Gl harusha
ರಾಜ್ಯ ವಾರ್ತೆ

ಡಿ 20, 21, 22: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ | ನಾಳೆ (ನ. 8)ರಂದು ಕನ್ನಡ ಜ್ಯೋತಿ ರಥಯಾತ್ರೆ ಪುತ್ತೂರಿಗೆ ಆಗಮನ

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮ್ಮೇಳನದಲ್ಲಿ ಕನ್ನಡ ಪ್ರೇಮಿಗಳು ಭಾಗಿಯಾಗುವ ಹಿನ್ನಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥ ನ. 8 ರಂದು ಶುಕ್ರವಾರ ಪುತ್ತೂರಿಗೆ ಆಗಮಿಸಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಡಿ. 20, 21, 22, ರಂದು ಮಂಡ್ಯದಲ್ಲಿ

srk ladders
Pashupathi
Muliya

ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮ್ಮೇಳನದಲ್ಲಿ ಕನ್ನಡ ಪ್ರೇಮಿಗಳು ಭಾಗಿಯಾಗುವ ಹಿನ್ನಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥ ನ. 8 ರಂದು ಶುಕ್ರವಾರ ಪುತ್ತೂರಿಗೆ ಆಗಮಿಸಲಿದೆ.

ಮಧ್ಯಾಹ್ನ 12 ಗಂಟೆಗೆ ಕಬಕ ವೃತ್ತದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಥವನ್ನು ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಂಚರಿಸಿ ಮುಖ್ಯ ರಸ್ತೆಯಾಗಿ ಶ್ರೀಧ‌ರ್ ಭಟ್ ಅಂಗಡಿಯಿಂದ ಆಡಳಿತ ಸೌಧಕ್ಕೆ ಮಧ್ಯಾಹ್ನ ಸುಮಾರು 12:30 ಕ್ಕೆ ತಲುಪಲಿದೆ. ಬಳಿಕ ಸಹಾಯಕ ಆಯುಕ್ತರು, ತಹಸಿಲ್ದಾರ್, ತಾಲೂಕ್ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಪೊಲೀಸ್ ಇಲಾಖೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಸಂಸ್ಥೆಗಳು, ಲಯನ್ಸ್, ಜೆ ಸಿ ಐ, ಇನ್ನರ್ವಿಲ್, ಹಾಗೂ ಇನ್ನಿತರ ಸಂಘ ಸಂಸ್ಥೆಗಳು, ಕನ್ನಡ ಪ್ರೇಮಿಗಳು ಸೇರಿ ರಥವನ್ನು ಸ್ವಾಗತಿಸಲಿದ್ದಾರೆ.

ಸಹಾಯಕ ಆಯುಕ್ತರು ಈ ರಥಕ್ಕೆ ಚಾಲನೆಯನ್ನು ನೀಡಲಿದ್ದು, ಬಳಿಕ ಕೋರ್ಟು ರಸ್ತೆಯಾಗಿ ಎಪಿಎಂಸಿ ರಸ್ತೆ ಮೂಲಕ ಬೆಳ್ತಂಗಡಿಗೆ ಈ ಕನ್ನಡ ರಥವನ್ನು ಬೀಳ್ಕೊಡಲಾಗುವುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts