ವಿಶೇಷ

ದೇಶದ ಮೊದಲ ಗಾಜಿನ ಸೇತುವೆ ಲೋಕಾರ್ಪಣೆ!

ಕನ್ಯಾಕುಮಾರಿಯಲ್ಲಿ ನಿರ್ಮಿಸಿರುವ ದೇಶದ ಮೊದಲ ಗಾಜಿನ ಸೇತುವೆ (Glass Bridge In Kanyakumari) ಲೋಕಾರ್ಪಣೆಯಾಗಿದೆ. ಹೌದು, ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವ‌ರ್ ಪ್ರತಿಮೆಯನ್ನು ಸಂಪರ್ಕಿಸುವ 77 ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಘಾಟಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

Glass Bridge In Kanyakumari: ಕನ್ಯಾಕುಮಾರಿಯಲ್ಲಿ ನಿರ್ಮಿಸಿರುವ ದೇಶದ ಮೊದಲ ಗಾಜಿನ ಸೇತುವೆ (Glass Bridge In Kanyakumari) ಲೋಕಾರ್ಪಣೆಯಾಗಿದೆ.  ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವ‌ರ್ ಪ್ರತಿಮೆಯನ್ನು ಸಂಪರ್ಕಿಸುವ 77 ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಘಾಟಿಸಿದರು.(MK Stalin)

ಸುಮಾರು 37 ಕೋಟಿ ರು. ವೆಚ್ಚದಲ್ಲಿ ಈ ಗಾಜಿನ ಸೇತುವೆ ನಿರ್ಮಾಣವಾಗಿದ್ದು, ಪಾರದರ್ಶಕ ಗಾಜಿನ ಮೇಲ್ಫ್ ಹೊಂದಿದೆ. ತಿರುವಳ್ಳುವ‌ರ್ ಪ್ರತಿಮೆ ( Thiruvalluvar statue)ಅನಾವರಣದ ಬೆಳ್ಳಿ ಮಹೋತ್ಸವದಂದು ಸೇತುವೆ ಉದ್ಘಾಟನೆಯಾಗಿದೆ. ಇದು 77 ಮೀ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವ‌ರ್ ಪ್ರತಿಮೆಗೆ ಸಂಪರ್ಕ ಸಾಧಿಸಲಿದ್ದು, ದೇಶದ ಮೊದಲ ಗಾಜಿನ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದುವರೆಗೆ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವ‌ರ್ ಈ ಎರಡು ಸ್ಮಾರಕಗಳಿಗೆ ಭೇಟಿ ನೀಡಲು ಸಮುದ್ರದ ಮೂಲಕವೇ ತೆರಳಬೇಕಿತ್ತು. ಆದರೆ ಗಾಜಿನ ಸೇತುವೆ ಪ್ರವಾಸಿಗರಿಗೆ ಎರಡೂ ಸ್ಮಾರಕ ತಲುಪಲು ಹೊಸ ಮಾರ್ಗ ಕಲ್ಪಿಸಿದ್ದು, ಜೊತೆಗೆ ಪ್ರವಾಸದ ಹೊಸ ಅನುಭೂತಿ ನೀಡಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪಶುಪತಿ ಲೈಟ್ಸ್‌ನಲ್ಲಿ ‘ಗಾಳಿ–ಬೆಳಕು 2026’ ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ಮುಂಗಡ ಬುಕ್ಕಿಂಗ್‌ಗೂ ಭರ್ಜರಿ ಆಫರ್!

ಪುತ್ತೂರು: ಪುತ್ತೂರಿನ ಜಿಎಲ್ ಟ್ರೇಡ್ ಸೆಂಟರ್‌ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್,…

ಪುತ್ತೂರಿನ ಯುವ ಮಹಿಳಾ ನಾಯಕಿ ವಿದ್ಯಾ ಆರ್. ಗೌರಿಗೆ ಪ್ರತಿಷ್ಠಿತ ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಅವಾರ್ಡ್

ಪುತ್ತೂರು: ಪುತ್ತೂರಿನ ಪ್ರಭಾವಿ ಯುವ ಮಹಿಳಾ ನಾಯಕಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್.…

ಕಡಬ ಪಟ್ಟಣ ಪಂಚಾಯಿತಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಭೇಟಿ; ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ

ಕಡಬ : ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಕಡಬ ಪಟ್ಟಣ ಪಂಚಾಯಿತಿಗೆ…