tamanvi
ಅಪಘಾತ

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಕಾರು: ಮಹಿಳಾ ಸಿಬ್ಬಂದಿ ಮೃತ್ಯು, ಇಬ್ಬರು ಗಂಭೀರ!!

D_shiva_bhat
ಅತೀ ವೇಗವಾಗಿ ಬಂದ ಎಸ್ ಯುವಿಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ: ಅತೀ ವೇಗವಾಗಿ ಬಂದ ಎಸ್ ಯುವಿಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು ಇಬ್ಬರು ಇನ್ಸ್‌ಪೆಕ್ಟರ್‌ಗಳು ಗಂಭೀರ ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್ ಪಥ್ ನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

maithri

ಬುಧವಾರ ತಡರಾತ್ರಿ 12:30 ರ ಸುಮಾರಿಗೆ ಈ ಘಟನೆ ನಡೆದಿದ್ದು ಈ ವೇಳೆ ಅಟಲ್ ಪಥ್ ನಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಹರಿದಿದೆ ಈ ವೇಳೆ ಮೂವರು ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳಾ ಕಾನ್ ಸ್ಟೇಬಲ್ ಕೋಮಲ್ ಕುಮಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ:

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು ಈ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಪೊಲೀಸರ ಮೇಲೆ ಹರಿದಿದೆ ಅಲ್ಲದೆ ಕೆಲ ಪೊಲೀಸ್‌ ಸಿಬ್ಬಂದಿಗಳು ಓಡಿ ಜೀವ ಉಳಿಸಿಕೊಂಡಿದ್ದಾರೆ ಘಟನೆ ದೃಶ್ಯ ಅಲ್ಲಿನ ಪೊಲೀಸರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದಾರೆ.

ಅಪಘಾತದ ವೇಳೆ ಕಾರಿನೊಳಗೆ ಇದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಅಲ್ಲದೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರಿನಲ್ಲಿ ಸ್ಕೂಟರ್ ಢಿಕ್ಕಿ: ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊಯಿಲ ಸೀತಾರಾಮ ಗೌಡ ಮೃತ್ಯು!!

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವರು ಬುಧವಾರ ಮಂಗಳೂರಿನ ಕೆಪಿಟಿ ಬಳಿ ಸಂಭವಿಸಿದ…