tamanvi
ಅಪರಾಧ

ಅಜ್ಜಿ ಮನೆಯಲ್ಲಿ ಮೊಮ್ಮಗನಿಂದ ಕಳ್ಳತನ!

D_shiva_bhat
ಆಟೋ ಖರೀದಿಸಲು ಅಜ್ಜಿ ಮನೆಯಿಂದಲೇ 10 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಮೊಮ್ಮಗ ಇದೀಗ ನಂದಿನಿ ಲೇಔಟ್‌ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಆಟೋ ಖರೀದಿಸಲು ಅಜ್ಜಿ ಮನೆಯಿಂದಲೇ 10 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಮೊಮ್ಮಗ ಇದೀಗ ನಂದಿನಿ ಲೇಔಟ್‌ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

maithri

ಸುಂಕದಕಟ್ಟೆಯ ಮಿಥುನ್‌ (23) ಬಂಧಿತ ಆರೋಪಿ. ಈತನಿಂದ 9.44 ಲಕ್ಷ ರೂ. ನಗದು ಹಾಗೂ  81 ಗ್ರಾಂ ಚಿನ್ನಾಭರಣಗಳನ್ನು ವಶಪಡಿ ಸಿಕೊಂಡಿದ್ದು, ಇದರ ಮೌಲ್ಯ 17.44 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಚಾಲಕನಾಗಿದ್ದ ಮಿಥುನ್‌ ಹೊಸ ಆಟೋ ರಿಕ್ಷಾ ಕೊಡಿಸುವಂತೆ ತನ್ನ ಅಜ್ಜಿ ನಂದಿನಿ ಲೇಔಟ್‌ನ ವಿಜಯಾನಂದ ನಗರದ ಪುಟ್ನಂಜಮ್ಮ ಬಳಿ ಕೇಳಿಕೊಂಡಿದ್ದ. ಇದಕ್ಕೆ ಅವರು ಒಪ್ಪಿರಲಿಲ್ಲ. ಪುಟ್ನಂಜಮ್ಮ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿ ಸ್ವಂತ ಊರಾದ ಅಮೃತ್ತೂರಿನ ಹೊಸಪಾಳ್ಯಕ್ಕೆ ಹಬ್ಬಕ್ಕೆಂದು ಹೋಗಿದ್ದರು.

ಆ ವೇಳೆ ಮಿಥುನ್‌ ನಕಲಿ ಕೀ ಬಳಸಿ ಬಾಗಿಲು ತೆಗೆದು 10 ಲಕ್ಷ ರೂ. ನಗದು ಹಾಗೂ ಸುಮಾರು 20 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನದ ಸರ, ಬಳೆಗಳನ್ನು ಕಳವು ಮಾಡಿದ್ದ. ನಂತರ ಯಶವಂತಪುರದ ಮತ್ತಿಕೆರೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಕದ್ದ ಚಿನ್ನಾಭರಣ ಮಾರಾಟ ಮಾಡಿದ್ದ. ಅದರಿಂದ ಬಂದ ಹಣವನ್ನು ಅಂದ್ರಹಳ್ಳಿಯಲ್ಲಿರುವ ತನ್ನ ಸ್ನೇಹಿತನಿಗೆ ಕೊಟ್ಟಿದ್ದ. 4 ದಿನಗಳ ನಂತರ ಊರಿನಿಂದ ಕುಟುಂಬದವರು ಮನೆಗೆ ವಾಪಸ್‌  ಬಂದಾಗ ಹಣ ಹಾಗೂ ಆಭರಣ ಕಳ್ಳತನವಾಗಿರುವುದು ಪತ್ತೆಯಾಗಿತ್ತು. ಪುಟ್ನಂಜಮ್ಮ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಪರಿಚಿತರೇ ಕಳ್ಳತನ ಮಾಡಿರುವ ಅನುಮಾನ ವ್ಯಕ್ತಪಡಿಸಿ, ಕುಟುಂಬ ಸದಸ್ಯರ ಸಂಬಂಧಿಕರನ್ನು ವಿಚಾರಣೆ ನಡೆಸಿದಾಗ ಮೊಮ್ಮಗ ಮಿಥುನ್‌ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117