tamanvi
ದೇಶ

ಆಪರೇಷನ್ ಸಿಂಧೂರ್’ಗೆ ಕರ್ನಾಟಕದ ಡ್ರೋನ್ ಬಳಕೆ! ಸ್ಕೈ ಸ್ಟ್ರೈಕರ್ ಹೆಸರಿನ ಸೂಸೈಡ್ ಡ್ರೋನ್’ಗಳು!

D_shiva_bhat
ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಬೆಂಗಳೂರಿನಲ್ಲಿ ತಯಾರಾದ ಡ್ರೋನ್ಗಳು ಬಳಕೆಯಾಗಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಬೆಂಗಳೂರಿನಲ್ಲಿ ತಯಾರಾದ ಡ್ರೋನ್ಗಳು ಬಳಕೆಯಾಗಿವೆ.

ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ ತಯಾರಿಸಿದ ಸೂಸೈಡ್ ಡ್ರೋನ್​ಗಳು ​ಮೇಕ್ ಇನ್ ಇಂಡಿಯಾ ಶಕ್ತಿ ಏನು ಎಂಬುವುದನ್ನು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿವೆ. ಸ್ಕೈ ಸ್ಟ್ರೈಕರ್ ಅಂತ ಕರೆಯುವ ಈ ಸೂಸೈಡ್ ಡ್ರೋನ್​ಗಳು ಉಗ್ರರನ್ನು ಸೆದೆಬಡಿದಿವೆ. ಈ ಸೂಸೈಡ್ ಡ್ರೋನ್​ಗಳು​ ಆಪರೇಷನ್ ಸಿಂದೂರ್​ನಲ್ಲಿ ತಮ್ಮ ಪವರ್ ತೋರಿಸಿವೆ.

ಸ್ಕೈ ಸ್ಟ್ರೈಕರ್ ಡ್ರೋನ್​ಗಳ ಶಕ್ತಿ-ಸಾಮರ್ಥ್ಯ ಕುರಿತು ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೀಫ್ ಆಫ್ ರೇಟಿಂಗ್ ಆಫೀಸರ್ ರಾಘವೇಂದ್ರ ಆರೂರ್ ಮಾತನಾಡಿ, ಈ ಡ್ರೋನ್​ಗಳು 100 ರಿಂದ 120 ಕಿಮೀವರೆಗೂ ಮೇಲೆ ಹೋಗಿ ಗಾಳಿಯಲ್ಲೇ ರೌಂಡ್ ಹೊಡೆಯುತ್ತವೆ. ಎದುರಾಳಿ ಪಡೆ ಕಂಡ ತಕ್ಷಣ ಟಾರ್ಗೆಟ್ ಫಿಕ್ಸ್ ಮಾಡಿಕೊಂಡು ಅಟ್ಯಾಕ್ ಮಾಡುತ್ತವೆ. ಸುಮಾರು 10 ಮೀಟರ್ ಸುತ್ತಮುತ್ತ ಡ್ಯಾಮೇಜ್ ಮಾಡುತ್ತವೆ. ಈ ಡ್ರೋನ್​ಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡಿದ್ದೇವೆ. ಇನ್ನೂ ಹೆಚ್ಚಿನ ಡ್ರೋನ್​ಗಳನ್ನು ಸರಬರಾಜು ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…