ಧಾರ್ಮಿಕ

ಮಂಗಳೂರು ದಸರಾ: ನವದುರ್ಗೆ ಸಹಿತ ಶಾರದಾಮಾತೆಯ ಶೋಭಾಯಾತ್ರೆ, ಜಲಸ್ತಂಭನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ದಸರಾ ಮೆರವಣಿಗೆಗೆ ಕ್ಷೇತ್ರದ ದರ್ಬಾರು ಮಂಟಪದಿಂದ ಬುಧವಾರ ಆರಂಭಗೊಂಡು ನಗರ ಪ್ರದಕ್ಷಿಣೆಯೊಂದಿಗೆ ಕುದ್ರೋಳಿಯ ಕ್ಷೇತ್ರದಲ್ಲಿನ ಕೊಳದಲ್ಲಿ ದೇವರ ವಿಗ್ರಹಗಳನ್ನು ಜಲಸ್ರಂಭನಗೊಳಿಸುವ ಮೂಲಕ ಗುರುವಾರ ಅದ್ದೂರಿಯ ತೆರೆ ಕಂಡಿದೆ.

ಕ್ಷೇತ್ರದ ಅಭಿವೃದ್ಧಿಯ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಕಾರ್ಯ ಕ್ರಮಗಳ ನೇತೃತ್ವದಲ್ಲಿ ಮಂಗಳೂರು ದಸರಾ ಮೆರವಣಿಗೆಗೆ ಕ್ಷೇತ್ರದ ದರ್ಬಾರು ಮಂಟಪದಿಂದ ಬುಧವಾರ ಸಂಜೆ ಆರಂಭಗೊಂಡು ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ವಿಗ್ರಹಗಳಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಶೋಭಾಯಾತ್ರೆ ಕುದ್ರೋಳಿ ದೇವಸ್ಥಾನದ ದ್ವಾರ – ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ, ಲಾಲ್‌ಭಾಗ್ – ಬಳ್ಳಾಲ್ ಭಾಗ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ ವೃತ್ತ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಕಾರ್ ಸ್ಟ್ರೀಟ್- ನ್ಯೂಚಿತ್ರಾ ಜಂಕ್ಷನ್ – ಅಳಕೆ -ಕುದ್ರೋಳಿ ದ್ವಾರದ ಮೂಲಕ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಗುರುವಾರ ಮುಂಜಾನೆ ತಲುಪಿದೆ.

ನಗರದ ವಿವಿಧ ಕಡೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹುಲಿ ಕುಣಿತದ ತಂಡಗಳು,ಮೆರವಣಿಗೆಯಲ್ಲಿ ಭಾಗವಹಿಸಿದ ಟ್ಯಾಬ್ಲೋ ಗಳು ದಸರಾ ಮೆರವಣಿಗೆಯ ವಿಶೇಷ ಆಕರ್ಷಣೆ ಯಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…