tamanvi
ಅಪರಾಧ

ಬಜಪೆ ಠಾಣೆಯ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ಸ್ ಅಮಾನತು, ಓರ್ವ ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಇನ್ಸ್’ಪೆಕ್ಟರ್ ಗಮನಕ್ಕೆ ತಾರದೇ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ ಇಬ್ಬರು ಪೊಲೀಸ್ ಕಾನ್ಸ್’ಟೇಬಲ್’ಗಳನ್ನು ಅಮಾನತು ಮಾಡಲಾಗಿದೆ.

ಬಜಪೆ ಪೊಲೀಸ್ ಠಾಣೆಯ ಮಂಜುನಾಥ್ , ಆಶಾ ಅಮಾನತು ಗೊಂಡ ಕಾನ್ ಸ್ಟೇಬಲ್ಸ್. ಪ್ರಕರಣದಲ್ಲಿ ಏಜೆಂಟ್ ಎಕ್ಕಾರಿನ ಭರತ್ ಎಂಬಾತನನ್ನ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಪಡೆಯುವ ನಿಟ್ಟಿನಲ್ಲಿ ಪೊಲೀಸ್ ಕ್ಲಿಯರೆನ್ಸ್ ಗಾಗಿ 33 ಮಂದಿ ಅರ್ಜಿ ಸಲ್ಲಿಸಿದ್ದರು. ಇನ್ಸ್ಪೆಕ್ಟರ್ ಮತ್ತು ಠಾಣಾ ಬರಹಗಾರರು ಪರಿಶೀಲನೆ ನಡೆಸಿದಾಗ 31 ಅರ್ಜಿಗಳು ನೇರವಾಗಿ ವಿಲೇವಾರಿ ಮಾಡಿರುವುದು ಪತ್ತೆಯಾಗಿದೆ. ಅರ್ಜಿಯನ್ನು ಇನ್ಸ್ ಪೆಕ್ಟರ್ ಗಮನಕ್ಕೆ ತಾರದೆ, ಇನ್ಸ್ ಪೆಕ್ಟರ್ ಕೆಜಿಐಡಿ ಮತ್ತು ಪಾಸ್ ವರ್ಡ್ ಬಳಸಿ ವಿಲೇವಾರಿ ಮಾಡಿದ್ದರು. ಇಬ್ಬರು ನೈಜ ಸ್ಥಳ ಪರಿಶೀಲನೆಯನ್ನು ನಡೆಸಿರಲಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಖಾಸಗಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿರುವ ಇನ್ನೋರ್ವ ಮಹಿಳೆ ವಿರುದ್ಧವೂ ಪ್ರಕರಣ ದಾಖಾಲಾಗಿದೆ. ಮಹಿಳೆ ಅರ್ಜಿದಾರರನ್ನು ಏಜೆಂಟ್ ಭರತ್ ಬಳಿ ಕಳುಹಿಸಿದ್ದ‌ಳು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 119