ಧಾರ್ಮಿಕ

ಹೆಗ್ಗಡೆಯವರನ್ನು ಭೇಟಿಯಾದ ಕನ್ಯಾಡಿ ಸ್ವಾಮೀಜಿ

ಉಜಿರೆ: ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಸೋಮವಾರ ಧರ್ಮಸ್ಥಳಕ್ಕೆ ಆಗಮಿಸಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಲಕ್ಷದೀಪೋತ್ಸವದ ಎಲ್ಲಾ ಕಾರ್ಯಕ್ರಮಗಳೂ ಸುಗಮವಾಗಿ…

ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಲಯ ಉದ್ಘಾಟನೆ | ಭಾರತ ದೇವಭೂಮಿ, ಬೆಳಕಿನ ದೇಶ: ಸೀತಾರಾಮ ಕೆದಿಲಾಯ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಲಯದ ಉದ್ಘಾಟನೆ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಆರ್.ಎಸ್.ಎಸ್.ನ ಹಿರಿಯ ಸ್ವಯಂ ಸೇವಕ…

ಧರ್ಮಸ್ಥಳ ಲಕ್ಷದೀಪೋತ್ಸವ: ಹೊಸಕಟ್ಟೆ ಉತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಡೆಯುತ್ತಿದ್ದು, ಶನಿವಾರ ರಾತ್ರಿ ಹೊಸಕಟ್ಟೆ ಉತ್ಸವ ನಡೆಯಿತು. ಸಾವಿರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಉತ್ಸವ ವೀಕ್ಷಿಸಿ, ದೇವರ ಪ್ರಸಾದ ಸ್ವೀಕರಿಸಿದರು.

ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರ ಪಾದಯಾತ್ರೆ | ಉಜಿರೆಯಲ್ಲಿ…

ಉಜಿರೆ: ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ…

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಸಿದ್ಧತೆ | ಪೂರ್ವಭಾವಿಯಾಗಿ ನವಂಬರ್…

ಪುತ್ತೂರು: ತಾಲೂಕಿನ ಕಾರಣಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಒಂದು ಮಂಡಲ ರಂಗಪೂಜೆ ನವಂಬರ್ 8ರಂದು ಸಂಜೆ ಆರಂಭಗೊಳ್ಳಲಿದೆ. ಒಂದು ಮಂಡಲ ಅಂದರೆ 48 ದಿನಗಳ ಪರ್ಯಂತ ರಂಗಪೂಜೆ ನಡೆದು, ಕೊನೆ…

ಜಿಲ್ಲೆಯ ಮೊದಲ ಜಾತ್ರೋತ್ಸವಕ್ಕೆ ಬೆಟ್ಟಂಪಾಡಿಯಲ್ಲಿ ಗೊನೆ ಮುಹೂರ್ತ

ನಿಡ್ಪಳ್ಳಿ; ಜಿಲ್ಲೆಯಲ್ಲಿ ವರ್ಷದ ಮೊದಲ ಜಾತ್ರೋತ್ಸವ ನಡೆಯುವ ಕ್ಷೇತ್ರ  ಎಂದು ಹೆಸರುವಾಸಿಯಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಅ.29 ರಂದು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.4 ರಿಂದ…

ಹಿಂದಾರು ಸಾಯಿ ಭಗವಾನ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ | ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ…

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ  ಪ್ರಯುಕ್ತ ಸಾಮೂಹಿಕ ಗೋಪೂಜಾ ಕಾರ್ಯಕ್ರಮ ಹಿಂದಾರು ಭಾಸ್ಕರ್ ಆಚಾರ್ ಅವರ ಸಾಯಿ ಭಗವಾನ್ ಗೋಶಾಲೆಯಲ್ಲಿ ಅ. 22ರಂದು ಬ್ರಾಹ್ಮೀ ಶುಭಮುಹೂರ್ತದಲ್ಲಿ ಅಭೂತಪೂರ್ವ, ಅವಿಸ್ಮರಣೀಯ ಹಾಗೂ…

ನಿಮ್ಮ ವ್ಯಕ್ತಿತ್ವವೇ ಹಾಸ್ಯಕ್ಕೆ ವಸ್ತು: ಮದ್ಯಪ್ರಿಯರಿಗೆ ಎಚ್ಚರಿಕೆ ನೀಡಿದ ವೀರೇಂದ್ರ ಹೆಗ್ಗಡೆ | ತೆಂಕಿಲ…

ಪುತ್ತೂರು: ಸಿನಿಮಾ, ನಾಟಕದ ಹಾಸ್ಯ ಸನ್ನಿವೇಶಗಳಿಗೆ ಕುಡುಕರ ಜೀವನವೇ ವಸ್ತು ಆಗುತ್ತಿದೆ. ಮದ್ಯಪ್ರಿಯರು ಇದನ್ನು ಗಮನಿಸಿ, ಮದ್ಯದಿಂದ ದೂರ ಇರಬೇಕು. ಇಲ್ಲದೇ ಹೋದರೆ, ನಾಳೆ ನೀವೂ ಹಾಸ್ಯಕ್ಕೆ ವಸ್ತು ಆಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ…

ಮಂಗಳೂರು ದಸರಾ ಶೋಭಾಯಾತ್ರೆ ಸಮಾರೋಪ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಗುರುವಾರ ಸಂಜೆ ಆರಂಭಗೊಂಡ ‘ಮಂಗಳೂರು ದಸರಾ’ಶೋಭಾಯಾತ್ರೆ ಶುಕ್ರವಾರ ಮುಂಜಾನೆ ಸಮಾಪನಗೊಂಡಿತು. ಗುರುವಾರ ಸಂಜೆ ಕುದ್ರೋಳಿಯಿಂದ ಶ್ರೀ ಶಾರದೆ ಶೋಭಾಯಾತ್ರೆಯಲ್ಲಿ ಹೊರಟಿದ್ದು, ಶುಕ್ರವಾರ ಮುಂಜಾನೆ ಕುದ್ರೋಳಿಗೆ ಆಗಮಿಸಿತು. ಬೆಳಗ್ಗೆ…

ಸಾಮೂಹಿಕ ಯೋಗ ದುರ್ಗಾ ನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ, ಅರ್ಚನೆ

ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಯೋಗ ಬಂಧುಗಳ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಮತ್ತು ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಅರ್ಚನೆಯ ಕಾರ್ಯಕ್ರಮ ಸೆ. 28ರಂದು ನಡೆಯಿತು.…