ಉಪ್ಪಿನಂಗಡಿ: ಆರು ಬಾರಿ ಉಪ್ಪಿನಂಗಡಿ ಗ್ರಾ.ಪಂ.ನ ಸದಸ್ಯರಾಗಿದ್ದ ಇಲ್ಲಿನ ಹಳೆಗೇಟು ಬಳಿಯ ಕುಕ್ಕುಜೆ ನಿವಾಸಿ ಯು.ಕೆ. ಇಬ್ರಾಹೀಂ (68) ಹೃದಯಾಘಾತದಿಂದ ಮೇ 27ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಇಬ್ರಾಹೀಂ ಅವರು ಒಂದು ಅವಧಿಗೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ತತ್ತ್ವ ಸಿದ್ದಾಂತಗಳನ್ನು ಇವರ ರಕ್ತದಲ್ಲಿಯೇ ಇದ್ದುದ್ದರಿಂದ ಮಾಜಿ ಸಚಿವ ರಮಾನಾಥ ರೈ ಯವರು ಇವರನ್ನು `ಚೋರೆ ಕಾಂಗ್ರೆಸ್ ಇಬ್ರಾಹೀಂ’ ಎಂದೇ ಕರೆಯುತ್ತಿದ್ದರು.
ಮೊದಲಿಗೆ ಟೈಲರ್ ವೃತ್ತಿಯಲ್ಲಿ ಉಪ್ಪಿನಂಗಡಿಯಲ್ಲಿ ಜನಾನುಜನರಾಗಿದ್ದ ಇಬ್ರಾಹೀಂ ಅವರು ಬಳಿಕ ಫ್ಯಾನ್ಸಿ ಅಂಗಡಿಯನ್ನೂ ತೆರೆದಿದ್ದರು. ಬಳಿಕ ಅದೆಲ್ಲವನ್ನು ಬಿಟ್ಟು ಕೃಷಿಯೊಂದಿಗೆ ರಾಜಕೀಯವನ್ನೇ ಬದಕನ್ನಾಗಿಸಿಕೊಂಡಿದ್ದರು.
ಮೃತರು ಪತ್ನಿ, 2 ಪುತ್ರಿಯರು, 5 ಮಂದಿ ಪುತ್ರರನ್ನು ಅಗಲಿದ್ದಾರೆ.



















