ವಿದೇಶ

ಮುರಿದುಬಿತ್ತು ಅಮೆರಿಕ – ಇರಾನ್ ಶಾಂತಿ ಒಪ್ಪಂದ’? ಇರಾನ್ ಮುಂದಿರುವುದು ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಲಿ ರಾಷ್ಟ್ರಗಳ ಯುದ್ಧ ಇಸ್ಲಾಮಾಬಾದ್ ಶಾಂತಿ ಒಪ್ಪಂದದಿಂದ ತಹಬದಿಗೆ ಬಂತು ಎಂದು ವಿಶ್ವವೇ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಒಪ್ಪಂದ ಮುರಿದುಬಿದ್ದಿದೆ. ಆದ್ದರಿಂದ ಅಮೆರಿಕ – ಇರಾನ್ ಯುದ್ಧ ಮತ್ತೆ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗಳು ಧುತ್ತೆಂದು ಮುಂದೆ ಬರುತ್ತಿದೆ.

maithri

ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು (ಜೂನ್ 19, 2026) ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಕೊನೆಕ್ಷಣದಲ್ಲಿ ಇರಾನ್ ಹಿಂದೆ ಸರಿದಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ ತೀವ್ರ ಜನಾಕ್ರೋಶ ವ್ಯಕ್ತವಾಗಬಹುದು ಎಂದು ತೀವ್ರಗಾಮಿಗಳು ಎಚ್ಚರಿಸಿದ ಹಿನ್ನೆಲೆಯೇ ಇರಾನ್ ನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇನ್ನೊಂದೆಡೆ ಶ್ವೇತಭವನ ಕೂಡ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಪ್ರಕಟಿಸಿದೆ.

ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಅಮೆರಿಕದ ಅಧಿಕಾರಿಗಳೊಂದಿಗೆ ಹಸ್ತಲಾಘವ ಮಾಡುವ ಅಥವಾ ಟಿವಿ ಕ್ಯಾಮೆರಾಗಳ ಮುಂದೆ ನಗುತ್ತಾ ನಿಲ್ಲುವ ಚಿತ್ರಗಳು ಹೊರಬಂದರೆ, ಅದು ಸಂಘರ್ಷದಲ್ಲಿ ಮಡಿದವರಿಗೆ ಮಾಡುವ ದ್ರೋಹ ಎಂದು ಇರಾನ್‌ನ ಜನ ಭಾವಿಸುತ್ತಾರೆ ಎಂದು ತೀವ್ರಗಾಮಿ ಬಣಗಳು ಎಚ್ಚರಿಸಿದ್ದವು. ಇರಾನಿಯನ್ನರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು ಸಾರ್ವಜನಿಕ ಸ್ನೇಹದ ಪ್ರದರ್ಶನವನ್ನಲ್ಲ ಎಂದು ಮೂಲಗಳು ತಿಳಿಸಿವೆ.

ಇರಾನ್ ಒಪ್ಪಂದದಿಂದ ಹಿಂದೆ ಸರಿಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿ ರಾತ್ರಿಯಿಡೀ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಹೆಜ್ಬೊಲ್ಲಾ ವರದಿ ಮಾಡಿದೆ.

ಸಾರ್ವಜನಿಕ ಸಮಾರಂಭ ರದ್ದಾಗಿದ್ದರೂ ಒಪ್ಪಂದ ಸಂಪೂರ್ಣ ಮುರಿದುಬಿದ್ದಿಲ್ಲ. ಇನ್ನು ಯಾವುದೇ ಉನ್ನತ ನಾಯಕರು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣಿಸುವುದಿಲ್ಲ. ಬದಲಿಗೆ ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ತಾಂತ್ರಿಕ ತಂಡಗಳು ಜ್ಯೂರಿಚ್‌ನಲ್ಲಿ ಬೀಡುಬಿಟ್ಟಿದ್ದು, ಮುಂದಿನ 60 ದಿನಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದದ ವಿವರಗಳನ್ನು ಸಿದ್ಧಪಡಿಸಲಿವೆ.

ಇರಾನ್‌ನ ಬಳಿ ಇನ್ನೂ ನೂರಾರು ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಇರುವುದರಿಂದ ಈ ಒಪ್ಪಂದ ಎಷ್ಟು ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಅಮೆರಿಕವು ಇರಾನ್ ಮೇಲಿನ ಕರಾವಳಿ ನೌಕಾ ದಿಗ್ಬಂಧನವನ್ನು ತೆಗೆದುಹಾಕುವ ಮೂಲಕ ಒಪ್ಪಂದದ ಮೊದಲ ಹೆಜ್ಜೆಯನ್ನು ಇಟ್ಟಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವೆನೆಜುವೆಲಾಕ್ಕೆ ಸ್ವಯಂಘೋಷಿತ ಅಧ್ಯಕ್ಷ! ಅಷ್ಟಕ್ಕೂ ಅಮೆರಿಕ ಅಧ್ಯಕ್ಷರಿಗೆ ಬೇಕಾಗಿರುವುದೇನು ಎಂದು ಪ್ರಶ್ನಿಸಿದ ನೆಟ್ಟಿಗರು!!

ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕ ಅಪಹರಿಸಿ ಬಂಧಿಸಿದ್ದೇ ವಿಶ್ವಕ್ಕೆ…

ಬೌದ್ಧ ಭಿಕ್ಷುಗಳ ಸನ್ಯಾಸ ಶೀಲ ಭಂಗ!! 80 ಸಾವಿರ ಫೋಟೋ, ವೀಡಿಯೋದೊಂದಿಗೆ ಸಿಕ್ಕಿ ಬಿದ್ದ ವಿಲವಾನ್ ಎಮ್ನಾವತ್!!

ಥಾಯ್ಲೆಂಡ್‌ನಲ್ಲಿ ಬೌದ್ಧ ಭಿಕ್ಷುಗಳನ್ನು ಲೈಂಗಿಕ ಸಂಬಂಧಕ್ಕೆ ಆಕರ್ಷಿಸಿ, ನಂತರ ದೋಷಾರೋಪಣೆ…