tamanvi
ರಾಜ್ಯ ವಾರ್ತೆ

ಬಾಲಕನ ಮೇಲೆ ನಾಯಿ ದಾಳಿ: ಮಾಲಕನ ವಿರುದ್ಧ ಕೇಸ್!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬ್ರೆಡ್ ತರಲು ಹೋಗಿದ್ದ ಬಾಲಕನೊಬ್ಬನಿಗೆ ಸಾಕು ನಾಯಿಯೊಂದು ಕಚ್ಚಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಈ ಘಟನೆ ನಡೆದಿದೆ. ರಾಜಾಜಿನಗರದ 1ನೇ ಬ್ಲಾಕ್​ನಲ್ಲಿ ವಾಸವಿರುವ 11 ವರ್ಷದ ಬಾಲಕ ಬ್ರೆಡ್ ತರುವುದಕ್ಕಾಗಿ ಮನೆಯಿಂದ ಹೊರಹೋಗಿದ್ದ. ಸ್ವಲ್ಪ ದೂರ ಹೋಗ್ತಿದ್ದಂತೆ ರಸ್ತೆಯಲ್ಲಿ ತನ್ನ ಮಾಲೀಕರೊಂದಿಗೆ ವಾಕ್ ಮಾಡ್ತಿದ್ದ ಶ್ವಾನವೊಂದು ದಾಳಿ ಮಾಡಿದೆ. ಬಾಲಕನ ತೊಡೆಗೆ ನಾಯಿ ಕಚ್ಚಿ ಗಾಯಗೊಳಿಸಿದೆ.

ಘಟನೆ ಸಂಭವಿಸಿದರೂ ಶ್ವಾನದ ಮಾಲೀಕರು ಬಾಲಕನಿಗೆ ಚಿಕಿತ್ಸೆ ಕೂಡ ಕೊಡಿಸಿರಲಿಲ್ಲ‌. ಹೀಗಾಗಿ, ಕುಟುಂಬಸ್ಥರೇ ಚಿಕಿತ್ಸೆ ವೆಚ್ಚ ಭರಿಸಿದ್ದರು. ಇದೀಗ ಬಾಲಕನ ಪೋಷಕರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಯಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಿಯ ಮಾಲೀಕನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ

ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ…