ಪುತ್ತೂರು: ಕೂರ್ನಡ್ಕ ಮದಕದ ಆರಾಧ್ಯ ಲೇಔಟ್ ನಲ್ಲಿ ವಾಸವಾಗಿರುವ, ಮೂಲತಃ ನಿಡ್ಪಳ್ಳಿ ನಿವಾಸಿ ಭಾಸ್ಕರ ಆಚಾರ್ಯ (35 ವ.) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ನೆಲ್ಲಿಕಟ್ಟೆಯಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ಭಾಸ್ಕರ ಆಚಾರ್ಯ ನಿಡ್ಪಳ್ಳಿ ಅವರು, ಹಿಂದೂ ಜಾಗರಣಾ ವೇದಿಕೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಇಂದು ಬೆಳಿಗ್ಗೆ ಎದೆ ನೋವೆಂದು ಹೇಳಿದ್ದರಿಂದ ಪುತ್ತೂರು ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ರಕ್ಷಿತಾ, ತಾಯಿ ಸುನಂದಾ, ಓರ್ವ ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಅಂತಿಮ ವಿಧಿವಿಧಾನಗಳು ಜೂನ್ 1ರಂದು ಮಡಿವಾಳಕಟ್ಟೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.























