tamanvi
ಕರಾವಳಿಸ್ಥಳೀಯ

ವೃದ್ಧ ಮಾವನಿಗೆ ಮನಸೋ ಇಚ್ಛೆ ಥಳಿಸಿದ ಸೊಸೆ! | ಸರಕಾರಿ ಅಧಿಕಾರಿಯಿಂದ ಅಮಾನವೀಯ ಕೃತ್ಯ!!

ಈ ಸುದ್ದಿಯನ್ನು ಶೇರ್ ಮಾಡಿ

ವೃದ್ದ ಮಾವನಿಗೆ ಸೊಸೆಯೊಬ್ಬರು ಮನೆಯಲ್ಲಿ ಮನಸೋ ಇಚ್ಛೆ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಸೊಸೆಯ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
76 ವರ್ಷದ ಪದ್ಮನಾಭ ಸುವರ್ಣ ಹಲ್ಲೆಗೊಳಗಾದವರು. ಸೊಸೆ ಉಮಾ ಶಂಕರಿ ಅವರು ಹಲ್ಲೆ ಆರೋಪಿ.
ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಅವರು ವಾಕ್ ಸ್ಟಿಕ್ ನಲ್ಲಿ ಹಲ್ಲೆ ಮಾಡಿದ್ದಾರೆ. ಉಮಾಶಂಕರಿ ಅವರ ಪತಿ ಪ್ರೀತಂ ಸುವರ್ಣ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಮಾರ್ಚ್ 9ರಂದು ಘಟನೆ ನಡೆದಿದ್ದು, ಪ್ರೀತಂ ಸುವರ್ಣ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 185