ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಏರ್‌ಮ್ಯಾನ್ ಗ್ರೂಪ್ ವೈ (ತಾಂತ್ರಿಕವಲ್ಲದ) (ಎ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು 10+2 ವಿದ್ಯಾರ್ಹತೆ ಹೊಂದಿದ ಅವಿವಾಹಿತ ಅಭ್ಯರ್ಥಿಯು 2004ರ ಜು. 3 ಮತ್ತು 2008 ರ ಜು. 3 ರ ನಡುವೆ ಜನಿಸಿರಬೇಕು. (ಬಿ) ವೈದ್ಯಕೀಯ ಸಹಾಯಕ ವೃತ್ತಿಗೆ ಡಿಪ್ಲೋಮಾದಲ್ಲಿ ಫಾರ್ಮಸಿ / ಬಿ.ಎಸ್ಪಿ ಆಗಿರುವ ಅವಿವಾಹಿತ ಅಭ್ಯರ್ಥಿಯು 2001 ರ ಜು. 03 ಮತ್ತು 2006 ರ ಜು. 03 ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿಯು 2001 ರ ಜು. 03 ಮತ್ತು 2004 ರ ಜು. 03 ನಡುವೆ ಜನಿಸಿರಬೇಕು.
ರ್ಯಾಲಿ ಕೇರಳ ಕೊಚ್ಚಿಯ ಎರ್ನಾಕುಲಂ ಪಿ.ಟಿ. ಉಷಾ ರಸ್ತೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಜ. 29 ರಿಂದ ಫೆ. 6ರ ವರೆಗೆ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ :
https://www.airmenselection.cdac.in
ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005ರ ಜ.1 ಮತ್ತು 2008ರ ಜುಲೈ 01 ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ :
https://agnipathvayu.cdac.in