ವಿದೇಶ

ಆಪರೇಷನ್ ಸಿಂಧೂರ್: ಎದ್ದು ಬಿದ್ದು ಓಡಿ ಬಂದ ದೊಡ್ಡಣ್ಣನ ಹಿಂದಿದೆ ದೊಡ್ಡದೊಂದು ಕಥೆ! ಅಮೆರಿಕದ ಅಣು ಬಾಂಬಿನ ಸೀಕ್ರೇಟ್ ಬಿಚ್ಚಿಟ್ಟ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ಆಪರೇಷನ್ ಸಿಂಧೂರ ಇಡೀ ವಿಶ್ವದ ಗಮನ ಸೆಳೆದಿದೆ. ಇನ್ನೇನು ಯುದ್ಧ ನಡೆದೇ ಬಿಟ್ಟಿತ್ತು, ಪಾಕಿಸ್ತಾನ ಛಿದ್ರವಾಗೋಯ್ತು ಎನ್ನುವಷ್ಟರಲ್ಲಿ ಎಂದೂ ಮಧ್ಯಪ್ರವೇಶಿಸದ ಅಮೆರಿಕ ಶಾಂತಿ ಮಂತ್ರ ಪಠಿಸಿತ್ತು. ಯಾಕೆ ಗೊತ್ತೇ?

maithri

ಯಾವುದೇ ದೇಶದ ನಡುವೆ ಯುದ್ಧ ನಡೆದರೂ ಅಮೆರಿಕ ಮೂಗು ತೂರಿಸದು. ದೂರದಲ್ಲಿ ನಿಂತು ಚಂದ ನೋಡುತ್ತಾ, ಅದರ ಪ್ರಯೋಜನ ಪಡೆಯಲು ಹವಣಿಸುತ್ತಿರುತ್ತದೆ. ಚಿತೆಯ ಬೆಂಕಿಯಲ್ಲಿ ಸಿಗರೇಟ್ ಹಚ್ಚಿಕೊಂಡಂತೆ!!

ಆದರೆ ಈ ಬಾರಿ ಪಾಕ್ ವಿರುದ್ಧ ಭಾರತ ಆಪರೇಷನ್ ಸಿಂಧೂರ್ ಘೋಷಿಸಿಯೇ ಬಿಟ್ಟಿತು. ಪಾಕಿನ ಪ್ರಮುಖ ಉಗ್ರ ತಾಣಗಳನ್ನು ಪುಡಿಗೈದೇ ಬಿಟ್ಟಿತು. ಇನ್ನು ಮುಂದುವರಿಯಲು ಅಮೆರಿಕ ಅವಕಾಶವನ್ನೇ ನೀಡದೇ, ತಡೆದೇ ಬಿಟ್ಟಿತು. ಅಷ್ಟಕ್ಕೂ ಅಮೆರಿಕ ಅಷ್ಟು ಆತುರ ತೋರಲು ಕಾರಣವೂ ಇದೆ.

ಅಮೆರಿಕದ ಟಾಪ್ ಸೀಕ್ರೇಟ್ ಆಗಿರುವ ಪರಮಾಣು ಸಂಗ್ರಹ ಇರುವುದು ಪಾಕಿಸ್ತಾನದಲ್ಲಂತೆ. ಹೀಗೊಂದು ಟಾಪ್ ಸೀಕ್ರೆಟನ್ನು ಭಾರತದ ಸೈನ್ಯ ಹೊರಗೆಡವಿದೆ.

ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾಕ್ಕೂ ಈ ವಿಷಯ ಇದುವರೆಗೂ ತಿಳಿದಿರಲಿಲ್ಲವಂತೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ, ಚೀನಾವೂ ಪಾಕಿಸ್ತಾನದ ವಿಚಾರದಿಂದ ಹಿಂದೆ ಸರಿಯಿತು ಎಂಬ ವಿಶ್ಲೇಷಣೆಗಳು ಈಗ ಕೇಳಿಬರುತ್ತಿವೆ. ಅಂದ ಹಾಗೇ ಈ ಅಣುಬಾಂಬಿನ ದಾಸ್ತಾನನ್ನು ಪಾಕಿಸ್ತಾನದಲ್ಲೇ ಇಡಲು ಕಾರಣವೂ ಇದೆ. ಅದೇನೆಂದರೆ, ರಷ್ಯಾ ಹಾಗೂ ಚೀನಾವನ್ನು ಟಾರ್ಗೆಟ್ ಮಾಡಿರುವ ಅಮೆರಿಕ, ಪಾಕಿಸ್ತಾನವನ್ನು ಬಳಸಿಕೊಂಡಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿನಲ್ಲಿದ್ದ ಅಮೆರಿಕದ  ಅಣುಬಾಂಬ್ ಘಟಕಕ್ಕೂ ಹಾನಿಯಾಗಿದೆಯಂತೆ. ವಿಕಿರಣ ಸೋರಿಕೆ ಆಗುತ್ತಿದ್ದಂತೆ. ಇದೀಗ ಅಮೆರಿಕ, ತನ್ನ ತಜ್ಞರನ್ನು ಪಾಕಿಸ್ತಾನಕ್ಕೆ ಕಳುಹಿಸಿ – ವಿಕಿರಣ ಸೋರಿಕೆ ತಡೆಗಟ್ಟಲು ಆಗಬೇಕಾದ ಮುಂದಿನ ಕ್ರಮದತ್ತ ಚಿತ್ತ ಹರಿಸಿದೆ ಎಂದು ಹೇಳಲಾಗಿದೆ.

ಜೇಕಬಾಬಾದ್ – ಸರ್ಗೋದಾ ನೆಲೆ:

ಅಮೆರಿಕ ಅಣುಬಾಂಬ್ ದಾಸ್ತಾನು ಇಟ್ಟಿರುವ ಪಾಕಿನ ಪ್ರದೇಶಗಳೇ ಜೇಕಬಾಬಾದ್ ಹಾಗೂ ಸರ್ಗೋದಾ ನೆಲೆಗಳು. ಜೇಕಬಾಬಾದ್ ವಾಯುನೆಲೆಯು ಅಮೆರಿಕ ಮತ್ತು ನ್ಯಾಟೋ ಕಾರ್ಯಾಚರಣೆಯ ಪ್ರಮುಖ ಕೇಂದ್ರಗಳಲ್ಲಿ ಒಂದು. ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ಮಾಡಲು ಈ ನೆಲೆಯನ್ನು ಅಮೆರಿಕ ಉಪಯೋಗಿಸುತ್ತಿತ್ತು.

ಅಮೆರಿಕದ ಗುಟ್ಟು ಕಿರಾನ ಹಿಲ್ಸ್:

ಅಮೆರಿಕದ ಎಫ್ – 16 ಯುದ್ಧ ವಿಮಾನಗಳನ್ನು ಇಡಲಾಗಿರುವ ನೆಲೆಯೇ ಕಿರಾನ ಹಿಲ್ಸ್. ಇದು ಬಹಳ ಮಹತ್ವದ ನೆಲೆ ಎಂದು ಹೇಳಲಾಗಿದೆ. ಆಪರೇಷನ್ ಸಿಂಧೂರ್ ವೇಳೆ ಈ ನೆಲೆಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.

ಕಿರಾನ ಹಿಲ್ಸ್ ಮೇಲೆ ಘಾತವಾಗಿರುವುದು ಅಮೆರಿಕಕ್ಕೆ ಎರಡು ಆತಂಕ ತಂದಿದೆ. ಒಂದು, ತನ್ನ ರಹಸ್ಯ ಪರಮಾಣು ನೆಲೆ ಬಹಿರಂಗಗೊಳ್ಳುತ್ತದೆ. ಇನ್ನೊಂದು, ತನ್ನ ಶತ್ರುಗಳಾದ ಚೀನಾ ಮತ್ತು ರಷ್ಯಾ ಮುನ್ನೆಚ್ಚರಿಕೆಯ ಕ್ರಮಕ್ಕೆ ಮುಂದಾಗಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವೆನೆಜುವೆಲಾಕ್ಕೆ ಸ್ವಯಂಘೋಷಿತ ಅಧ್ಯಕ್ಷ! ಅಷ್ಟಕ್ಕೂ ಅಮೆರಿಕ ಅಧ್ಯಕ್ಷರಿಗೆ ಬೇಕಾಗಿರುವುದೇನು ಎಂದು ಪ್ರಶ್ನಿಸಿದ ನೆಟ್ಟಿಗರು!!

ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕ ಅಪಹರಿಸಿ ಬಂಧಿಸಿದ್ದೇ ವಿಶ್ವಕ್ಕೆ…

ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಚೀನಾ! ಫಹಲ್ಗಾಮ್ ದಾಳಿಯ ಹೊಣೆ ಹೊತ್ತ ಬೆನ್ನಲ್ಲೇ ಪಾಕ್ ಜೊತೆ ಚೀನಾ ಮಾತುಕತೆ!

ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ ಪಕ್ಕದ ರಾಷ್ಟ್ರ ಚೀನಾ, ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ.…