Gl jewellers
ಧಾರ್ಮಿಕ

ಶ್ರೀನಿವಾಸ ಕಲ್ಯಾಣೋತ್ಸವ, 100 ಜೋಡಿಗಳಿಗೆ ಸಾಮೂಹಿಕ ವಿವಾಹ: ಸಿದ್ಧತೆ ಆರಂಭಿಸಿದ ಪುತ್ತಿಲ ಪರಿವಾರ |ಆರ್.ಎಸ್.ಎಸ್.ಗೆ ಶತಮಾನದ ಸಂಭ್ರಮ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹ | 3 ದಿನಗಳ ಅದ್ಧೂರಿ ಸಮಾರಂಭದ ಮಾಹಿತಿ ನೀಡಿದ ಅರುಣ್ ಕುಮಾರ್ ಪುತ್ತಿಲ

2025ರ ಡಿ. 27, 28, 29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹದ ಮಾಹಿತಿಯನ್ನು ಪುತ್ತಿಲ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ನೀಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 2025ರ ಡಿ. 27, 28, 29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹದ ಮಾಹಿತಿಯನ್ನು ಪುತ್ತಿಲ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ನೀಡಿದರು.

Pashupathi
Papemajalu garady
Karnapady garady

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರಿನಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. ಅದೇ ರೀತಿ ಈ ಬಾರಿಯೂ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ದಿನ ನಿಗದಿ ಮಾಡಲಾಗಿದೆ. 2025ರ ಡಿ. 27, 28ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರಗಲಿದ್ದು, 29ರಂದು ದೇವರ ಎದುರಿನಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ ಎಂದರು.

ಈ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ 100 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಬೇಕೆಂಬ ಸಂಕಲ್ಪ ನಮ್ಮದು. ನೂರು ಜೋಡಿಗಳಿಗೆ ವಿವಾಹ ನಡೆಸುವುದೆಂದರೆ ಸಣ್ಣ ವಿಷಯವಲ್ಲ ಎಂಬ ವಿಚಾರ ತಿಳಿದಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ಆಗಬಾರದು ಎಂಬ ಹಿನ್ನೆಲೆಯಲ್ಲಿ ಈಗಲೇ ಸಿದ್ಧತೆ ಆರಂಭಿಸಿದ್ದೇವೆ. ಕಚೇರಿಯನ್ನು ಆರಂಭಿಸಿದ್ದೇವೆ. ಈಗಲೇ 8 ಜೋಡಿಗಳಿಂದ ಅರ್ಜಿ ಬಂದಿದೆ. ವಿವಾಹದ ಅಪೇಕ್ಷಿಗಳು ಗ್ರಾಮ ಪಂಚಾಯತ್ ದೃಢೀಕರಣ ಪತ್ರ, ಮನೆ ವಿಳಾಸವಿರುವ ಗುರುತು ಪತ್ರ, ಎರಡೂ ಕಡೆಯ ಒಪ್ಪಿಗೆ ಪತ್ರದೊಂದಿಗೆ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಕರಿಮಣಿಯಿಂದ ಹಿಡಿದು ಮದುವೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ಟ್ರಸ್ಟ್’ನಿಂದಲೇ ನೀಡಲಾಗುವುದು. ಮದುವೆ ದಿನ ವರ – ವಧುವಿನ ಕಡೆಯವರು ಎಷ್ಟೇ ಜನ ಬಂದರೂ ಔತಣದ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.

ಗೋ ಶಾಲೆಗೆ ಗೋಮಾಳದ ಜಾಗಕ್ಕೆ ಮನವಿ:
ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಗೋಶಾಲೆ ನಿರ್ಮಾಣ ಮಾಡುವ ಕಾಯಕಕ್ಕೂ ಮುಂದಾಗಿದ್ದೇವೆ. ಇದಕ್ಕಾಗಿ ಮುಂಡೂರಿನಲ್ಲಿ ಗೋಮಾಳದ ಜಾಗ ನೋಡಲಾಗಿದೆ. ಈ ಜಾಗವನ್ನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಅವರಿಗೆ ಮನವಿ ನೀಡಲಾಗಿದೆ. ಸರಕಾರ ಜಾಗ ಮಂಜೂರು ಮಾಡಿದರೆ ಗೋಶಾಲೆ ನಿರ್ಮಾಣ ಮಾಡುತ್ತೇವೆ. ಇದರೊಂದಿಗೆ ವರ್ಷಪೂರ್ತಿ ಧರ್ಮ ಜಾಗೃತಿಯ ಕೆಲಸ ನಿರಂತರವಾಗಿ ನಡೆಯಲಿದೆ. ಎರಡು ಮನೆಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ಗಿರಿಜಾ ಕಲ್ಯಾಣ:
ಶ್ರೀನಿವಾಸ ಕಲ್ಯಾಣ ಮಾಡುವ ಸಂದರ್ಭ ಗಿರಿಜಾ ಕಲ್ಯಾಣ ಮಾಡಬೇಕೆಂಬ ಸಲಹೆ ಬಂದಿತ್ತು. ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣ ಮಾಡುವುದಾದರೆ ಮೂರು ವರ್ಷದ ನಂತರ ಆಲೋಚನೆ ಮಾಡಲಾಗುವುದು. ಈ ವರ್ಷದ ಶ್ರೀನಿವಾಸ ಕಲ್ಯಾಣದ ಸಮಿತಿಯನ್ನು ಮುಂದೆ ರಚಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಮಾಧ್ಯಮ ಸಂಚಾಲಕ ನವೀನ್ ರೈ ಪಂಜಳ, ಸದಸ್ಯ ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ…