ಸ್ಥಳೀಯ

ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಾಯುಪಡೆ ನಡೆಸಿತ್ತು ಲೇಸರ್‌ ಬಾಂಬ್‌ ದಾಳಿ, ರೋಮಾಂಚನಕಾರಿ ವಿಡಿಯೋ ವೈರಲ್

1999 ರ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್‌ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು 60 ದಿನಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ವಿಜಯವನ್ನು ಸಾಧಿಸಿತ್ತು. ಇದೀಗ 1999 ಜೂನ್‌ 24 ರಂದು ಭಾರತೀಯ ವಾಯಪಡೆ ಟೈಗರ್‌ ಹಿಲ್‌ ಮೇಲಿದ್ದ ಪಾಕಿಸ್ತಾನಿ ಸೇನಾ ಶಿಬಿರದ ಮೇಲೆ ಲೇಸರ್‌…

ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಯ ಅಪಹರಣ kidnap!

ಹಾಡಹಗಲೇ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅಪಹರಣ (Kidnap case ) ಆಗಿತ್ತು. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಸ್‌ಗಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಅಪಹರಣಕೋರರು ಅಪಹರಿಸಿದ್ದಾರೆ.

ಪ್ರೇಯಸಿ ಜತೆ ಪೊಲೀಸ್ ಪ್ರಣಯ ಪ್ರಸಂಗ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ

ಪ್ರೇಯಸಿ ಜತೆ ಇರುವಾಗಲೇ ಹೆಡ್ಕಾನ್ಸ್ಟೇಬಲ್ ಪತ್ನಿಯ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧ ಹೊರಗೆ ಬಂದಿದ್ದು, ಪತ್ನಿಯೇ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ.

ಶಿವಾನಂದಪ್ಪ ಬಿ. ಬಂಕೋಳ್ಳಿ ನಿಧನ

ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಬಾಲಪ್ರತಿಭೆಯಿಂದ ನ್ಯೂಯಾರ್ಕ್ ನ ಪ್ರತಿಷ್ಠಿತ ಕಾರ್ನಗಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮ

ನಗರದ ದಿ ಇಂಟರ್ ನ್ಯಾಷನಲ್ ಸ್ಕೂಲ್, ಬೆಂಗಳೂರು (ಟಿಐಎಸ್‌ಬಿ) ಇಲ್ಲಿನ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಪೊಲವರಪು ಸಾದ್ಯ ಅವರು ಜೂನ್ 23 ರಂದು ಅಮೆರಿಕಾದ ನ್ಯೂಯಾರ್ಕ್‌ನ ಕಾರ್ನೆಗೀ ಸಭಾಂಗಣದಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.

ಮಂಗಳೂರು ಕಾರಾಗೃಹಕ್ಕೆ ದಾಳಿ; ಮೊಬೈಲ್‌, ಗಾಂಜಾ, ಡ್ರಗ್ಸ್ ವಶ

ಮಂಗಳೂರು ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಅಯುಕ್ತ ಅನುಪಮ್ ಅಗ್ರವಾಲ್ ಆದೇಶದಂತೆ ಇಂದು ಮುಂಜಾವ ಸುಮಾರು 4 ಗಂಟೆಗೆ ದಾಳಿ‌ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು.‌

ಅಂಗನವಾಡಿಗೆ ಕನ್ನ: ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು!

ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.

ಗಂಗಾವಳಿ ನದಿಯಲ್ಲಿ ಮುಳುಗಿದ್ದ ಟ್ರಕ್ ಪತ್ತೆ ! ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿಕೆ!

ಗಂಗಾವಳಿ ನದಿಯಲ್ಲಿ ಪತ್ತೆಯಾದ ಲಾರಿ ಕೇರಳದ ಕೋಝಿಕ್ಕೋಡ್ ಮೂಲದ  ಅರ್ಜುನ್ ಎಂಬುವರಿಗೆ ಸೇರಿದ್ದು ಎಂದು  ಪೊಲೀಸರು ಬುಧವಾರ (ಜು.24ರಂದು) ಖಚಿತಪಡಿಸಿದ್ದಾರೆ.

ಶಿರೂರು: ಗಂಗಾವಳಿ ನದಿಯಲ್ಲಿ ಟ್ರಕ್ಕೊಂದು ಮುಳುಗಿರುವುದು ಖಚಿತ!

ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ಕೊಝಿಕ್ಕೋಡ್‌ ನಿವಾಸಿ ಅರ್ಜುನ್‌ ಅವರಿಗಾಗಿ ಶೋಧ ಮುಂದುವರಿದಿರುವ ನಡುವೆ ಟ್ರಕ್‌ ಒಂದು ಗಂಗಾವಳಿ ನದಿಯಲ್ಲಿ ಮುಳುಗಿರುವುದು ಖಚಿತವಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೇಳಿದೆ.