೆ ವೈವಿಧ್ಯ. ಎಲ್ಲಾ ವೃತ್ತಿಯವರು ಇಲ್ಲಿರುತ್ತಾರೆ. ಇಲ್ಲಿ ಭೇದ ಭಾವವೂ ಇಲ್ಲ. ಎಲ್ಲರೂ ಒಂದೇ. ರೋಟರಿಗೆ ಸೇರ್ಪಡೆಯಾದ ಬಳಿಕ ಪ್ರತಿಯೊಬ್ಬರೂ ಮೌಲ್ಯಯುತ ಸದಸ್ಯರೇ. ಹಣ ಕೊಟ್ಟವನಿಗೆ ಹೆಚ್ಚು ಬೆಲೆ ಎಂದೇನಿಲ್ಲ. ನಾವು ನೀಡುವ ಹಣ ವಿಶ್ವದ ಉತ್ತಮ ಕಾರ್ಯಕ್ಕೆ ವಿನಿಯೋಗ ಆಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಹಾಗೆಯೇ ಇದು ಸದಸ್ಯತ್ವಕ್ಕೆ ಮಾತ್ರವಲ್ಲ. ನಾಯಕತ್ವ ಗುಣ ಬೆಳೆಸಿಕೊಳ್ಳಲು ಬಳಸಿಕೊಳ್ಳಬೇಕು ಎಂದರು.
ಚಂದ್ರಹಾಸ ರೈ ಅವರು ಜೇಸಿಐ ತರಬೇತುದಾರರೂ ಹೌದು. ಆದ್ದರಿಂದ ಕ್ಲಬ್ಬನ್ನು ಉಳಿಸುವುದು, ಬೆಳೆಸುವುದು ಅವರಿಗೆ ಗೊತ್ತಿದೆ. ಇಂದಿನ ಕಾರ್ಯಕ್ರಮ ಇಡೀಯ ವರ್ಷದ ದಿಕ್ಸೂಚಿಯಾಗಿ ಮೂಡಿಬಂದಿದೆ ಎಂದ ಅವರು ರೋಟರಿ ತಂಡಕ್ಕೆ ಶುಭಹಾರೈಸಿದರು.
ಪದ ಸ್ವೀಕಾರ ಮಾಡಿ ಮಾತನಾಡಿದ ಚಂದ್ರಹಾಸ ರೈ, ರೋಟರಿ ವರ್ಷವನ್ನು ಆನಂದಿಸಬೇಕು ಎನ್ನುವ ಆಶಯ ನನ್ನದು. ಇದಕ್ಕೆ ಪೂರಕವಾಗಿದೆ ಇಂದಿನ ಪದಸ್ವೀಕಾರ ಸಮಾರಂಭ ಆಯೋಜನೆಗೊಂಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಂತೆಯೇ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ತಾನು ಯಾವುದೇ ವಿಷಯಕ್ಕೂ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಬಂದಿಲ್ಲ. ಈ ಅಚ್ಚುಕಟ್ಟಿನ ಕಾರ್ಯಕ್ರಮಕ್ಕೆ ಕ್ಲಬ್ ಪದಾಧಿಕಾರಿ , ಸದಸ್ಯರೇ ಕಾರಣರು. ಇಡೀ ರೋಟರಿ ವರ್ಷವನ್ನು ಇದೇ ರೀತಿಯ ಒಗ್ಗಟ್ಟಿನಿಂದ ನಡೆಸಿಕೊಂಡು ಬರುತ್ತೇವೆ ಎಂದರು.
ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಪಿ. ರೋಟರಿಯ ಸೇವಾ ಭಾವನೆಯನ್ನು ಸದಸ್ಯರಿಗೆ ತಿಳಿಹೇಳಿ ಹೊಸಬರನ್ನು ಸೇರಿಸಿಕೊಳ್ಳಿ ಎಂದ ಅವರು, ಚಂದ್ರಹಾಸ ರೈ ಅವರು ಕಂಡ ಕನಸು ನನಸಾಗಲು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ಝೋನ್ 5ರ ಝೋನಲ್ ಲೆಫ್ಟಿನೆಂಟ್ ಉಮಾನಾಥ್ ಪಿ.ಬಿ., ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುಭಾಶ್ ರೈ ಬಿ. ಶುಭಹಾರೈಸಿದರು.
ಸನತ್ ರೈ, ದಿವಾಕರ್ ರೈ, ಡಾ. ರಾಜೇಶ್ ಬೆಜ್ಜಂಗಳ ಅವರು ಕ್ಲಬ್ ಸೇವಾ ಚಟುವಟಿಕೆಗಳನ್ನು ನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಅವರನ್ನು ಸನ್ಮಾನಿಸಲಾಯಿತು.
ದೀಪಿಕಾ ವಸಂತ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ವಸಂತ್ ಶಂಕರ್ ವರದಿ ವಾಚಿಸಿದರು. ಪದಪ್ರದಾನ ಅಧಿಕಾರಿಯವರ ಪರಿಚಯವನ್ನು ಡಾ. ರಾಜೇಶ್ ಬೆಜ್ಜಂಗಳ ಮುಖ್ಯ ಅತಿಥಿಗಳ ಪರಿಚಯವನ್ನು ಭಾರತಿ ಎಸ್. ಹಾಗೂ ಶಿವರಾಮ ಎಂ.ಎಸ್. ಸಭೆಯ ಮುಂದಿಟ್ಟರು. ಕ್ಲಬ್ ಗೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಪದ್ಮನಾಭ ಶೆಟ್ಟಿ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್. ವಂದಿಸಿದರು. ಡಾ. ರಾಮಚಂದ್ರ ಹಾಗೂ ಭಾರತಿ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 108