ರಾಜಕೀಯ

ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ ಪಕ್ಷದ ಹುದ್ದೆಯಿಂದ ವಜಾ: ಕ್ರಮ ಕೈಗೊಂಡ ಡಿ.ಕೆ.ಶಿ.!!

GL

ಈ ಸುದ್ದಿಯನ್ನು ಶೇರ್ ಮಾಡಿ

ಕೆಪಿಸಿಸಿ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ನಿಕೇತ್ ರಾಜ್ ಮೌರ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಟಿ ಭಾವನಾ ರಾಮಣ್ಣ ಸೇರಿದಂತೆ 29 ಮಂದಿ ಪ್ರಧಾನ ಕಾರ್ಯದರ್ಶಿಗಳಿಗೆ ತಮ್ಮ ಹುದ್ದೆಯಿಂದ ಬಿಡುಗಡೆಗೊಳಿಸಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.

maithri

ಎಐಸಿಸಿ ಸೂಚನೆ ಮೇರೆಗೆ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಲಾಗಿದೆ.

ಮೇ 25ರಂದು ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಎಸ್‌ಐಆರ್‌ (SIR) ಕುರಿತು ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ.

ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ, ಬಾಬುರಾವ್‌ ಜಾಗಿರ್ದಾರ್‌, ಎಂ.ಸಿ .ವೇಣುಗೋಪಾಲ್ ಅವರನ್ನು ತೆಗೆದು ಹಾಕಲಾಗಿದೆ. ಪ್ರಧಾನ ಕಾರ್ಯದರ್ಶಿಗಳ ಪೈಕಿ ಎನ್.ಐ ಕೋಡಹಳ್ಳಿ, ಭಾವನಾ ರಾಮಣ್ಣ, ಕೆ.ಸಿ. ಪ್ರಭಾಕರ್‌ ರೆಡ್ಡಿ, ತಿಬ್ಬೇಗೌಡ, ಜುಲ್ಫಿಕರ್‌ ಅಹ್ಮದ್, ಶಂಕರ್‌ ದೊಡ್ಡಿ, ರೇಖಾ ಹುಲಿಯಪ್ಪ, ಎಚ್.ಎ. ಷಣ್ಮುಖಪ್ಪ, ಎಂ. ರಾಮಪ್ಪ, ವಡ್ನಾಳ್‌ ಜಗದೀಶ್, ಷಣ್ಮುಖಪ್ಪ ಶಿವಳ್ಳಿ, ಮಲ್ಲಿಕಾರ್ಜುನ ಅಕ್ಕಿ, ಸ್ವಾತಿ ಮಾಳಗಿ, ಅಲ್ತಾಫ್‌ ನವಾಜ್‌ ಕಿತ್ತೂರು, ನಾಗೇಶ್ವರರಾವ್‌, ರಮೇಶ್ ಮರಗೋಳು, ಚಂದ್ರಕಲಾ ಪ್ರಸನ್ನ, ಸಿ.ಆರ್‌. ಮನೋಹರ್‌, ಎಚ್‌.ಆರ್‌. ಶ್ರೀನಾಥ್‌, ಎಚ್. ತ್ಯಾಗರಾಜ್‌, ಎಲ್‌.ಪದ್ಮನಾಭ, ನಿಕೇತ್‌ ರಾಜ್‌ ಮೌರ್ಯ, ಸಿ.ಬಿ. ಶಶಿಧರ್, ವೆಂಕಟೇಶ್ ಹೆಗ್ಡೆ ಹೊಸಬಾಳೆ, ವಿ.ವೈ. ಘೋರ್ಪಡೆ, ಮಕ್ಬುಲ್‌ ಭಗವಾನ್‌, ಇಸ್ಮಾಯಿಲ್‌ ತಮಟಗರ್, ಬನ್ನಿಕೊಡ್, ಸಂಜಯ್‌ ಜಾಗಿರ್ದಾರ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts