ರಾಜ್ಯ ವಾರ್ತೆ

ಶಿರಾಡಿ ಘಾಟ್’ನಲ್ಲಿ ರೈಲ್ವೇ ವಿದ್ಯುತ್ ಕಾಮಗಾರಿ: ಹಗಲು ಓಡಾಟದ ರೈಲುಗಳ ರದ್ಧತಿ ವಿಸ್ತರಣೆ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ವಿಭಾಗದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿಗಾಗಿ ಡಿಸೆಂಬರ್ 15 ರವರೆಗೆ ಲೈನ್ ಬ್ಲಾಕ್ ವಿಧಿಸುವ ನೈರುತ್ಯ ರೈಲ್ವೆಯ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದಿಸಿದೆ. ಪರಿಣಾಮವಾಗಿ, ಹಲವಾರು ಹಗಲಿನ ರೈಲುಗಳ ರದ್ದತಿಯನ್ನು ವಿಸ್ತರಿಸಲಾಗಿದೆ.

core technologies

ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ರೈಲು ಡಿಸೆಂಬರ್ 13 ರವರೆಗೆ ರದ್ದಾಗಿದ್ದು, ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌-ಯಶವಂತಪುರ ಸಾಪ್ತಾಹಿಕ ರೈಲು ಡಿಸೆಂಬರ್ 14 ರವರೆಗೆ ರದ್ದಾಗಿದೆ. ರೈಲು ಸಂಖ್ಯೆ 16575 ರ ವಾರದಲ್ಲಿ ಮೂರು ದಿನ ಇರುವ ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್‌ ಡಿಸೆಂಬರ್ 14 ರವರೆಗೆ ರದ್ದಾಗಿದ್ದು, ರೈಲು ಸಂಖ್ಯೆ 16576ರ ವಾರದಲ್ಲಿ ಮೂರು ದಿನ ಇರುವ ಮಂಗಳೂರು ಜಂಕ್ಷನ್‌-ಯಶವಂತಪುರದ ಡಿಸೆಂಬರ್ 15 ರವರೆಗೆ ರದ್ದಾಗಿದೆ. 

akshaya college

ಅದೇ ರೀತಿ, ರೈಲು ಸಂಖ್ಯೆ 16515ರ ವಾರದಲ್ಲಿ ಮೂರು ದಿನ ಇರುವ ಯಶವಂತಪುರ – ಕಾರವಾರ ರೈಲು ಡಿಸೆಂಬರ್ 15 ರವರೆಗೆ ರದ್ದಾಗಲಿದ್ದು, ರೈಲು ಸಂಖ್ಯೆ 16516ರ ವಾರದಲ್ಲಿ ಮೂರು ದಿನ ಇರುವ ಕಾರವಾರ ಡಿಸೆಂಬರ್ 16 ರವರೆಗೆ ರದ್ದಾಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…