tamanvi
ಧಾರ್ಮಿಕ

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

D_shiva_bhat
ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ. 14ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ. 24ರಂದು ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ನೆರವೇರಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಆಲಂಕಾರು: ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ. 14ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ. 24ರಂದು ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ನೆರವೇರಲಿದೆ.

ಮಾ. 14ರಂದು ಬೆಳಿಗ್ಗೆ 8ರಿಂದ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ, ಕಲಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ಅನ್ನಸಂತರ್ಪಣೆ ನಡೆದು, ರಾತ್ರಿ 7ಕ್ಕೆ ಧ್ವಜಾರೋಹಣ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ.

ಮಾ. 15ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ ನಡೆದು, ರಾತ್ರಿ 7ರಿಂದ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.

Sharavur Templeಮಾ. 16ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 5ರಿಂದ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7ರಿಂದ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8ರಿಂದ ಅರಸು ಉಳ್ಳಾಯ, ಮಹಿಷಂತಾಯ ಮತ್ತು ರಕ್ತೇಶ್ವರಿ ದೈವಗಳ ನೇಮೋತ್ಸವ ಜರಗಲಿದೆ.

ಮಾ. 17ರಂದು ಮಧ್ಯಾಹ್ನ 12ಸಕ್ಕೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 5ರಿಂದ ದೈವಗಳ ಭಂಡಾರ ತೆಗೆಯುವುದು, ಸಂಜೆ 6ರಿಂದ ಉಗ್ರಾಣ ಮುಹೂರ್ತ, ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9ರಿಂದ ಧೂಮಾವತಿ, ಬಂಟ ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ ನಡೆಯಲಿದೆ.

ಮಾ. 18ರಂದು ಬೆಳಿಗ್ಗೆ 7ಕ್ಕೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 6.30ರಿಂದ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.

ಮಾ. 19ರಂದು ಬೆಳಿಗ್ಗೆ 7ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 4.30ರಿಂದ ಬಲಿ ಹೊರಟು ಉತ್ಸವ, ಆಲಂಕಾರು ಪೇಟೆ ಸವಾರಿ, ಆಲಂಕಾರು ಸಾರ್ವಜನಿಕ ಕಟ್ಟೆಪೂಜೆಗಳು, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7ರಿಂದ ಆಲಂಕಾರು ಪೇಟೆಯಲ್ಲಿ ಪುತ್ತೂರು ಬಲ್ನಾಡು ಸಂಸಾರ ಕಲಾವಿದೆರ್ ಇವರಿಂದ ನಂಬಿಕೆದಾಯೆ ಭಕ್ತಿಪ್ರಧಾನ ಹಾಸ್ಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ದೇವರ ಸವಾರಿ ಉತ್ಸವದ ಜೊತೆಯಲ್ಲಿ ಶ್ರೀ ದುರ್ಗಾಂಬಾ ಅಲಂಕಾರ ಸಮಿತಿ ಹಾಗೂ ಶ್ರೀ ಕ್ಷೇತ್ರ ಶರವೂರು ಇವರ ಸಂಯೋಜನೆಯಲ್ಲಿ ಚಲನಚಿತ್ರ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಆರ್ಟ್ಸ್ ಬಳಗದ ಗಿರಿಧರ ಶೆಟ್ಟಿ ಬೆಳ್ತಂಗಡಿ ಇವರಿಂದ ಕೀಲು ಕುದುರೆ, ಅರಸು ನಾಟ್ಯ ಹಾಗೂ ಯಕ್ಷಗಾನ ಶೈಲಿಯ ಗಜಗಾತ್ರದ ಆಕರ್ಷಕ ಗೊಂಬೆಗಳ ಪ್ರದರ್ಶನ ನಡೆಯಲಿದೆ.

ಮಾ. 20ರಂದು ಬೆಳಿಗ್ಗೆ 7ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 6.30ರಿಂದ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.

ಮಾ. 21ರಂದು ಬೆಳಿಗ್ಗೆ 8.30ಕ್ಕೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಸವಾರಿ ಮಂಟಪ ಕಟ್ಟೆಪೂಜೆಗಳು, ಕೆರೆ ಉತ್ಸವ, ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಜರಗಲಿದೆ.

ಮಾ. 22ರಂದು ಬೆಳಿಗ್ಗೆ 6ಕ್ಕೆ ಬಲಿ ಹೊರಟು ಉತ್ಸವ, 10ಕ್ಕೆ ಆಶ್ಲೇಷ ಬಲಿ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ ಹಾಗೂ ರಾತ್ರಿ 9ರಿಂದ ಶ್ರೀ ಮಹಾರಥೋತ್ಸವ, ಉತ್ಸವ, ವಸಂತಕಟ್ಟೆಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಲಿದೆ.

ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 10ರಿಂದ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಮಂಗಳೂರು ಶ್ರೀ ಲಲಿತೆ ಕಲಾವಿದರ್ ಇವರಿಂದ ಶನಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಮಾ. 23ರಂದು ಬೆಳಿಗ್ಗೆ 8ರಿಂದ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, 10ರಿಂದ ಯಾತ್ರಾ ಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5ರಿಂದ ಅವಬೃತ ಮೆರವಣಿಗೆ, ಕಟ್ಟೆಪೂಜೆಗಳು, ಸನತಮೊಗರು ಕುಮಾರಧಾರೆಯಲ್ಲಿ ಅವಬೃತ, ಬಳಿಕ ಧ್ವಜಾವರೋಹಣ ನಡೆಯಲಿದೆ.

ಮಾ. 24ರಂದು ಬೆಳಿಗ್ಗೆ 9ರಿಂದ ಶರವೂರು ಸುಬ್ರಹ್ಮಣ್ಯ ರಾವ್ ಮತ್ತು ಮನೆಯವರಿಂದ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮ ನಡೆಯಲಿದೆ. ಮಧ್ಯಾಹ್ನ ಶರವೂರು, ರಾಮಕುಂಜ ಹಾಗೂ ಆಲಂಕಾರು ಅಯ್ಯಪ್ಪ ಭಕ್ತವೃಂದದಿಂದ ಗಂಜಿ ಊಟ ಸೇವೆ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts